Advertisement

ದೊಡ್ಡರಂಗೇಗೌಡರ ನಿರ್ದೇಶನದಲ್ಲಿ ಹಾರಲು ಸಿದ್ಧವಾದ ಹಂಸಗಳು

10:51 AM Jul 31, 2020 | mahesh |

ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಪೋನ್‌ ಬಳಕೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಮನೆಯಲ್ಲಿ ದೊಡ್ಡವರ ಜೊತೆಗೆ ಮಕ್ಕಳಲ್ಲೂ ಕೂಡ, ಗೇಮಿಂಗ್‌, ಆನ್‌ಲೈನ್‌ ಪಾಠ, ಎಂಟರ್‌ ಟೈನ್ಮೆಂಟ್‌ ಅಂಥ ಮೊಬೈಲ್‌ ಪೋನ್‌ ಬಳಕೆ ಹೆಚ್ಚಾಗುತ್ತಿದೆ. ಇನ್ನು ಈಗಾಗಲೇ ಬ್ಯಾನ್‌ ಆಗಿರುವಂತಹ ಬ್ಲೂ ವೇಲ್‌, ಪಬ್‌ಜಿ ಮೊದಲಾದ ಆನ್‌ಲೈನ್‌ ಗೇಮಿಂಗ್‌ ಎಳೆ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಮೊಬೈಲ್‌ ಪೋನ್‌ಗಳಲ್ಲಿರುವ ಅನಗತ್ಯ ಮತ್ತು ಅತಿಯಾದ ಆ್ಯಪ್‌ಗ್ಳ ಬಳಕೆಯಿಂದ ಮಕ್ಕಳು ವಿಕ್ಷಿಪ್ತರಾಗುತ್ತಾರೆ. ಈಗ ಇದೇ ವಿಷಯವನ್ನು ಇಟ್ಟುಕೊಂಡು ಕನ್ನಡದ ಹಿರಿಯ ಸಾಹಿತಿ, ಪದ್ಮಶ್ರೀ ಪುರಸ್ಕೃತ ಡಾ. ದೊಡ್ಡರಂಗೇಗೌಡರು “ಹಾರುವ ಹಂಸಗಳು’ ಎನ್ನುವ ಹೆಸರಿನ ಸಿನಿಮಾದ ಮೂಲಕ ಅದನ್ನು ತೆರೆಮೇಲೆ ಹೇಳಲು ಹೊರಟಿದ್ದಾರೆ.

Advertisement

ಹೌದು. ಮಕ್ಕಳ ಮೇಲೆ ಮೊಬೈಲ್‌ ಪೋನ್‌  ಹೇಗೆಲ್ಲ ಅಡ್ಡಪರಿಣಾಮವನ್ನು ಉಂಟು ಮಾಡುತ್ತದೆ. ಮಕ್ಕಳಿಗೆ ಮೊಬೈಲ್‌ ಪೋನ್‌ ಹೇಗೆ ಮಾರಕ ಎಂಬ ವಿಷಯದ ಸುತ್ತ ವಾಸ್ತವದ ಕೆಲ ಘಟನೆಗಳನ್ನು ಇಟ್ಟುಕೊಂಡು, ಡಾ. ದೊಡ್ಡರಂಗೇಗೌಡ “ಹಾರುವ ಹಂಸಗಳು’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಮೂಲಕ ನಗರ ಹಾಗೂ
ಗ್ರಾಮಾಂತರ ಮಕ್ಕಳ ನಡುವಿನ ಅಂತರ ಕಡಿಮೆ ಮಾಡಲು ಹಳ್ಳಿ ಹಾಗೂ ಪಟ್ಟಣಗಳ ಕಿರಿಯರ ವಿಚಾರ ವಿನಿಮಯ ಇದರಲ್ಲಿದೆ. ಈ ಮೂಲಕ ಸಮಾಜದ ವಿವಿಧ ಆಯಾಮಗಳನ್ನು ಐದು
ದಶಕಗಳಿಗೂ ಮಿಗಿಲಾದ ಚಲನಚಿತ್ರದ ಅನುಭವವುಳ್ಳ ಡಾ. ದೊಡ್ಡರಂಗೇಗೌಡ ಅವರು ಅನನ್ಯವಾಗಿ ಚಿತ್ರಿಸಿ, ಶೈಕ್ಷಣಿಕ ಸಂದೇಶವನ್ನು ನೀಡಿದ್ದಾರೆ ಎನ್ನುವುದು ಚಿತ್ರತಂಡದ ಮಾತು.

“ದೀಪಾಂಕರ್‌ ಫಿಲಂಸ್‌’ ಬ್ಯಾನರ್‌ ಅಡಿಯಲ್ಲಿ ನಿರ್ಮಾ ಣ ವಾಗಿರುವ “ಹಾರುವ ಹಂಸಗಳು’ ಚಿತ್ರಕ್ಕೆ ಎಚ್‌. ವಾಸು ಪ್ರಸಾದ್‌ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಪಿ.ವಿ.ಆರ್‌ ಸ್ವಾಮಿ
ಛಾಯಾಗ್ರಹಣ, ಓಂಕಾರಮೂರ್ತಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಶ್ರೀಸುರೇಶ್‌ ಹಾಗೂ ಉಪಾಸನಾ ಮೋಹನ್‌ ಸಂಗೀತ ಸಂಯೋಜಿಸಿದ್ದು, ಡಾ. ದೊಡ್ಡರಂಗೇಗೌಡ ಮತ್ತು ಡುಂಡಿರಾಜ್‌ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಮಾಸ್ಟರ್‌ ಓಜಸ್‌ ದೀಪ್‌. ವಿ, ಡಾ. ದೊಡ್ಡರಂಗೇಗೌಡ, ಶಿವಾನಂದ್‌, ಮಂಜುಳಮ್ಮ, ಪ್ರಣವ ಮೂರ್ತಿ, ಸೆಬಾಸ್ಟಿಯನ್‌, ಲಕ್ಷ್ಮಣ್‌, ಮಾಸ್ಟರ್‌ ಚಿನ್ಮಯ್‌, ಕುಮಾರಿ ರೂಪಾ, ಕುಮಾರಿ ದೀಪಿಕಾ ಮುಂತಾದವರು “ಹಾರುವ ಹಂಸಗಳು’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next