ಶಿವಮೊಗ್ಗ : ಮಠಾಧೀಶರು ಲಿಂಗಾಯಿತರೇ ಸಿಎಂ ಅಗ್ಬೇಕು ಎಂದು ಎಲ್ಲಿಯೂ ಆಗ್ರಹ ಮಾಡಿಲ್ಲ. ಎಲ್ಲೋ ಒಬ್ಬರು, ಇಬ್ಬರು ಮಠಾಧೀಶರು ಮಾತ್ರ ಹಾಗೇ ಹೇಳಿದ್ದಾರೆ. ಅದ್ರೇ, ಎಲ್ಲರೂ ಯಡಿಯೂರಪ್ಪ ನವರೇ ಮುಂದುವರಿಯಲಿ ಎಂದು ಅಪೇಕ್ಷೆ ಪಟ್ಟಿದ್ದರು. ಆದ್ರೇ, ಅವರು ಯಾವುದೋ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಅವರ ಸ್ಥಾನಕ್ಕೆ ಬೊಮ್ಮಾಯಿ ಅವರು ಸಿಎಂ ಆಗಿ ಅಧಿಕಾರ ಪಡೆದಿದ್ದಾರೆ ಎಂದು ಎಂದು ಶಿವಮೊಗ್ಗದಲ್ಲಿ ಬಸವಕೇಂದ್ರದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿಕೆ ನೀಡಿದರು.
ಯಡಿಯೂರಪ್ಪನವರಷ್ಟೇ ಸಮರ್ಥವಾಗಿ ಬೊಮ್ಮಾಯಿ ಕೂಡ ಕೆಲಸ ಮಾಡ್ತಾರೆ. ಆಡಳಿತದ ಸುದೀರ್ಘ ಅನುಭವಿದೆ. ನೀರಾವರಿ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ನಾಡಿನ ಆಶೋತ್ತರಗಳನ್ನು ಈಡೇರಿಸುವ ಹಾಗೇ ಕೆಲಸ ಮಾಡಲಿ ಎಂದು ಅವರು ಶುಭ ಹಾರೈಸಿದರು.
ಬಸವರಾಜ್ ಬೊಮ್ಮಾಯಿ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹಿಂದಿನ ಅವಧಿಯಲ್ಲಿ ಗೃಹ ಸಚಿವರಾಗಿ ಸಮರ್ಥವಾಗಿ ಕೆಲಸ ಮಾಡಿದ್ದಾರೆ. ರಾಜಕೀಯ ಅನುಭವ ಇದ್ದು, ಹಿಂದಿನ ಪರಂಪರೆ ಸಹ ಅವರಿಗೆ ಮಾದರಿಯಾಗಿದೆ. ಅವರಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳು ಮುಂದುವರೆಯಲಿ ಎಂದು ಶುಭ ಹಾರೈಸುತ್ತೇನೆ ಎಂದು ಶಿವಮೊಗ್ಗದಲ್ಲಿ ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಶ್ರೀಗಳ ಹೇಳಿಕೆ ನೀಡಿದರು.
ನಾವೆಲ್ಲರೂ ಯಡಿಯೂರಪ್ಪ ಅವರನ್ನು ಮುಂದುವರೆಸಲು ಆಗ್ರಹಿಸಿದ್ದೇವು. ಅದು ನಿಜ. ಇದು ಪ್ರತಿಯೊಬ್ಬರ ಅಪೇಕ್ಷೇಯಾಗಿತ್ತು. ಅದನ್ನೇ ನಾವು ವ್ಯಕ್ತಪಡಿಸಿದ್ದೇವು. ಪ್ರಜಾಪ್ರಭುತ್ವ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಅವರು ಸೂಕ್ತವಾದ ನಿರ್ಧಾರ ಮಾಡಿದ್ದಾರೆ. ಅದನ್ನು ನಾವು ವಿರೋಧಿಸುವುದಿಲ್ಲ. ನಾವು ಅಪೇಕ್ಷೆ ಹೇಳಿದ್ದು ಅಷ್ಟೇ ಎಂದು ಶ್ರೀಗಳು ಹೇಳಿದರು.