Advertisement
ಕೇಂದ್ರ ಸರಕಾರದ ಪುರಸ್ಕೃತ ಯೋಜನೆಗಳಾದ ಸ್ವದೇಶಿ “ದರ್ಶನ್’ ಮತ್ತು “ಪ್ರಸಾದ್’ಗೆ ಈವರೆಗೆ ಅನುದಾನ ಬಿಡುಗಡೆ ಆಗದಿರುವುದೇ ಇವು ನನೆಗುದಿಗೆ ಬೀಳಲು ಕಾರಣ.
Related Articles
ಪ್ರಸಾದ್ ಯೋಜನೆ 2.0 ಅಡಿ ಉಡುಪಿ ಜಿಲ್ಲೆ ಕುಂಜಾರುಗಿರಿ ಮಧ್ವವನ, ಬೀದರ್ ಜಿಲ್ಲೆಯ ಪಾಪನಾಶ ದೇವಸ್ಥಾನ, ಅನಂತಶಯನ ದೇವಸ್ಥಾನ, ನರಸಿಂಹ ಗುಹಾಮತರ ದೇವಾ ಲಯ, ಜಲಸಾಂಗ್ವಿ ದೇವಸ್ಥಾನ, ಗುರುನಾನಕ್ ಝೀರಾ ಹಾಗೂ ಬೆಳಗಾವಿ ಜಿಲ್ಲೆ ಸವದತ್ತಿ ಯಲ್ಲಮ್ಮ ದೇವಸ್ಥಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರಲ್ಲಿ ಕುಂಜಾರುಗಿರಿ ಮಧ್ವವನ, ಪಾಪನಾಶ ದೇವಸ್ಥಾನ, ಸವದತ್ತಿ ಯಲ್ಲಮ್ಮ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಲು 2022ರ ಸೆ.21ರಂದು ತಾತ್ವಿಕ ಅನುಮೋದನೆ ನೀಡಲಾಗಿದೆ. ಆದರೆ ಕೇಂದ್ರದಿಂದ ಅನುದಾನ ಬಂದಿಲ್ಲ.
Advertisement
“ಸ್ವದೇಶ್ ದರ್ಶನ್ 2.0′ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಒಟ್ಟು 8 ಯೋಜನೆಗಳನ್ನು ಗುರುತಿಸಿದ್ದು, ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ “ಸ್ಟೇಟ್ ಸ್ಟಿಯರಿಂಗ್ ಕಮಿಟಿ’ ಸಭೆಯಲ್ಲಿ 5 ಪ್ರವಾಸಿ ತಾಣಗಳನ್ನು ಪರಿಗಣಿಸಲಾಗಿದೆ. 2022ರ ಅ.18ರಂದು ಹಂಪಿ ಸ್ಮಾರಕ (ವಿಜಯನಗರ ಜಿಲ್ಲೆ), ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ (ಮೈಸೂರು), ಮಳಖೇಡ ಕೋಟೆ, ಕಲಬುರಗಿ ದೇವಭಾಗ್ ಹಾಗೂ ಕಾಳಿ ನದಿ ಹಿನ್ನೀರು ಪ್ರದೇಶಾಭಿವೃದ್ಧಿ, ಬೀದರ್ ಜಿಲ್ಲೆಯ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರಕಾರದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ 5 ತಾಣಗಳಲ್ಲಿ ಹಂಪಿ ಸ್ಮಾರಕ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಈ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದೆ. ಆದರೆ ಕೇಂದ್ರದಿಂದ ಅನುದಾನ ಬಿಡುಗಡೆ ಆಗಿಲ್ಲ.
ಯೋಜನೆಯ ಉದ್ದೇಶಗಳುಸ್ವದೇಶಿ ದರ್ಶನ್ ಯೋಜನೆ: ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಉತ್ತೇಕವಾಗಿ ಪ್ರವಾಸೋದ್ಯಮವನ್ನು ಬೆಳೆಸುವುದು. ಯೋಜಿತ ಮತ್ತು ಆದ್ಯತೆ ರೀತಿಯಲ್ಲಿ ಪ್ರವಾಸಿ ಸಾಮರ್ಥಯವನ್ನು ಹೊಂದಿರುವ ಸರ್ಕ್ಯೂಟ್‌ಗಳನ್ನು ಅಭಿವೃದ್ಧಿಪಡಿಸುವುದು. ದೇಶದಲ್ಲಿ ಜೀವನೋ ಪಾಯವನ್ನು ಸೃಷ್ಟಿಸಲು ದೇಶದ ಸಾಂಸ್ಕೃತಿಕ ಮತ್ತು ಪರಂಪರೆಯ ಮೌಲ್ಯವನ್ನು ಉತ್ತೇಜಿಸುವುದು. ಅಭಿವೃದ್ಧಿ ಶೀಲ ಪ್ರಪಂಚದಿಂದ ಸುಸ್ಥಿರ ರೀತಿಯಲ್ಲಿ ಪ್ರವಾಸಿ ಆಕರ್ಷಣೆಯನ್ನು ಹೆಚ್ಚಿಸುವುದು ಸರ್ಕ್ಯೂಟ್/ಗಮ್ಯ ಸ್ಥಾನಗಳಲ್ಲಿ ವರ್ಗ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು. ಸಮುದಾಯ ಆಧಾರಿತ ಅಭಿವೃದ್ಧಿ ಮತ್ತು ಬಡವರ ಪರವಾದ ಪ್ರವಾಸೋದ್ಯಮ ವಿಧಾನ ಅನುಸರಿಸುವುದು. ಪ್ರಸಾದ್ ಯೋಜನೆ: ಯಾತ್ರಾ ಸ್ಥಳಗಳ ಉನ್ನತೀಕರಣ, ಧಾರ್ಮಿಕ ಯಾತ್ರ ಸ್ಥಳಗಳ ಪ್ರವಾಸವನ್ನು ಯೋಜನಾ ಬದ್ಧವಾಗಿ ಸಂಯೋಜಿಸಿ ಸುಸ್ಥಿತರವಾಗಿ ಅಭಿವೃದ್ಧಿಗೊಳಿಸು ವುದು. ಧಾರ್ಮಿಕ ಯಾತ್ರಾ ಪ್ರವಾಸೋದ್ಯಮವನ್ನು ನೇರವಾಗಿ ಹಾಗೂ ವಿವಿಧ ಉದ್ದೇಶಗಳ ಪರಿಣಾಮದಿಂದ ಉದ್ಯೋಗ ಸೃಷ್ಟಿಸುವುದು. ಧಾರ್ಮಿಕ ಯಾತ್ರ ಸ್ಥಳಗಳನ್ನು ಎಲ್ಲ ವರ್ಗಗಳಿಗೂ ಹಾಗೂ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸುವುದು. ಪ್ರವಾಸಿಗರನ್ನು ಆಕರ್ಷಿಸಲು ಅತ್ಯುನ್ನತ ವಿಶ್ವದರ್ಜೆಯ ವಿವಿಧ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು. ಸ್ಥಳೀಯ ಸಮೂಹಗಳಿಗೆ ಪ್ರವಾಸೋದ್ಯಮದ ಬಗ್ಗೆ ಅರಿವು ಮೂಡಿಸುವುದು. ಆ ಮೂಲಕ ಜೀವನಮಟ್ಟ ಸುಧಾರಿಸುವುದು. -ರಫೀಕ್ ಅಹ್ಮದ್