ಶಾಸಕರಾಗಿರುವ ಪ್ರಿಯಾಂಕ್ ಖರ್ಗೆ ಮಂತ್ರಿ ಸ್ಥಾನ ಪಡೆದಿದ್ದರೆ ಜೇವರ್ಗಿಯಿಂದ ಎರಡನೇ ಸಲ ಶಾಸಕರಾಗಿರುವ ಡಾ|ಅಜಯಸಿಂಗ್ ಅವರಿಗೆ ಸಚಿವ ಸ್ಥಾನ ಕೈ ತಪ್ಪಿ ಹೋಗಿದೆ.
Advertisement
ಶಾಸಕರಾಗಿ ಆಯ್ಕೆಯಾದ ಮೊದಲ ಅವಧಿಯಲ್ಲಿಯೇ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಐಟಿಬಿಟಿ ಹಾಗೂ ಪ್ರವಾಸೋದ್ಯಮ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಈಗ ಎರಡನೇ ಬಾರಿಗೆ ಸಚಿವರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಯುವ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಖನೀಜಾ ಫಾತೀಮಾ, ಅಫಜಲಪುರ ಕ್ಷೇತ್ರದ ಹಿರಿಯ ಶಾಸಕ ಎಂ.ವೈ. ಪಾಟೀಲ ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಹೈದ್ರಾಬಾದ ಕರ್ನಾಟಕ ಭಾಗದಿಂದ ಮುಸ್ಲಿಂರೊಬ್ಬರಿಗೆ ಸಚಿವ ಸ್ಥಾನ ಸಿಗಬಹುದು ಎಂದು ನಿರೀಕ್ಷಿಸಿದ್ದರಿಂದ ಖನೀಜಾ ಅವರಿಗೆ ಸ್ಥಾನ ಸಿಗಬಹುದೆಂದು ಊಹಿಸಲಾಗಿತ್ತು. ತಪ್ಪಿದ ಮಂತ್ರಿಗಿರಿ: ಜೇವರ್ಗಿ ಶಾಸಕ ಡಾ| ಅಜಯಸಿಂಗ್ ಅವರಿಗೆ ಗಾಡ್‌ಫಾದರ್ ಇಲ್ಲದಿದ್ದಕ್ಕೆ ಸಚಿವ ಸ್ಥಾನ ಕೈ ತಪ್ಪಿತೇ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಜೇವರ್ಗಿ ಕ್ಷೇತ್ರದಲ್ಲಿ ಸಾವಿರಾರು ಜನರಿಗೆ ಆರೋಗ್ಯ ಭಾಗ್ಯ ಕಲ್ಪಿಸಿರುವ ಅಜಯಸಿಂಗ್ ಅವರಿಗೆ ಈ ಸಲ ಸಚಿವ ಸ್ಥಾನ ಅದರಲ್ಲೂ ಆರೋಗ್ಯ ಖಾತೆಯನ್ನೇ ನೀಡಬೇಕೆಂದು ಆಗ್ರಹಿಸಿದ್ದರು. ಆದರೆ ಮನವಿಗೆ ಸ್ಪಂದನೆ ಸಿಗದೆ ಇದ್ದುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
ಡಾ| ಅಜಯಸಿಂಗ್ ಬೆಂಬಲಿಗರು ತಮ್ಮ ನಾಯಕನಿಗೆ ಸಚಿವ ಸ್ಥಾನ ಸಿಗಬೇಕಿತ್ತು. ಪ್ರಭಾವಿ ವ್ಯಕ್ತಿಗಳ ಶಿಫಾರಸುಗಳಿಗೆ ಮಾತ್ರ ಮಣೆ ಹಾಕಿರುವುದನ್ನು ತಾವು ವಿರೋಧಿಸುತ್ತೇವೆ ಹಾಗೂ ಉಳಿದ ಸ್ಥಾನಗಳಲ್ಲಾದರೂ ಸ್ಥಾನ ಕಲ್ಪಿಸಿಕೊಡಬೇಕೆಂದು ಜಿಪಂ ಸದಸ್ಯ ಶಾಂತಪ್ಪ ಕೂಡಲಗಿ, ಕೆಡಿಪಿ ಸದಸ್ಯ ಶೌಕತ ಅಲಿ ಆಲೂರ, ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕುಂ ಪಟೇಲ್, ಅಯ್ಯಣ್ಣಗೌಡ ಪಾಟೀಲ, ಲಾಲಯ್ಯ ಗುತ್ತೇದಾರ ಆಗ್ರಹಿಸಿದ್ದಾರೆ. ಡಾ| ಅಜಯಸಿಂಗ್ ಹಾಗೂ ವಿಜಯಪುರ ಜಿಲ್ಲೆಯ ಎಂ.ಬಿ.ಪಾಟೀಲ ಅವರಿಗೆ ಸಚಿವ ಸ್ಥಾನ ನೀಡದೆ ಇದ್ದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಉಂಟಾಗುತ್ತದೆ ಎಂದು ಕಾಂಗ್ರೆಸ್ ಯುವ ಘಟಕದ ಭೀಮನಗೌಡ ಪರಗೊಂಡ, ಮಲ್ಲಿಕಾರ್ಜುನ ಬೂದಿಹಾಳ ತಿಳಿಸಿದ್ದಾರೆ.
