Advertisement

ಸ್ವಾಮಿ ಸಮರ್ಥ ಅನ್ನಛತ್ರ ಮಂಡಳ ಪುನಾರಂಭ

11:41 AM Oct 08, 2021 | Team Udayavani |

ಸೊಲ್ಲಾಪುರ: ಕಳೆದ ಏಳು ತಿಂಗಳಿಂದ ಮುಚ್ಚಲಾಗಿರುವ ಅಕ್ಕಲಕೋಟ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳವನ್ನು ಗುರುವಾರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಮಾರ್ಗದರ್ಶನ ಮತ್ತು ಪ್ರಮುಖ ಕಾರ್ಯಕಾರಿ ವಿಶ್ವಸ್ತ ಅಮೋಲರಾಜೆ ಭೋಸಲೆ ನೇತೃತ್ವದಲ್ಲಿ ಪುನಃ ಆರಂಭಿಸಲಾಯಿತು.

Advertisement

ಪ್ರಾಂತಾಧಿಕಾರಿ ಸುಪ್ರಿಯಾ ಡಾಂಗೆ, ಪುಣೆಯ ಎನ್‌ಸಿಸಿ ಗ್ರೂಪ್‌ ಕಮಾಂಡರ್‌ ರಾಜೇಶ ಕೆ. ಗಾಯಕವಾಡ, ಶ್ರೀಮತಿ ಗಾಯಕವಾಡ, ತಹಶೀಲ್ದಾರ್‌ ಬಾಳಾಸಾಹೇಬ ಸಿರಸಟ, ಉತ್ತರ ಪೊಲೀಸ್‌ ಠಾಣೆ ಪೊಲೀಸ್‌ ನಿರೀಕ್ಷಕ ಅನಂತ ಕುಲಕರ್ಣಿ, ವಳಸಂಗ ಪೊಲೀಸ್‌ ಠಾಣೆ ಸಹಾಯಕ ಪೊಲೀಸ್‌ ನಿರೀಕ್ಷಕ ಅತುಲ್‌ ಭೋಸಲೆ, ಮಂಡಳಿ ಉಪಾಧ್ಯಕ್ಷ ಅಭಯ ಖೋಬರೆ, ಕಾರ್ಯದರ್ಶಿ ಶಾಮರಾವ್‌ ಮೋರೆ, ಭಾವು ಕಪಾಸೆ ಸಮ್ಮುಖದಲ್ಲಿ ಸ್ವಾಮಿ ಸಮರ್ಥರಿಗೆ ಪೂಜೆ ಮತ್ತು ಮಹಾಪ್ರಸಾದ ನೈವೇದ್ಯ ಅರ್ಪಿಸಲಾಯಿತು.

ಅನ್ನಛತ್ರಕ್ಕೆ ಬರುವ ಭಕ್ತರಿಗೆ ಕೊರೊನಾ ಸೋಂಕು ಬರದಂತೆ ಆಡಳಿತ ಮಂಡಳಿ ಮಹಾರಾಷ್ಟ್ರ ಸರ್ಕಾರದ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಅನ್ನಛತ್ರದಲ್ಲಿ ಜನಸಂದಣಿ ಇರುವುದಿಲ್ಲ, ಭಕ್ತರು ಮಾಸ್ಕ್ ಧರಿಸುವುದು ಮತ್ತು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ.

ಮಂಡಳಿಯ ಅಪ್ಪು ಪೂಜಾರಿ, ಸಂಜಯ ಕುಲಕರ್ಣಿ, ಮೇಜರ್‌ ಚಂದ್ರಕಾಂತ ಹಿರತೋಟ,
ಪ್ರೊ| ಸಚಿನ್‌ ಡಫ್ಲೆ, ಪ್ರೊ| ಪ್ರಶಾಂತ ಶಿಂಪಿ, ಮನೋಜ ನಿಕ್ಕಂ, ವಿಜಯ ಮಾನೆ, ಚಂದ್ರಕಾಂತ ಕುಂಬಾರ, ಸತ್ತಾರ ಶೇಖ್‌, ಧನರಾಜ ಶಿಂಧೆ, ಸಂತೋಷ ಭೋಸಲೆ, ಕಿರಣ ಪಾಟೀಲ, ಪ್ರಶಾಂತ ಶಿಂಧೆ, ಬಾಳಾಸಾಹೇಬ್‌ ಪೋಳ, ಸಿದ್ಧರಾಮ ಕಲ್ಯಾಣಿ, ಅಮಿತ ತೋರಥ್‌, ಮಹಾಂತೇಶ ಸ್ವಾಮಿ ಮತ್ತಿತರರು ಇದ್ದರು.

