ಮುಂಬಯಿ: ಆಧುನಿಕ ಯುಗದಲ್ಲಿ ದಿನಬಳಕೆಯಲ್ಲಿರುವ ವಸ್ತುಗಳನ್ನು ರೆಫ್ರಿಜರೇಟರ್‌ನಲ್ಲಿಟ್ಟು ಕೆಡದಂತೆ ಹೇಗೆ ನಾವು ಕಾಪಾಡುತ್ತೇವೆಯೋ ಅದೇ ರೀತಿ ಧರ್ಮಾಚರಣೆಯಿಂದ ನಮ್ಮನ್ನು ನಾವೂ ರಕ್ಷಿಸಿಕೊಳ್ಳಬಹುದು. ರೆಫ್ರಿಜರೇಟರ್‌ಗೆ ಹೇಗೆ ವಿದ್ಯುತ್ ಶಕ್ತಿ ಅವಶ್ಯವೋ ಅದೇ ರೀತಿ ನಿತ್ಯಾನುಷ್ಠಾನವೂ ನಮ್ಮ ದೇಹಕ್ಕೆ ನಾವು ಪೂರೈಸುವ ವಿದ್ಯುತ್ ಆಗಿದೆ. ಆದರೆ ಕೆಲವೊಮ್ಮೆ ವಿದ್ಯುತ್ ಪೂರೈಕೆ ಕಡಿತವಾದಾಗ ಜನರೇಟರ್‌ಗಳನ್ನು ನಾವೂ ಬಳಸುತ್ತೇವೆ. ಅದೇ ರೀತಿ ಧರ್ಮಾಚರಣೆಯಲ್ಲಿ ಏರುಪೇರಾಗದಂತೆ ಕಾಪಾಡಲು ಯತಿಗಳು, ಸನ್ಯಾಸಿಗಳು ಶಿಷ್ಯರ ಜೀವನದಲ್ಲಿ ವಿದ್ಯುತ್ ಪೂರೈಸಲು ಸಂಚಾರವನ್ನು ಕೈಗೊಳ್ಳುತ್ತಾರೆ. ಇದೇ ಇಂದಿನ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಸೋಂದಾಶ್ರೀ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸೋಂದಾಶ್ರೀ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಶ್ರೀಮದ್ ಜಗದ್ಗುರು ಶಂಕರಾ
ಚಾರ್ಯ ಗಂಗಾಧರೇಂದ್ರ ಸ್ವಾಮೀಜಿ ಅವರು ಮಾ. 4ರಂದು ಸಂಜೆ ಮುಂಬಯಿಗೆ ಆಗಮಿಸಿ ಮಾಟುಂಗಾ ಪೂರ್ವದ ಶ್ರೀ ಶಂಕರ ಮಠದಲ್ಲಿ ನೆರೆದ ಸದ್ಭಕ್ತರು ಹಾಗೂ ಶಿಷ್ಯರನ್ನು ಅನುಗ್ರಹಿಸಿದರು.
ಶ್ರೀಗಳು ನಗರಪ್ರವೇಶ ಮಾಡುತ್ತಿದ್ದಂತೆಯೇ ಶ್ರೀ ಸ್ವರ್ಣವಲ್ಲಿ ಸೇವಾ ಸಮಿತಿ ಮುಂಬಯಿ ಹಾಗೂ ಶ್ರೀ ಶಂಕರ ಮಠದ ಪದಾಧಿಕಾರಿ ಮತ್ತು ಸದಸ್ಯರು, ಶಿಷ್ಯವೃಂದ, ಮಹಿಳೆಯರು, ಮುಂಬಯಿವಾಸಿ ಭಕ್ತರು ಶಾಸ್ತ್ರೋಕ್ತವಾಗಿ ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀಗಳನ್ನು ಬರಮಾಡಿಕೊಂಡರು. ವಿ. ಎನ್. ಹೆಗಡೆ ಮತ್ತು ಗಂಗಾ ಹೆಗಡೆ ದಂಪತಿ ಪಾದಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ವಿ. ಎನ್. ಹೆಗಡೆ, ತನುಜಾ ಹೆಗಡೆ, ಡಾ| ಎನ್. ಜಿ. ಭಟ್ ಚಾರ್ಕೋಪ್, ಜಿ. ವಿ. ಹೆಗಡೆ, ಶಿವಾನಂದ ಭಟ್, ಕೆ. ಸಿ. ಹೆಗಡೆ, ಅನಂತ ಭಟ್, ರಾಜರಾಮ ಹೆಗಡೆ, ಚಂದ್ರಶೇಖರ ಭಟ್, ಆರ್. ಜಿ. ಹೆಗಡೆ, ಎಸ್. ಎಸ್. ಜೋಶಿ, ವಸಂತ ಭಟ್, ಸುರೇಶ್ ಹೆಗಡೆ, ಡಾ| ಎಸ್. ಆರ್. ನಾಯ್ಕ, ಮಧುಕರ ನಾಯ್ಕ, ಅಶೋಕ ನಾಯ್ಕ ಸೇರಿದಂತೆ ಅನೇಕ ರಾಮಕ್ಷತ್ರಿಯ ಹಾಗೂ ಹವ್ಯಕ ಬಂಧು ಭಕ್ತರು ಉಪಸ್ಥಿತರಿದ್ದರು.
ಮಾ. 11ರವರೆಗೆ ನಗರದಲ್ಲಿ ಮೊಕ್ಕಾಂ ಹೂಡಲಿರುವ ಶ್ರೀಗಳು ನಗರದ ವಿವಿಧೆಡೆಗಳಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಲಿದ್ದಾರೆ. ಪ್ರತಿದಿನ ಮುಂಜಾನೆ ಶ್ರೀಗಳಿಂದ ಕುಂಕುಮಾ
ರ್ಚನೆ ಪಾದಪೂಜೆ ಹಾಗೂ ಮಾ. 8ರಂದು ಏಕಾದಶಿ ಹೊರತುಪಡಿಸಿ ಮಧ್ಯಾಹ್ನ ಭಿûಾ
ಸೇವೆ ನಡೆಯಲಿದೆ. ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಹಾನಗರದ ಭಕ್ತಾದಿ ಗಳು ಪಾಲ್ಗೊಂಡು ಸಹಕರಿಸುಂತೆ ಶ್ರೀ ಸ್ವರ್ಣವಲ್ಲಿ ಸೇವಾ ಸಮಿತಿ ಮುಂಬಯಿಯ ಪದಾಧಿಕಾರಿಗಳು ಇದೇ ಸಂದರ್ಭ ತಿಳಿಸಿದರು.