Advertisement

ಹಕ್ಕಿ-ಪಿಕ್ಕಿ ಜನಾಂಗಕ್ಕೆ ಸ್ವಾಮೀಜಿ ನೆರವು

07:06 PM May 16, 2021 | Team Udayavani |

ತುಮಕೂರು: ಕೋವಿಡ್ 2ನೇ ಅಲೆ ಹಲವಾರುಜನರ ಬದುಕನ್ನು ಕಿತ್ತುಕೊಂಡಿದೆ. ಈಮಹಾಮಾರಿಯ ಹೊಡೆತಕ್ಕೆ  ಪ್ರತಿದಿನ ದುಡಿಮೆಮಾಡಿ ಜೀವನ ಸಾಗಿಸುತ್ತಿದ್ದ ಹಕ್ಕಿ-ಪಿಕ್ಕಿ ಜನಾಂಗದಬದುಕು ಸಂಕಷ್ಟಕ್ಕೆ  ಸಿಲುಕಿದ್ದು, ಈ ಜನಾಂಗಕ್ಕೆಪಾವಗಡದ ಶ್ರೀ ರಾಮಕೃಷ್ಣ ಸೇವಾ ಆಶ್ರಮದಸ್ವಾಮಿ ಜಪಾನಂದಜೀ ನೆರವು ನೀಡುವ ಮೂಲಕಮಾನವೀಯತೆ ಮೆರೆದಿದ್ದಾರೆ.

Advertisement

ಜಿಲ್ಲೆಯ ತುಮಕೂರು, ಚಿಕ್ಕನಾಯಕನಹಳ್ಳಿಮತ್ತಿತರ ಕಡೆಗಳಲ್ಲಿ ವಾಸವಿರುವ ಹಕ್ಕಿ-ಪಿಕ್ಕಿಜನಾಂಗದವರು ತೊಂದರೆಯಲ್ಲಿ ಇದ್ದಾರೆಎನ್ನುವುದನ್ನು ಅರಿತ ಸ್ವಾಮಿ ಜಪಾನಂದ ಜೀಪಾವಗಡದಿಂದ ತುಮಕೂರಿಗೆ ಬಂದು ಸಂಕಷ್ಟದಲ್ಲಿಇದ್ದ ಹಕ್ಕಿ-ಪಿಕ್ಕಿ ಜನಾಂಗಕ್ಕೆ ನೆರವಾಗಿದ್ದಾರೆ.ತುಮಕೂರು ತಾಲೂಕಿನ ಅಮಲಾಪುರ ಗ್ರಾಮದಕೇಂದ್ರೀಯ ವಿದ್ಯಾಲಯದ ಹತ್ತಿರ ಇರುವ 150ಹಕ್ಕಿ-ಪಿಕ್ಕಿ ಜನಾಂಗದ ವಾಸ ಸ್ಥಳಕ್ಕೆ ಭೇಟಿ ನೀಡಿಅವರಿಗೆ ಪಾತ್ರೆ ಹಾಗೂ ದಿನಸಿ ಸಾಮಗ್ರಿ ವಿತರಿಸಿದರು.ಪಾವಗಡದಿಂದ 75 ಕಿ.ಮೀ. ದೂರದಲ್ಲಿರುವ ಈಜನಾಂಗ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದು,ಯಾವುದೇ ಮೂಲ ಸೌಕರ್ಯವಿಲ್ಲದೆ ಜೀವಿಸುತ್ತಿರುವಈ ಜನಾಂಗದ ಸ್ಥಿತಿಯನ್ನು ನೋಡಿ ಮರುಗಿದರು.

