Advertisement

Swachh Bharat Mission: “ಸ್ವಚ್ಛಭಾರತ’ 21ನೇ ಶತಮಾನದ ಯಶಸ್ವಿ ಜನಾಂದೋಲನ: ಮೋದಿ

10:44 PM Oct 02, 2024 | Team Udayavani |

ನವದೆಹಲಿ: “ಸ್ವಚ್ಛಭಾರತ ಮಿಷನ್‌ ಕೇವಲ ಒಂದು ಅಭಿಯಾನವಲ್ಲ, 21ನೇ ಶತಮಾನದ ಅತಿದೊಡ್ಡ ಯಶಸ್ವಿ ಜನಾಂದೋಲನ ‘ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.

Advertisement

ಸ್ವಚ್ಛ ಭಾರತ ಯೋಜನೆಯು ದಶಕ ಪೂರೈಸಿದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಯೋಜಿಸಿದ್ದ ಸ್ವಚ್ಛತಾ ಹೈ ಸೇವಾ ಕಾರ್ಯಕ್ರಮದಲ್ಲಿ ಪ್ರಧಾನಿ ಪಾಲ್ಗೊಂಡಿದ್ದರು. ಇದೇ ವೇಳೆ ಸ್ವಚ್ಛ ಭಾರತ್‌ ಮತ್ತು ಅಮೃತ್‌ 2.0 ಮಿಷನ್‌ ಅನ್ವಯ 10,000 ಕೋಟಿ ರೂ. ಮೌಲ್ಯದ ನೀರು ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳ ಯೋಜನೆಗೆ ಮೋದಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಅಭಿಯಾನವಾಗಿದ್ದ ಸ್ವಚ್ಛ ಭಾರತವು ದೇಶವಾಸಿಗಳ ಸಾಮೂಹಿಕ ಪಾಲ್ಗೊಳ್ಳುವಿಕೆ, ಬೆಂಬಲದೊಂದಿಗೆ ಭಾರತದ ಸಮೃದ್ಧಿಗೆ ಹೊಸ ಮಾರ್ಗವನ್ನೇ ಸೃಷ್ಟಿ ಮಾಡಿದೆ. ಸಾವಿರ ವರ್ಷ ಕಳೆದರೂ 21ನೇ ಶತಮಾನದ ಸ್ವಚ್ಛ ಭಾರತದ ಈ ಸಾಧನೆ ಮುಂದಿನ ಪೀಳಿಗೆಗೆ ನೆನಪಿರಲಿದೆ ಎಂದರು. ಅಲ್ಲದೆ, ಶಾಲೆಯೊಂದಕ್ಕೆ ತೆರಳಿ ವಿದ್ಯಾರ್ಥಿನಿಯರೊಂದಿಗೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯೂ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next