Advertisement
ಸಂಭ್ರಮ: ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದರು. ಭೀಮು ಅಟ್ಟೂರ, ವಿರೇಶ ಕಾಬಾ, ಅಕ್ಷಯ ಬಬಲಾದ, ಕುಮಾರ ಹಿರೇಮಠ, ಚಂದು ನೇಲೂರ, ಪ್ರದೀಪ ಗೊಡಕೆ ಮುಂತಾದವರಿದ್ದರು. ಅದೇ ರೀತಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪ್ರಿಯಾಂಕ್ ಖರ್ಗೆ ಅವರ ಅಭಿಮಾನಿಗಳು ವಿವಿಧ ಸ್ಥಳಗಳಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ನಗರದ ಏಶಿಯನ್ ಮಾಲ್ ಹತ್ತಿರ ಈಶಾನ್ಯ ಪದವೀಧರರ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ಅಭ್ಯರ್ಥಿ ಚಂದ್ರಶೇಖರ ಪಾಟೀಲ ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದರು. ಕಲಬುರಗಿ-ಯಾದಗಿರಿ-ಬೀದರ್ ಹಾಲು ಉತ್ಪಾದಕರ ಹಾಲು ಒಕ್ಕೂಟದ ಅಧ್ಯಕ್ಷ ರೇವಣಸಿದ್ದಪ್ಪ ಪಾಟೀಲ, ಭೀಮರಾವ ಪಾಟೀಲ, ಪ್ರಕಾಶ ಕುಲಕರ್ಣಿ, ಉದಯಶೆಟ್ಟಿ, ಮಹೇಶ ವೀರಯ್ಯ ಸ್ವಾಮಿ, ಅಪ್ಪಾರಾವ ಸಾಹು, ಶಿವಶಂಕರ ಇಟಗಿ, ಸಂಗಪ್ಪ ಸಜ್ಜನಶೆಟ್ಟಿ, ಮಹೇಶ ಎಸ್.ಆರ್. ದೀಪಕ ಮಠಾಳೆ, ವಿಜಯಕುಮಾರ ದೇಶಮುಖ, ಶಾಮ ಗುತ್ತೇದಾರ, ಡಾ| ಹಾರಕೂಡ ಮುಂತಾದವರಿದ್ದರು. ಪ್ರತಿಭಟನೆ: ಡಾ| ಅಜಯಸಿಂಗ್ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ಪಕ್ಷದ ಮುಖಂಡರು- ಕಾರ್ಯಕರ್ತರು
ಹಾಗೂ ಅಭಿಮಾನಿಗಳು ಹಲವೆಡೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೇವರ್ಗಿ ಪಟ್ಟಣ, ಸೊನ್ನವಲ್ಲದೆ
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು ಪ್ರಿಯಾಂಕ್ ಬೆಂಬಲಿಗರ ಸಂಭ್ರಮ
ವಾಡಿ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಸಚಿವ ಸ್ಥಾನ ನೀಡಿದ್ದನ್ನು
ಸ್ವಾಗತಿಸಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಸಂಭ್ರಮಿಸಿದರು. ಪ್ರಿಯಾಂಕ್ ಖರ್ಗೆ ಸಚಿವರಾಗಿ
ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿ ಬಳಿ ಜಮಾಯಿಸಿದ ಕಾಂಗ್ರೆಸ್ ನಾಯಕರು, ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.
ಪುರಸಭೆ ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ
ಸೈದಾಪುರ, ಪುರಸಭೆ ಸದಸ್ಯ ದೇವಿಂದ್ರ ಕರದಳ್ಳಿ, ತಿಮ್ಮಯ್ಯ ಪವಾರ, ಮಾಜಿ ಪುರಸಭೆ ಸದಸ್ಯ ಚಾಂದ್ ಮಿಯ್ನಾ, ಕಾಂಗ್ರೆಸ್ ಮುಖಂಡರಾದ ಬಾಬುಮಿಯ್ನಾ, ಇಂದ್ರಜೀತ ಸಿಂಗೆ, ವಿಜಯಕುಮಾರ ಸಿಂಗೆ, ನಾಗೇಂದ್ರ
ಜೈಗಂಗಾ, ಆನಂದ ಬಡಿಗೇರ, ರಾಜಾಪಟೇಲ, ಗೌತಮ ಬೇಡೇಕರ, ಪ್ರದೀಪ ಸಿಂಗೆ ಮತ್ತಿತರರು ಇದ್ದರು.
