ಮಹಾನಗರ: ಕುಂದಾಪುರ, ಉಡುಪಿ, ಬ್ರಹ್ಮಾವರ ಬನ್ನಂಜೆಯಲ್ಲಿ ಹೊಟೇಲ್ ಉದ್ಯಮದಲ್ಲಿ ಖ್ಯಾತಿಗಳಿಸಿರುವ ಹೊಟೇಲ್ ಸ್ವಾದಿಷ್ಟ್ ಮಲ್ಟಿ ಕುಸೀನ್ ವೆಜ್ ಹಾಗೂ ನಾನ್‌ವೆಜ್ ರೆಸ್ಟೋರೆಂಟ್ ಮಂಗಳೂರಿನ ಗ್ರಾಹಕರ ಗಮನ ಸೆಳೆಯುವಲ್ಲಿ ಕೂಡಾ ಯಶಸ್ವಿಯಾಗಿದೆ.
ಮಂಗಳೂರಿನ ಕಂಕನಾಡಿ ಪಂಪ್‌ವೆಲ್ ರಸ್ತೆಯ ಒಮೆಗಾ ಆಸ್ಪತ್ರೆಯ ಬಳಿಯ ಇನ್‌ಲ್ಯಾಂಡ್ ಗ್ಯಾಲೊರೆಯಲ್ಲಿ ಶುಭಾ ರಂಭಗೊಂಡಿರುವ ಸ್ವಾದಿಷ್ಟ್ ಪರಿವಾರದ ಆರನೇ ಶಾಖೆಯು ವಿಶೇಷ ಖಾದ್ಯಗಳ ಮೂಲಕವಾಗಿ ಗ್ರಾಹಕರ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ.
ನಗರದ ಐಷಾರಾಮಿ ಪರಿಸರದ ಇನ್‌ಲ್ಯಾಂಡ್ ಗ್ಯಾಲೊರೆಯಲ್ಲಿ ಸ್ವಾದಿಷ್ಟ್ ಹೊಟೇಲ್ ಮಿನಿ ಪಾರ್ಟಿ ಹಾಲ್, ವಿಶಾಲ ಪಾರ್ಕಿಂಗ್ ಸೌಲಭ್ಯ, ನಾನಾ ಆಹಾರ ಮತ್ತು ಪಾನೀಯಗಳನ್ನು ಪೂರೈಕೆ ಮಾಡುವ ಮೂಲಕ ಮಂಗಳೂರಿನ ಪ್ರಥಮ ಮಲ್ಟಿ ಕುಸೈನ್ ವೆಜ್ ಮತ್ತು ನಾನ್‌ವೆಜ್ ರೆಸ್ಟೋರೆಂಟ್ ಆಗಿಯೂ ಗುರುತಿಸಿಕೊಂಡಿದೆ. ಇಲ್ಲಿ ಬರ್ತ್ ಡೇ ಪಾರ್ಟಿ ಬುಕ್ಕಿಂಗ್ ಮತ್ತು ಗೆಟ್ ಟುಗೆದರ್ ಪಾರ್ಟಿಗೆ ಮಿನಿ ಪಾರ್ಟಿ ಹಾಲ್‌ನ್ನು ಉಚಿತವಾಗಿ ನೀಡಲಾಗುತ್ತದೆ.
2002ರಲ್ಲಿ ಜಯರಾಮ್ ಪೂಜಾರಿ ಅವರು ಉಡುಪಿಯಲ್ಲಿ ಸ್ವಾದಿಷ್ಟ್ ಹೊಟೇಲ್‌ನ್ನು ಆರಂಭಿಸಿದ್ದು, ಬಳಿಕ ಮಣಿಪಾಲದಲ್ಲಿ ಹೊಟೇಲ್ ಮ್ಯಾನೇಜ್‌ಮೆಂಟ್ ಕಲಿತ ದೀಪಕ್ ಪೂಜಾರಿ ಅವರು ಸ್ವಾದಿಷ್ಟ್ ಬಳಗವನ್ನು 2 ರಿಂದ 6ನೇ ಶಾಖೆಯ ವರೆಗೆ ವಿಸ್ತರಿಸಿದರು. ಹೊಟೇಲ್ ಸ್ವಾದಿಷ್ಟ್ ಸಮೂಹವು ಉಡುಪಿ, ಕುಂದಾಪುರ ಹಾಗೂ ಬ್ರಹ್ಮಾವರದಲ್ಲಿ ಐದು ಶಾಖೆಗಳನ್ನು ಹೊಂದಿದ್ದು ಶುಚಿ, ರುಚಿಯೊಂದಿಗೆ ಮಂಗಳೂರಿನ ಜನತೆಗೂ ತಮ್ಮ ಸೇವೆಯನ್ನು ಸಮರ್ಪಿಸುತ್ತಿದೆ.
