Advertisement

ಪಾಕ್‌ ಮಗುವಿಗೆ ಭಾರತದಲ್ಲಿ ಚಿಕಿತ್ಸೆ: ಸುಶ್ಮಾ ವೀಸಾ ಮಂಜೂರು

12:13 PM Oct 19, 2017 | Team Udayavani |

ಹೊಸದಿಲ್ಲಿ : ಪಾಕಿಸ್ಥಾನದ ಮಗುವಿಗೆ ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ದೊರಕಿಸುವ ಸಲುವಾಗಿ ವೀಸಾ ನೀಡುವಂತೆ ಇಸ್ಲಾಮಾಬಾದ್‌ನಲ್ಲಿನ ಭಾರತೀಯ ಹೈಕಮಿಷನ್‌ಗೆ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್‌ ನಿರ್ದೇಶನ ನೀಡಿದ್ದಾರೆ. 

Advertisement

ತನ್ನ ಮಗು ಅಬ್ದುಲ್ಲಾ  ಗೆ  ಲಿವರ್‌ ಕಸಿ ಶಸ್ತ್ರಚಿಕಿತ್ಸೆ ಬಳಿಕದ ಚಿಕಿತ್ಸೆ ಅಗತ್ಯವಿದ್ದು ಆತನಿಗೆ ವೈದ್ಯಕೀಯ ವೀಸಾ ಮಂಜೂರು ಮಾಡುವಂತೆ ಮಗುವಿನ ತಂದೆ ಕಾಶೀಫ್ ಅವರು ಟ್ವಿಟರ್‌ನಲ್ಲಿ  ಸುಶ್ಮಾ ಸ್ವರಾಜ್‌ ಅವರನ್ನು ವಿನಂತಿಸಿದ್ದರು. 

ಭಾರತದಲ್ಲಿ ಲಿವರ್‌ ಸರ್ಜರಿಗೆ ಒಳಪಡುವ ಪಾಕ್‌ ಮಹಿಳೆಯೊಬ್ಬರಿಗೆ ಕೂಡ ಇದೇ ವೇಳೆ ವೈದ್ಯಕೀಯ ವೀಸಾ ನೀಡಲಾಗಿದೆ ಎಂದು ಸಚಿವೆ ಸುಶ್ಮಾ ಟ್ವೀಟ್‌ ಮಾಡಿದ್ದಾರೆ. 

ಈ ಮಹಿಳೆಯ ಪುತ್ರ ರಫೀಕ್‌ ಮೆಮೋನ್‌ ಎಂಬವರು ತನ್ನ ತಾಯಿಗೆ ವೈದ್ಯಕೀಯ ವೀಸಾ ಕೊಡಿಸುವಂತೆ ಸುಶ್ಮಾ ಸ್ವರಾಜ್‌ ಅವರನ್ನು ಕೋರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next