Advertisement

ಸ್ವಿಫ್ಟ್ ನ್ಯೂ ಟೇಸ್ಟ್‌

08:15 AM Feb 19, 2018 | |

ಈ ಹಿಂದಿನ ವೇರಿಯಂಟ್‌ಗಳಿಗೆ ಹೋಲಿಸಿದರೆ ಹಳೆಯ ಸ್ವಿಫ್ಟ್ಗಿಂತಲೂ ಉದ್ದದಲ್ಲಿ 100ಮಿ.ಮೀ. ಚಿಕ್ಕದು. ಅಗಲದಲ್ಲಿ 40ಮಿ.ಮೀ. ದೊಡ್ಡದಾಗಿದೆ. ಇನ್ನು ಎತ್ತರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

Advertisement

ಕಳೆದ ವಾರ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋ ಹೊಸ ಕಾರು, ಬೈಕ್‌, ಸ್ಕೂಟರ್‌ಗಳ ಅನಾವರಣಕ್ಕೆ ಉತ್ತಮ ವೇದಿಕೆಯಾಯಿತು. ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಗಟ್ಟಿಯಾಗಿ ತಳವೂರಿರುವ ಪ್ರತಿಷ್ಠಿತ ಕಂಪನಿಗಳು ಇದನ್ನು ತಮ್ಮ ಹೊಸ ಉತ್ಪಾದನೆಯ ವಾಹನಗಳ ಪ್ರಚಾರಕ್ಕೆ ಚೆನ್ನಾಗಿಯೇ ಉಪಯೋಗಿಸಿಕೊಂಡಿವೆ.

ಹಾಗೇ ಮಾರುತಿ ಸುಜುಕಿ ತನ್ನ ಜನಪ್ರಿಯ ಕಾರುಗಳಲ್ಲಿ ಒಂದಾದ ಸ್ವಿಫ್ಟ್ನ ಹೊಸ ಆವೃತ್ತಿಯನ್ನು ಇದೇ ವೇದಿಕೆಯಲ್ಲಿ ಪರಿಚಯಿಸಿದೆ. ಬಹುದಿನಗಳಿಂದ ನಿರೀಕ್ಷಿಸಲಾಗಿದ್ದ ನ್ಯೂ ಸ್ವಿಫ್ಟ್, ಹೊರ ನೋಟಕ್ಕೆ ಆಕರ್ಷಣೀಯವಾಗಿದೆ. ಹೊಸ ಜನರೇಷನ್‌ನ ಬೇಡಿಕೆಗಳಿಗೆ ತಕ್ಕಂತೆ ಒಂದಿಷ್ಟು ಬದಲಾವಣೆಗಳೊಂದಿಗೆ ಇದನ್ನು ಪರಿಚಯಿಸಲಾಗಿದೆ. ಅತ್ಯಂತ ಗಮನಾರ್ಹ ಅಂಶ ಏನೆಂದರೆ, ಓಪನ್‌ ಟಾಪ್‌ ಕಾರಾಗಿಯೂ ಬಳಸಿಕೊಳ್ಳಬಹುದಾಗಿದೆ.

ಎಕ್ಸ್‌ಟೀರಿಯರ್‌/ಇಂಟೀರಿಯರ್‌
ಕಾರಿನ ಹೊರ ಕವಚದಲ್ಲಿ ಆಗಿರುವ ಬದಲಾವಣೆ ತಕ್ಷಣಕ್ಕೆ ಬೇರೆಯದೇ ಆದ ಅನುಭವ ನೀಡುತ್ತದೆ. ಕಾರಿನ ಮುಂಭಾಗದ ವಿನ್ಯಾಸ ಹಳೆಯ ಸ್ವಿಫ್ಟ್ಗಿಂತಲೂ ಆಕರ್ಷಕ ಮತ್ತು ಸ್ಫೋರ್ಟೀವ್‌. ಹೆಡ್‌ಲ್ಯಾಂಪ್‌, ಫಾಗ್‌ ಲ್ಯಾಂಪ್‌ ವಿನ್ಯಾಸ ಬದಲಾಯಿಸಲಾಗಿದೆ. ಇದಕ್ಕೆ ಹೊಂದಿಕೊಳ್ಳುವಂತೆ ಗ್ರಿಲ್‌ ವಿನ್ಯಾಸವನ್ನೂ ಬದಲಾಯಿಸಲಾಗಿದೆ. ಗ್ರಿಲ್‌ನಲ್ಲಿನ ಷಡಾjಕೃತಿಯ ಜೋಡಣೆ ಮುಂಭಾಗದ ಲುಕ್‌ ಬದಲಾಯಿಸಿದೆ. ಹಾಗೇ ಹಿಂಭಾಗದ ವಿನ್ಯಾಸ ಕೂಡ ಬದಲಾಗಿದ್ದು, ಲ್ಯಾಂಪ್‌ ವಿನ್ಯಾಸ ಮತ್ತು ಬೂಟ್‌ ಸ್ಪೇಸ್‌ನ ಡೋರ್‌ ವಿನ್ಯಾಸದಲ್ಲಿಯೂ ಬದಲಾವಣೆ ಮಾಡಲಾಗಿದೆ.

