Advertisement

ಸ್ವಚ್ಛ ಸರ್ವೇಕ್ಷಣೆ : ಸಾರ್ವಜನಿಕ ಅಭಿಪ್ರಾಯ ಸಂಗ್ರಹ

12:49 PM Mar 01, 2022 | Team Udayavani |

ಮಹಾನಗರ : ಕಳೆದ ಮೂರು ವರ್ಷಗಳಲ್ಲಿ “ಸ್ವತ್ಛ ಸರ್ವೇಕ್ಷಣ’ ರ್‍ಯಾಂಕಿಂಗ್‌ನಲ್ಲಿ ಕುಸಿತ ಕಂಡಿದ್ದ ಮಂಗಳೂರು ನಗರ ಈ ಬಾರಿ ಮತ್ತೆ ರ್‍ಯಾಂಕಿಂಗ್‌ಗಾಗಿ ಸೆಣಸಾಡಲು ಸಿದ್ಧತೆ ನಡೆಸುತ್ತಿದ್ದು, ಸಾರ್ವಜನಿಕರ ಅಭಿಪ್ರಾಯಕ್ಕೆ ವೇದಿಕೆ ಸಿದ್ಧಗೊಂಡಿದೆ.

Advertisement

ನಗರವನ್ನು ಮೊದಲನೇ ಸ್ಥಾನಕ್ಕೇರಿಸಲು ಸಾರ್ವಜನಿಕರ ಸಹಭಾಗಿ ತ್ವವೂ ಪ್ರಮುಖ ವಾಗಿದ್ದು, ಇದಕ್ಕೆಂದು ಸ್ವತ್ಛತ ಆ್ಯಪ್‌, ಮೈ ಗವರ್ನಮೆಂಟ್‌ ಆ್ಯಪ್‌ ಮುಖೇನ ಪಾಲ್ಗೊಳ್ಳ ಬಹುದಾಗಿದೆ. ಇಲ್ಲಿ ಲಾಗಿನ್‌ ಆದ ಬಳಿಕ ನಗರಕ್ಕೆ ಸಂಬಂಧಿಸಿದಂತೆ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗಿದೆ. ಅದಕ್ಕೆ ಸರಿಯುತ್ತರ ನೀಡಿ ಸಾರ್ವಜನಿಕರು ಈ ಸರ್ವೇಯಲ್ಲಿ ಪಾಲ್ಗೊಳ್ಳಲು ಅವ ಕಾಶ ನೀಡಲಾಗಿದೆ. ಎ. 15ರ ವರೆಗೆ ಭಾಗ ವಹಿಸಲು ಅವಕಾಶ ನೀಡಲಾಗಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು . ಸ್ಥಳೀಯ ಸಂಸ್ಥೆಗಳಿಗೆ ಪ್ರತೀ ವರ್ಷ ಸ್ವತ್ಛ ಸರ್ವೇಕ್ಷಣ ಅಭಿಯಾನ ನಡೆಸುತ್ತದೆ. 2018-19ರಲ್ಲಿ ನಡೆಸಲಾದ ಅಭಿಯಾನದಲ್ಲಿ 3ರಿಂದ 10 ಲಕ್ಷದವರೆಗಿನ ಜನ ಸಂಖ್ಯೆಯ ವಿಭಾಗದಲ್ಲಿ ಮಂಗಳೂರು ನಗರ ಘನ ತ್ಯಾಜ್ಯ ನಿರ್ವ ಹಣೆಯಲ್ಲಿ ಅತ್ಯುತ್ತಮ ಮಧ್ಯಮ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿ ಐದನೇ ಸ್ಥಾನ ಪಡೆದಿತ್ತು. ಇತರ ನಗರಕ್ಕೆ ಹೋಲಿಕೆ ಮಾಡಿದರೆ ಮಂಗಳೂರಿನಲ್ಲಿ ಘನ ತ್ಯಾಜ್ಯ ನಿರ್ವಹಣೆ ಅತ್ಯುತ್ತಮವಾಗಿತ್ತು ಎಂದು ಉಲ್ಲೇಖ ಮಾಡಲಾಗಿತ್ತು.

ಅಭಿಯಾನದ ಪ್ರಮುಖ ಘಟಕಗಳು, ಚಟುವಟಿಕೆಗಳ ಕುರಿತು ಸಾರ್ವ ಜನಿಕರಿಗೆ ಜಾಗೃತಿಗಾಗಿ “ಪ್ರಗತಿ ದರ್ಶನ’ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು. ಈ ನಿಟ್ಟಿನಲ್ಲಿ ಎಲ್‌ಇಡಿ ಟಿವಿಯನ್ನು ಅಳವಡಿಸಿರುವ ಸಂಚಾರಿ ವಾಹನ ನಗರ ಸ್ಥಳೀಯ ಸಂಸ್ಥೆಗಳ ಪ್ರಮುಖ ಸ್ಥಳಗಳಲ್ಲಿ ಪ್ರತೀ ದಿನ ಐದು ಪ್ರದರ್ಶನದಂತೆ ಪ್ರಚುರಪಡಿಸಲು ನಿರ್ಧರಿಸಲಾಗಿದ್ದು, ಲಾಲ್‌ಬಾಗ್‌ ಎಂಜಿ.ರಸ್ತೆ, ಕದ್ರಿ ಮಾರುಕಟ್ಟೆ, ಪಂಪ್‌ವೆಲ್‌ ಜಂಕ್ಷನ್‌, ಸುರತ್ಕಲ್‌ ಜಂಕ್ಷನ್‌, ಸ್ಟೇಟ್‌ಬ್ಯಾಂಕ್‌ ವೃತ್ತದಲ್ಲಿ ಪ್ರಚುರಪಡಿಸಲಾಗಿದೆ.

ಇದನ್ನೂ ಓದಿ : ಶಿವರಾತ್ರಿ ಪ್ರಯುಕ್ತ ವಿನಯ್ ಗುರೂಜಿ ಆಶ್ರಯದಲ್ಲಿ ವಿಶೇಷ ಪೂಜೆ-ಹೋಮ-ಹವನ

Advertisement
Advertisement

Udayavani is now on Telegram. Click here to join our channel and stay updated with the latest news.

Next