Advertisement

Swarajya 1942 Movie: ಸ್ವರಾಜ್ಯದಲ್ಲಿ ಕ್ರಾಂತಿಯ ಕಹಳೆ

04:12 PM Oct 15, 2024 | Team Udayavani |

ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಕಮರ್ಷಿಯಲ್‌ ಸಿನಿಮಾಗಳ ನಡುವೆ ಕ್ರಾಂತಿಕಾರಿ ಸಿನಿಮಾವೊಂದು ತಯಾರಾಗಿದೆ. ಅದುವೇ “ಸ್ವರಾಜ್ಯ 1942′. 4ನೇ ತರಗತಿಯ ಪಠ್ಯ ಪುಸ್ತಕದಲ್ಲಿರುವ ಹುತಾತ್ಮ ಬಾಲಕನ ಕಥೆ ಈಗ ಸಿನಿಮಾವಾಗಿದೆ.

Advertisement

ಈ ಹಿಂದೆ “ಹತ್ಯೆ’ ಸಿನಿಮಾ ನಿರ್ದೇಶಿಸಿದ್ದ ವರುಣ್‌ ಗಂಗಾಧರ್‌ “ಸ್ವರಾಜ್ಯ 1942′ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ಸಿನಿಮಾದ ಟೀಸರ್‌ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗಷ್ಟೇ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು.

“ನಾನು ಈ ಹಿಂದೆ ಹತ್ಯೆ ಎಂಬ ಸಿನಿಮಾ ಮಾಡಿದ್ದೆ. ಆ ಚಿತ್ರದಲ್ಲಿ ಮಗ ಸಣ್ಣ ಪಾತ್ರ ಮಾಡಿದ್ದ. ಸ್ವರಾಜ್ಯ ಚಿತ್ರದಲ್ಲಿ ನಾನೇ ಎಲ್ಲವನ್ನೂ ನಿಭಾಯಿಸಿದ್ದೇನೆ. ಸಿನಿಮಾ ಮಾಡುವುದು ಬಹಳ ಸುಲಭ ಅನಿಸಿತು. 1942ರಲ್ಲಿ ಹುಬ್ಬಳ್ಳಿಯ ಹುಡುಗನೊಬ್ಬ ಸ್ವಾತಂತ್ರ್ಯ ಹೋರಾಟಗಾರನಾಗಿದ್ದ ಎಂಬುದನ್ನು ಜಗತ್ತಿಗೆ ಪರಿಚಯಿಸಲು ಈ ಚಿತ್ರ ಮಾಡಿದ್ದೇನೆ. ಶಾಲೆಯ ಪಠ್ಯ ಪುಸ್ತಕವನ್ನು ಸಿನಿಮಾ ರೂಪಕ್ಕೆ ತಂದಿದ್ದೇವೆ. ಶಾಲಾ ಮಕ್ಕಳಿಗೂ ಈ ಚಿತ್ರ ತೋರಿಸುವ ಯೋಜನೆ ಇದೆ’ ಎನ್ನುವುದು ನಿರ್ದೇಶಕ ವರುಣ್‌ ಗಂಗಾಧರ ಮಾತು.

ಹುಬ್ಬಳ್ಳಿ ಮೂಲದ ಬಾಲಕನೊಬ್ಬ ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದ ಕ್ವೀಟ್‌ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಲು ಹೊರಟಾಗ ಬ್ರಿಟಿಷರ ಗುಂಡೆಂಟಿಗೆ ಹುತಾತ್ಮನಾದ ಕಥೆಯೇ “ಸ್ವರಾಜ್ಯ 1942′. 14ನೇ ವಯಸ್ಸಿನಲ್ಲಿ ದೇಶಕ್ಕಾಗಿ ಹೋರಾಡುವ ಉತ್ಸಾಹ ತೋರಿದ ಆ ಹುತಾತ್ಮನ ಮಾಹಿತಿ ಕಲೆ ಹಾಕಿ ಕುಟುಂಬದವರ ಒಪ್ಪಿಗೆ ಮೇರೆಗೆ ಸಿನಿಮಾ ಮಾಡಲಾಗಿದೆಯಂತೆ. ಜೊತೆಗೆ ನಿರ್ದೇಶಕ ವರುಣ್‌ ಗಂಗಾಧರ್‌ ಈ ಚಿತ್ರದ ಮೂಲಕ ತಮ್ಮ ಮಗನನ್ನು

ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಮಾಸ್ಟರ್‌ ವರುಣ್‌ ಜಿ, ಯಶ್‌ ರಾಜ್‌ ಕಾರಜೋಳ್‌, ಓಂ ಕಾರಜೋಳ್‌, ಆದ್ಯ ಕಾರಜೋಳ್‌, ವೀಣಾ ಸುಂದರ್‌, ನಾಗೇಶ್‌ ಮಯ್ಯ, ಮೂಗು ಸುರೇಶ್‌, ಸಚಿನ್‌ ಪುರೋಹಿತ್‌, ಜಾನಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

Advertisement

ಅಲೆನ್‌ ಕ್ರಾಸ್ಟಾ ಸಂಗೀತ ನಿರ್ದೇಶನ, ಸೂರ್ಯಕಾಂತ್‌ ಛಾಯಾಗ್ರಹಣ, ಸಂಜೀವ್‌ ರೆಡ್ಡಿ ಸಂಕಲನ ಈ ಸಿನಿಮಾಗಿದೆ. ವಿವೈ ಸಿನಿಮಾಸ್‌ ಬ್ಯಾನರ್‌ನಡಿ ಡಾ.ಪುಷ್ಪಾವತಿ ಮತ್ತು ಎ. ಕಾರಜೋಳ ಶಕುಂತಲಾ ಈ ಚಿತ್ರ ನಿರ್ಮಿಸಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿರುವ ಚಿತ್ರ, ಶೀಘ್ರ ತೆರೆಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next