ಈ ಹಿಂದಿನ ವೇರಿಯಂಟ್‌ಗಳಿಗೆ ಹೋಲಿಸಿದರೆ ಹಳೆಯ ಸ್ವಿಫ್ಟ್ಗಿಂತಲೂ ಉದ್ದದಲ್ಲಿ 100ಮಿ.ಮೀ. ಚಿಕ್ಕದು. ಅಗಲದಲ್ಲಿ 40ಮಿ.ಮೀ. ದೊಡ್ಡದಾಗಿದೆ. ಇನ್ನು ಎತ್ತರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಗ್ರೌಂಡ್‌ ಕ್ಲಿಯರೆನ್ಸ್‌ 7ಮಿ.ಮೀ.ನಷ್ಟು ಕಡಿಮೆ ಮಾಡಲಾಗಿದ್ದರೆ. ಬೂಟ್‌ ಸ್ಪೇಸ್‌ ಮೊದಲಿಗಿಂತ 58 ಲೀಟರ್‌ನಷ್ಟು ಹೆಚ್ಚಿಸಲಾಗಿದೆ.
ಡ್ಯಾಷ್‌ಬೋರ್ಡ್‌ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ತಂತ್ರಜ್ಞಾನ ಬಳಕೆಗಾಗಿಯೇ ಒಂದಿಷ್ಟು ಬದಲಾವಣೆ ಮಾಡಿಕೊಂಡಿರುವಂತೆ ಕಾಣಿಸುತ್ತದೆ. ಕಾರಿನ ಉದ್ದಳತೆಯಲ್ಲಿ ಭಾರೀ ಬದಲಾವಣೆ ಮಾಡಿರದ ಕಾರಣ ಲೆಗ್‌ರೂಂನಲ್ಲಿ ಗಮನಾರ್ಹ ಬದಲಾವಣೆ ಇಲ್ಲ. ಡ್ಯಾಷ್‌ಬೋರ್ಡ್‌ನಲ್ಲಿ ಬದಲಾವಣೆ ಆಗಿರುವ ಕಾರಣ ಗ್ಲೋವ್‌ ಬಾಕ್ಸ್‌ ಈ ಮೊದಲಿನಷ್ಟು ಸ್ಪೇಸಿಯಸ್‌ ಅನಿಸುವುದಿಲ್ಲ.

Advertisement

ಏನೇನಿದೆ ಹೊಸ ತಂತ್ರಜ್ಞಾನ?
ತಂತ್ರಜ್ಞಾನ ಬಳಕೆಯಲ್ಲಿ ಪ್ರಬಲ ಪೈಪೋಟಿ ಇರುವ ಹಿನ್ನೆಲೆಯಲ್ಲಿ ಒಂದಿಷ್ಟು ಹೊಸ ಅಳವಡಿಕೆ ಮಾಡಿರುವುದನ್ನು ಕಾಣಬಹುದು. ಎಂಜಿನ್‌ ಸ್ಟಾರ್ಟ್‌/ಆಫ್ಗೆ ಬಟನ್‌ ವ್ಯವಸ್ಥೆ ಮಾಡಲಾಗಿದೆ. ಸುಜುಕಿ ಉತ್ಪಾದನೆಯ 7 ಇಂಚು ಸುತ್ತಳತೆಯ ಸ್ಮಾರ್ಟ್‌ ಇನ್‌ಫೋಟೈನ್‌ಮೆಂಟ್‌ ವ್ಯವಸ್ಥೆ ಅಳವಡಿಸಲಾಗಿದೆ. ಅಂತೆಯೇ ಆಟೋ ಕ್ಲೈಮೇಟ್‌ ವ್ಯವಸ್ಥೆ ಅಳವಡಿಸಲಾಗಿದ್ದು, ಮ್ಯೂಸಿಕ್‌ ಸಿಸ್ಟಮ್‌ ಇನ್ನಷ್ಟು ಗುಣಮಟ್ಟದಿಂದ ಕೂಡಿದೆ. ಬ್ಲೂಟೂತ್‌, ಯುಎಸ್‌ಬಿಗೆ ಅವಕಾಶ ಇದ್ದು, ನೇವಿಗೇಷನ್‌ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ, ಪಾರ್ಕಿಂಗ್‌ಗೆ ಅನುಕೂಲವಾಗುವಂತೆ ಹಿಂಭಾಗದಲ್ಲಿ ಕ್ಯಾಮೆರಾ ಅಳವಡಿಸಲಾಗಿದ್ದು, ಇದರ ಚಿತ್ರಣವನ್ನು ಸ್ಕೀನ್‌ನಲ್ಲಿ ವೀಕ್ಷಿಸಲು ಸಾಧ್ಯ. 