ಕೊರೊನಾದಿಂದ ಮುಚ್ಚಿದ್ದ ಅನ್ನಛತ್ರವನ್ನು ಮತ್ತೆ ಭಕ್ತರ ಸೇವೆಗಾಗಿ ತೆರೆಯಲಾಗಿದೆ. ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಅನಂತ ಕುಲಕರ್ಣಿ, ಪೊಲೀಸ್‌ ನಿರೀಕ್ಷಕ, ಉತ್ತರ ಪೊಲೀಸ್‌ ಠಾಣೆ, ಅಕ್ಕಲಕೋಟ

Advertisement

ಅನ್ನಛತ್ರಕ್ಕೆ ಬರುವ ಭಕ್ತರಿಗೆ ಕೊರೊನಾ ಸೋಂಕು ತಗುಲದಂತೆ ಕೋವಿಡ್‌ ನಿಯಮ ಪಾಲಿಸಲಾಗುತ್ತಿದೆ. ಜನದಟ್ಟಣೆ ಇರುವುದಿಲ್ಲ, ಭಕ್ತರಿಗೆ ಮಾಸ್ಕ್ ಧರಿಸುವುದು ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ. ಕೊರೊನಾ ಜಾಗೃತಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ಫಲಕ ಅಳವಡಿಸಲಾಗಿದೆ.
ಅಮೋಲರಾಜೆ ಭೋಸಲೆ, ಪ್ರಮುಖ ಕಾರ್ಯಕಾರಿ ವಿಶ್ವಸ್ತ,ಅನ್ನಛತ್ರ ಮಂಡಳಿ, ಅಕ್ಕಲಕೋಟ

ಕಳೆದ ಏಳು ತಿಂಗಳಿಂದ ಮುಚ್ಚಲಾಗಿರುವ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳಿ ಸರ್ಕಾರದ ಆದೇಶದ ನಂತರ ಗುರುವಾರ ಮಹಾಪ್ರಸಾದ ಸೇವೆ ಪುನರಾರಂಭಿಸಿದೆ. ಮಂಡಳಿ ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿರುವುದು ಸಂತಸ ತಂದಿದೆ.

ಸುಪ್ರಿಯಾ ಡಾಂಗೆ, ಪ್ರಾಂತಾಧಿಕಾರಿ, ಸೊಲ್ಲಾಪುರ

ಕೊರೊನಾ ಅವಧಿಯಲ್ಲಿ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳ ಸಾಮಾಜಿಕ ಬದ್ಧತೆ ಕಾಪಾಡಿಕೊಂಡಿದೆ. ಅನ್ನದಾನ ಸೇವೆಯೊಂದಿಗೆ ಸಾಮಾಜಿಕ ಕಾರ್ಯ ಗಮನಾರ್ಹವಾಗಿದೆ. ಅನ್ನಛತ್ರದಲ್ಲಿ ಸರ್ಕಾರದ ನಿಯಮ ಅನುಸರಿಸುವುದರ ಜೊತೆಗೆ, ಮಾಸ್ಕ್ ಮತ್ತು ಸುರಕ್ಷಿತ ಅಂತರ ಕಡ್ಡಾಯಗೊಳಿಸಲಾಗಿದೆ.
ಬಾಳಾಸಾಹೇಬ್‌ ಸಿರಸಟ, ತಹಶೀಲ್ದಾರ್‌, ಅಕ್ಕಲಕೋಟ

Advertisement

Udayavani is now on Telegram. Click here to join our channel and stay updated with the latest news.

Next