150 ಕುಟುಂಬಕ್ಕೆ ದಿನಸಿ ವಿತರಣೆ: ತಕ್ಷಣವೇ ತಮ್ಮವಿವೇಕ ಬ್ರಿಗೇಡ್‌ ತಂಡ ಹಾಗೂ ಪಾವಗಡದ ಸರ್ಕಾರಿಸಹಾಯಕ ಅಭಿಯೋಜಕ ವಿ.ಮಂಜುನಾಥ್‌ಅವರೊಂದಿಗೆ ಮುಂಜಾನೆಯೇ ಭೇಟಿ ನೀಡಿ ಅಲ್ಲಿವಾಸವಿರುವ 150 ಕುಟುಂಬಗಳಿಗೆ ಅಡುಗೆ ಪಾತ್ರೆಗಳಸೆಟ್‌, ಅಡುಗೆ ಎಣ್ಣೆ, 10 ಕೆ.ಜಿ. ಅಕ್ಕಿ, ತಲಾ 2ಕೆ.ಜಿಯಂತೆ ಬೇಳೆ, ರವೆ, ಸಕ್ಕರೆ, ಉಪ್ಪು, ಗೋಧಿ ಹಿಟ್ಟುಮತ್ತು 1 ಕೆ.ಜಿ. ಸಾಂಬಾರು ಪುಡಿ ನೀಡಿರುವುದಲ್ಲದೇಪ್ರತಿಯೊಬ್ಬರಿಗೂ ಮಾಸ್ಕ್, ಸೋಪು ವಿತರಿಸಿದರು.ಕೊರೊನಾದ ಎರಡನೇ ಅಲೆ ಇಂತಹ ಸಾವಿರಾರುಕುಟುಂಬಗಳನ್ನು ನಿರ್ಗತಿಕರನ್ನಾಗಿ ಮಾಡಿರುವವೇಳೆಯಲ್ಲಿ ಸ್ವಾಮೀಜಿ ನೆರವು ಪಡೆದು ಹಕ್ಕಿ-ಪಿಕ್ಕಿಜನಾಂಗ ಸಂತಸಗೊಂಡಿತು.

ಜನಾಂಗಕ್ಕೆ ಸಹಾಯಹಸ್ತ: ಈ ವೇಳೆ ಪಾವಗಡ ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದಜೀಮಾತನಾಡಿ, ಜಿಲ್ಲೆಯಲ್ಲಿರುವಂತಹ ಇಂತಹ ನಿರ್ಗತಿಕಮತ್ತು ಅತ್ಯಂತ ಹಿಂದುಳಿದ ಹಕ್ಕಿ-ಪಿಕ್ಕಿ ಜನಾಂಗದಹಾಗೂ ಕಾಡುಮೇಡುಗಳನ್ನು ಸುತ್ತುತ್ತಾ ಬಾಚಣಿಗೆ,ಪಿನ್ನು ಇತ್ಯಾದಿಗಳನ್ನು ಊರಿಂದೂರಿಗೆ ಹೋಗಿಮಾರುತ್ತಾ ಜೀವನ ನಡೆಸುತ್ತಿರುವ ಇಂತಹವರಿಗೆಸಹಾಯಹಸ್ತ ನೀಡಿರುವುದು ಸಂತಸವಾಗಿದೆ.ಜಿಲ್ಲೆಯಲ್ಲಿಯೇ ಈ ಕಾರ್ಯಕ್ರಮ ಆರಂಭವಾಗಿದೆ.ಸುಧಾಮೂರ್ತಿ ಹಾಗೂ ಇನ್ಫೋಸಿಸ್‌ ಫೌಂಡೇಷನ್ನಿನಸಹಕಾರದೊಂದಿಗೆ ಈ ಕೆಲಸವನ್ನು ಕೈಗೆತ್ತಿಕೊಂಡಿದ್ದೇವೆ.ಚಿಕ್ಕನಾಯಕನಹಳ್ಳಿಯಿಂದ ಹಿಡಿದುಪಾವಗಡದವರೆಗೆ ಇಂತಹ ಸಮುದಾಯಗಳನ್ನುಗುರುತಿಸಿದ್ದು ಅವರಿಗೆ ಸಹಾಯಹಸ್ತವನ್ನುನೀಡಲಾಗುತ್ತದೆ. ಜಿಲ್ಲೆಯಲ್ಲಿ ಈ ರೀತಿಯ 600ಕುಟುಂಬಗಳಿಗೆ ಸೇವೆ ಸಲ್ಲಿಸುವುದಾಗಿ ಎಂದರು.

ಚಿ.ನಿ.ಪುರುಷೋತ್ತಮ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next