ಸುರಕ್ಷತೆಗೆ ಏನೇನಿದೆ?
ಈ ಮೊದಲ ಸ್ವಿಫ್ಟ್ನಲ್ಲಿದ್ದ ಉಳಿದೆಲ್ಲಾ ಸುರಕ್ಷತಾ ವ್ಯವಸ್ಥೆ ಹೊಸ ಸ್ವಿಫ್ಟ್ನಲ್ಲಿಯೂ ಇದೆ. ಮುಂಭಾಗದಲ್ಲಿ ಎರಡು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್‌ ಬ್ರೇಕ್‌ಫೋರ್ಸ್‌ ಡಿಸ್ಟ್ರಿಬ್ಯೂಷನ್‌ (ಇಬಿಡಿ) ವ್ಯವಸ್ಥೆಯಿಂದ ಕೂಡಿದ ಆ್ಯಂಟಿ ಬ್ರೇಕಿಂಗ್‌ ವ್ಯವಸ್ಥೆ ಹೊಂದಿದೆ. ಬ್ರೇಕ್‌ ಅಸಿಸ್ಟ್‌ ಕೂಡ ಇದ್ದು, ರೋಡ್‌ ಗ್ರಿಪ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. 
ಎಂಜಿನ್‌ನಲ್ಲಿ ಬದಲಾವಣೆ ಇಲ್ಲ
ಎಂಜಿನ್‌ ಸಾಮರ್ಥ್ಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 1.2ಲೀ. ಪೆಟ್ರೋಲ್‌, 1.3ಲೀ. ಡೀಸೆಲ್‌ ಎಂಜಿನ್‌ ಅನ್ನೇ ಉಳಿಸಿಕೊಳ್ಳಲಾಗಿದೆ. ಒಂದು ವಿಶೇಷ ಏನೆಂದರೆ ಹೊಸ ಸ್ವಿಫ್ಟ್ನಲ್ಲಿ ಆಟೋಮೇಟಿಕ್‌ ಮ್ಯಾನ್ಯುವಲ್‌ ಟ್ರಾನ್ಸ್‌ಮಿಷನ್‌ (ಎಎಂಟಿ) ಪೆಟ್ರೋಲ್‌ ಮತ್ತು ಡೀಸೆಲ್‌ ಎರಡೂ ವರ್ಷನ್‌ಗಳಲ್ಲಿ ಲಭ್ಯ. 

ಎಕ್ಸ್‌ ಶೋ ರೂಂ ಬೆಲೆ: 4.80 ಲಕ್ಷ ರೂ. ನಿಂದ 7.47 ಲಕ್ಷ ರೂ.
ಮೈಲೇಜ್‌: ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ಗೆ 20 ರಿಂದ 25 ಕಿ.ಮೀ. 

ಹೈಲೈಟ್ಸ್‌
– ಭಾರ ಮೊದಲಿಗಿಂತ 85ಕೆ.ಜಿ.ಯಷ್ಟು ಕಡಿಮೆ
– ಬೆಲೆಯಲ್ಲಿ ಮೊದಲಿಗಿಂತ 20 ರಿಂದ 30 ಸಾವಿರ ರೂ. ಜಾಸ್ತಿ
– ಹುಂಡೈ ಎಲೈಟ್‌ ಐ20, ಗ್ರಾಂಡ್‌ ಐ10, ಡಾಟ್ಸನ್‌ ರೆಡಿಗೋ, ಹೋಂಡಾ ಡಬ್ಲ್ಯುಆರ್‌ವಿ, ರೆನೋ ಕ್ವಿಡ್‌ ಕಾರುಗಳಿಗೆ ನೇರ ಸ್ಪರ್ಧಿ
– ಒಟ್ಟು ಆರು ಬಣ್ಣಗಳಲ್ಲಿ ಲಭ್ಯ

ಗಣಪ‌ತಿ ಅಗ್ನಿಹೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next