ನಮ್ಮ ಉಡುಪಿಯ ರೆಸ್ಟೋರೆಂಟ್ ನ ಫುಡ್ ಕಲ್ಚರ್‌ಗೆ ಸಾಕಷ್ಟು ಗ್ರಾಹಕರು ಮನ ಸೋತಿದ್ದಾರೆ. ಅದೇ ರೀತಿಯಲ್ಲಿ ಮಂಗಳೂರಿನ ಗ್ರಾಹಕರಿಗೂ ರೆಸೋrರೆಂಟ್‌ನಲ್ಲಿ ಸಾಕಷ್ಟು ವೆರೈಟಿ ಐಟಂಗಳು ಸಿಗಲಿದೆ. ಮುಂಗಡ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಶನಿವಾರ, ಭಾನುವಾರಗಳಂದು ಇನ್ನಷ್ಟು ವಿಶೇಷ ಖಾದ್ಯಗಳನ್ನು ಗ್ರಾಹಕರಿಗೆ ನೀಡುವ ಬಗ್ಗೆ ಚಿಂತನೆ ಮಾಡಲಾಗುತ್ತದೆ.
ಸ್ವಾದಿಷ್ಟ್ ಬರೀ ಹೆಸರಿನಲ್ಲಿ ಮಾತ್ರವಲ್ಲ ಇಲ್ಲಿನ ಫುಡ್ ವೈರೆಟಿಯಲ್ಲೂ ಸ್ವಾದಿಷ್ಟವಾಗಿದೆ ಎನ್ನುವುದನ್ನು ನಾವು ನಿರೂಪಿಸಲಿದ್ದೇವೆ ಎಂದು ಸ್ವಾದಿಷ್ಟ್ ಪರಿವಾರದ ಮಾಲಕರು ತಿಳಿಸಿದ್ದಾರೆ.
ಗ್ರಾಹಕರ ಸೆಳೆಯುವ ಗ್ರಿಲ್ಡ್ ಚಿಕನ್
ಮಂಗಳೂರಿನ ಸ್ವಾದಿಷ್ಟ್ ಮಲ್ಟಿ ಕುಸೀನ್‌ನಲ್ಲಿ ರುಚಿಕರವಾದ ಅರೇಬಿಕ್, ಸೌತ್ ಇಂಡಿಯನ್, ಸೀ ಫುಡ್, ಚೈನೀಸ್, ಪಂಜಾಬಿ, ತಂದೂರಿ ಐಟಂಗಳು ಮಿತ ದರದಲ್ಲಿ ಶುಚಿ ರುಚಿಯಾಗಿ ದೊರೆಯುತ್ತಿವೆ. ಅದರೊಂದಿಗೆ ಗ್ರಿಲ್ಡ್ ಚಿಕನ್ ಹಾಗೂ ಬಿರಿಯಾನಿ ವೈರೈಟಿ ಐಟಂಗಳು, ಎಲ್ಲಾ ವರ್ಗದವರಿಗೂ ಬೇಕಾಗುವಂತಹ ಸೀ ಫುಡ್, ಸಿಜೆÕರ್ಸ್, ಚೈನೀಸ್ ಐಟಂಗಳು ದೊರಕುತ್ತಿದೆ. ಇಲ್ಲಿನ ಚಿಕನ್ ಗೀ ರೋಸ್ಟ್ ಮತ್ತು ಗ್ರಿಲ್ಡ್ ಚಿಕನ್ ಗ್ರಾಹಕರನ್ನು ವಿಶೇಷವಾಗಿ ಸೆಳೆಯುತ್ತಿದೆ.