Advertisement

ಹಿರೇಮಠದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ

12:57 PM Jan 15, 2022 | Team Udayavani |

ಭಾಲ್ಕಿ: ಪಟ್ಟಣದ ಹಿರೇಮಠ ಸಂಸ್ಥಾನ ಆವರಣದಲ್ಲಿ ನಡೆಯುವ ಗುರುಪ್ರಸಾದ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಹಾಗೂ ರಾಜಮಾತಾ ಜೀಜಾವು ಅವರ ಜಯಂತಿ ಆಚರಣೆ ಮಾಡಲಾಯಿತು.

Advertisement

ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಡಾ| ಬಸವಲಿಂಗ ಪಟ್ಟದ್ದೇವರು, ಇಂದು ವಿಶೇಷವಾದ ದಿನ. ಏಕೆಂದರೆ ರಾಜಾಮಾತಾ ಜೀಜಾವು ಇವರು ಒಬ್ಬ ಆದರ್ಶ ಮಾತೆ. ಛತ್ರಪತಿ ಶಿವಾಜಿ ಮಹಾರಾಜರ ತಾಯಿ. ಛತ್ರಪತಿ ಶಿವಾಜಿ ಮಹಾರಾಜರು ಸ್ವರಾಜ್ಯವನ್ನು ಕಟ್ಟಿ ನಮ್ಮ ಅಸ್ಮಿತೆ, ಧರ್ಮ, ಸಂಸ್ಕೃತಿ ಬೆಳೆಸಿದ ಮಹಾನ್‌ ಚೇತನರು. ಮೊಗಲರ ಜೊತೆ ಹೋರಾಟ ಮಾಡುತ್ತಲೇ ನಮ್ಮ ಜನರ ಎಳ್ಗೆಗಾಗಿ ಸ್ವರಾಜ್ಯ ಸ್ಥಾಪಿಸಿದರು. ಇದಕ್ಕೆ ಪ್ರೇರಣೆಯಾದವರು ತಾಯಿ ಜೀಜಾಮಾತಾ ಅವರು. ಹಾಗೆಯೇ ಇಂದು ಯುವಕರಿಗೆ ಪ್ರೇರಣಾದಾಯಕರಾದ ಸ್ವಾಮಿ ವಿವೇಕಾನಂದರ ಜಯಂತಿ ಎಂದರು.

ಸ್ವಾಮಿ ವಿವೇಕಾನಂದರು ನಮ್ಮ ದೇಶ ಕಂಡ ಅಪರೂಪದ ಸನ್ಯಾಸಿಗಳು. ಅವರು ಕ್ರಾಂತಿಕಾರಕ ವಿಚಾರಧಾರೆಯ ಮಹಾಪುರುಷರು. ಅವರು ಯುವಕರ ಸರ್ವಾಂಗೀಣ ಅಭಿವೃದ್ಧಿಗಾಗಿ ಅಮೂಲ್ಯವಾದಂತಹ ಸಂದೇಶ ನೀಡಿದ್ದಾರೆ ಎಂದರು.

ನಿರಂಜನ ಸ್ವಾಮಿಗಳು ಸ್ವಾಮಿ ವಿವೇಕಾನಂದರ ಜೀವನ ಸಾಧನೆ ಕುರಿತು ಮಾತನಾಡಿದರು. ಸಮಾರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಸಿದ್ರಾಮ ರಾಜಪೂರೆ ಹಾಗೂ ಸಿಬ್ಬಂದಿಯವರಾದ ಅಶೋಕ ನೆಲವಾಡೆ, ಜ್ಯೋತಿ ಆನಂದವಾಡೆ, ವೀರೇಶ ನಾಗಲಿಕರ, ದೀಪಿಕಾ ಎಸ್‌.ರೆಡ್ಡಿ, ರಾಜು ಜುಬರೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next