ಭುಗಿಲೆದ್ದ ಆಕ್ರೋಶ-ಟೈರ್‌ಗಳಿಗೆ ಬೆಂಕಿ
ಜೇವರ್ಗಿ: ಶಾಸಕ ಡಾ| ಅಜಯಸಿಂಗ್ ಅವರಿಗೆ ಸಚಿವ ಸ್ಥಾನ ನೀಡದೇ ಇದ್ದುದಕ್ಕೆ ಹೈದ್ರಬಾದ ಕರ್ನಾಟಕ ಜನತೆಗೆ ನಿರಾಸೆ ಉಂಟಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಪ್ರತಿಭಟನೆ ನಡೆಸಿದರು. ಜೇವರ್ಗಿ ಪಟ್ಟಣ, ಸೊನ್ನ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 218 ಬಂದ್ ಮಾಡಿ, ಯಡ್ರಾಮಿ, ನಾಗರಹಳ್ಳಿ ಕ್ರಾಸ್‌ನಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಟೈರ್‌ಗಳಿಗೆ ಬೆಂಕಿ ಹಚ್ಚಿದರು. ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ತಾಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಬೂದಿಹಾಳ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎನ್.ಧರಂಸಿಂಗ್ ಅವರ ಪುತ್ರರಾಗಿರುವ ಶಾಸಕ ಡಾ| ಅಜಯಸಿಂಗ್ ಎರಡು ಬಾರಿ ಗೆದ್ದಿದ್ದಾರೆ. ಕಳೆದ ಅವಧಿಯಲ್ಲಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ನೂರಾರು ಕೋಟಿ ರೂ.ಅನುದಾನ ತರುವ ಜೊತೆಗೆ ಎಲ್ಲ ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರಿಗೆ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಉನ್ನತ ಸಚಿವ ಸ್ಥಾನ ನೀಡಿ ರಾಜ್ಯದ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಬೇಕಿತ್ತು ಎಂದು ಹೇಳಿದರು. ಸಚಿವ ಸ್ಥಾನ ನೀಡದೇ ಇದ್ದರೆ ಬರುವ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಟಿಎಪಿಸಿಎಂ ನಿರ್ದೇಶಕ, ಕಾಂಗ್ರೆಸ್ ವಕ್ತಾರ ಮಹಿಮೂದ್ ನೂರಿ, ಅಬ್ದುಲ್ ರಹೆಮಾನ್ ಪಟೇಲ, ಶರಣು ಗುತ್ತೇದಾರ, ಸಂತೋಷ ಬಿರಾಳ, ರವಿ ಕೋಳಕೂರ, ಮರೆಪ್ಪ ಸರಡಗಿ, ಮರೆಪ್ಪ ಕೋಬಾಳಕರ್, ಮಲ್ಲಿಕಾರ್ಜುನ ದಿನ್ನಿ, ಅಜ್ಜು ಲಕತಿ, ಪ್ರಕಾಶ ಫುಲಾರೆ, ಮಂಜುನಾಥ ಪ್ರಭಾಕರ, ಬಸವರಾಜ ಲಾಡಿ, ಶ್ರೀಮಂತ ಧನಕರ್, ಸುಧೀಂದ್ರ ವಕೀಲ, ರಾಯಪ್ಪ ಬಾರಿಗಿಡ, ಸುಭಾಷ ಚನ್ನೂರ, ಸುಭಾಷ ಕಾಂಬಳೆ, ಸುರೇಂದ್ರಸಿಂಗ್ ಠಾಕೂರ, ತುಳಜಾರಾಮ ರಾಠೊಡ, ಮಲ್ಲಣ್ಣ ಕೊಡಚಿ, ಬಸವರಾಜ ಪೂಜಾರಿ, ಬಸಣ್ಣ ಸರ್ಕಾರ, ತಿಪ್ಪಣ್ಣ ಕನಕ ಹಾಗೂ ನೂರಾರು ಕಾರ್ಯಕರ್ತರು ಇದ್ದರು.
ಯಡ್ರಾಮಿ, ನಾಗರಹಳ್ಳಿ: ಯಡ್ರಾಮಿ ಪಟ್ಟಣ ಸೇರಿದಂತೆ ನಾಗರಹಳ್ಳಿ ಕ್ರಾಸ್ ಬಳಿ ಟೈರ್‌ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಲಾಯಿತು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅಬ್ದುಲ್ ರಜಾಕ ಮನಿಯಾರ, ಚಂದ್ರಶೇಖರ ಪುರಾಣಿಕ, ನಾಗಣ್ಣ ಹಾಗರಗುಂಡಗಿ, ಮಲ್ಲಿಕಾರ್ಜುನ ಹಲಕರ್ಟಿ, ಹಯ್ನಾಳಪ್ಪ ಗಂಗಾಕರ್, ಉಸ್ಮಾನ ಸಿಪಾಯಿ, ಮಹಿಬೂಬ ಮನಿಯಾರ,
ಅಬ್ದುಲ್ ನಬಿ ಖ್ಯಾತನಾಳ, ಮಳ್ಳಿ ಗ್ರಾಪಂ ಅಧ್ಯಕ್ಷ ಈರಣ್ಣ ಕುಂಬಾರ, ಬಸವರಾಜ ಮಳ್ಳಿ ಸೇರಿದಂತೆ ಮತ್ತಿತರರು
ಇದ್ದರು.