Advertisement

Swati Maliwal ಕೇಸು: ಜಾಮೀನು ಕೋರಿ ಸುಪ್ರೀಂಗೆ ಬಿಭವ್‌ ಮೊರೆ

12:40 AM Jul 26, 2024 | Team Udayavani |

ಹೊಸದಿಲ್ಲಿ: ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಆರೋಪಿ ಬಿಭವ್‌ ಕುಮಾರ್‌ ಜಾಮೀನು ಕೋರಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ. ದಿಲ್ಲಿ ಸಿಎಂ ಕೇಜ್ರಿವಾಲ್‌ ಆಪ್ತ ಬಿಭವ್‌ಗೆ ಈ ಪ್ರಕರಣದಲ್ಲಿ ಜಾಮೀನು ನೀಡಲು ಜು.12ರಂದು ದಿಲ್ಲಿ ಹೈಕೋರ್ಟ್‌ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಬಿಭವ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಮೇ13ರಂದು ಸಂಸದೆ ಸ್ವಾತಿ ಮಲಿವಾಲ್‌ ಅವರ ಮೇಲೆ ಕೇಜ್ರಿವಾಲ್‌ ನಿವಾಸದಲ್ಲೇ ಬಿಭವ್‌ ಹಲ್ಲೆ ನಡೆಸಿದರು ಎಂಬ ಆರೋಪವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next