Advertisement

ಸ್ವಚ್ಛ ಭಾರತಕ್ಕೆ 5 ವರ್ಷ ಸಾಧಿಸಿದ್ದೆಷ್ಟು?

09:22 AM Oct 03, 2019 | mahesh |

ಸ್ವಚ್ಛ ಭಾರತ ಯೋಜನೆ ಆರಂಭವಾಗಿ ಇಂದಿಗೆ (ಅ. 2) ಐದು ವರ್ಷ ಪೂರ್ಣ ವಾಗುತ್ತದೆ. ಈ ಯೋಜನೆ ಅಡಿಯಲ್ಲಿ ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬಯಲು ಶೌಚಾಲಯಕ್ಕೆ ಪೂರ್ಣ ವಿರಾಮ ಹಾಕಿ ಜನರ ಆರೋಗ್ಯ ವೃದ್ಧಿಸುವ ಧ್ಯೇಯದೊಂದಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದೀಗ 5 ವರ್ಷದಲ್ಲಿ ಶೇ. 99ರಷ್ಟು ಶೌಚಾಲಯವನ್ನು ನಿರ್ಮಿಸಲಾಗಿದೆ.

Advertisement

2014ರ ಅಕ್ಟೋಬರ್‌ 2ರಂದು ಕೇಂದ್ರ ಸರಕಾರ ತನ್ನ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ಮುಂದಡಿ ಇಟ್ಟಿತ್ತು. ಬಹುದೊಡ್ಡ ಅಭಿಯಾನವನ್ನಾಗಿ ಇದನ್ನು ರೂಪಿಸಿತ್ತು. ಈ ವರ್ಷ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆ ನಡೆಯುತ್ತಿದೆ. ಜತೆಗೆ ಸ್ವಚ್ಛ ಭಾರತ ಕಾರ್ಯಕ್ರಮಕ್ಕೂ 5 ವರ್ಷ ತುಂಬಿದೆ.

ಉತ್ತಮ ಪ್ರಗತಿ
2011ರಲ್ಲಿ ನಡೆದ ಜನಗಣತಿಯ ಅಂಕಿ-ಅಂಶ ಮತ್ತು 2019ರ ಅಂಕಿ-ಅಂಶವನ್ನು ಹೋಲಿಸಿದರೆ ಶೌಚಾಲಯಗಳ ನಿರ್ಮಾಣದಲ್ಲಿ ಭಾರೀ ಪ್ರಗತಿ ದಾಖಲಾಗಿದೆ. ರಾಷ್ಟ್ರದ ಕೆಲವು ರಾಜ್ಯಗಳಲ್ಲಿ ಶೇ. 10.5ರಷ್ಟು ಮನೆಗಳಲ್ಲಿ ಮಾತ್ರ ಶೌಚಾಲಯಗಳು ನಿರ್ಮಾಣವಾಗಿದ್ದವು. ಉತ್ತರ ಭಾರತದ ರಾಜ್ಯಗಳಾದ ಬಿಹಾರ ಮತ್ತು ಒಡಿಶಾ ರಾಜ್ಯಗಳಲ್ಲಿ ಬಯಲು ಮುಕ್ತ ಶೌಚಾಲಯದ ಕನಸು ಸಾಕಾರವಾಗಿದೆ. ಇಂದು ಬಹುತೇಕ ಜಿಲ್ಲೆಗಳಲ್ಲಿ ಬಯಲು ಮುಕ್ತ ಶೌಚಾಲಯಗಳಿವೆ.

ಬಯಲು ಮಲ ವಿಸರ್ಜನೆ ನಿಯಂತ್ರಣ
5 ವರ್ಷಗಳ ಹಿಂದಿನ ಅಂಕಿ-ಅಂಶಗಳಿಗೆ ಹೋಲಿಸಿದರೆ ಬಯಲು ಮಲ ವಿಸರ್ಜನೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. 2014ರಲ್ಲಿ ಶೇ. 77 ಮಂದಿ ಬಯಲನ್ನು ಆಶ್ರಯಿಸಿಕೊಂಡಿದ್ದರೆ 2018ರಲ್ಲಿ ಶೇ. 44ರಷ್ಟು ಮಂದಿ ಮಾತ್ರ ಬಯಲಿಗೆ ಹೋಗುತ್ತಿ ದ್ದಾರೆ. ಆದರೆ ಶೌಚಾಲಯ ಇದ್ದೂ ಬಯಲಿಗೆ ಹೋಗುತ್ತಿದ್ದವರು 2014-2018ರಲ್ಲಿಯೂ ಸಮಾನವಾಗಿದ್ದಾರೆ. ಅವರ ಮೇಲೆ ಸ್ವಚ್ಛ ಭಾರತ ಯಾವುದೇ ಪರಿಣಾಮ ಬೀರಿಲ್ಲ. ಬಯಲು ಮಲ ವಿಸರ್ಜನೆ ನಿಯಂತ್ರಣ 5 ವರ್ಷಗಳ ಹಿಂದಿನ ಅಂಕಿ-ಅಂಶಗಳಿಗೆ ಹೋಲಿಸಿದರೆ ಬಯಲು ಮಲ ವಿಸರ್ಜನೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. 2014ರಲ್ಲಿ ಶೇ. 77 ಮಂದಿ ಬಯಲನ್ನು ಆಶ್ರಯಿಸಿಕೊಂಡಿದ್ದರೆ 2018ರಲ್ಲಿ ಶೇ. 44ರಷ್ಟು ಮಂದಿ ಮಾತ್ರ ಬಯಲಿಗೆ ಹೋಗುತ್ತಿದ್ದಾರೆ. ಆದರೆ ಶೌಚಾಲಯ ಇದ್ದೂ ಬಯಲಿಗೆ ಹೋಗುತ್ತಿದ್ದವರು 2014-2018ರಲ್ಲಿಯೂ ಸಮಾನವಾಗಿದ್ದಾರೆ. ಅವರ ಮೇಲೆ ಸ್ವಚ್ಛ ಭಾರತ ಯಾವುದೇ ಪರಿಣಾಮ ಬೀರಿಲ್ಲ.

ಕೆಲವು ಕಡೆ ಇನ್ನೂ ಇದೆ ಹಳೆ ಚಾಳಿ
ದೇಶದ ಮನೆಗಳಲ್ಲಿ ಶೌಚಾಲಗಳ ಸಂಖ್ಯೆ ಹೆಚ್ಚಾಗಿದ್ದರೂ, ಬಯಲು ಶೌಚದ ಪ್ರಮಾಣ ಪೂರ್ಣವಾಗಿ ನಿಂತಿದೆ ಎಂದು ಹೇಳಲು ಬರುವುದಿಲ್ಲ. ಏಕೆಂದರೆ ಮನೆಯಲ್ಲಿ ಶೌಚಾಲಯ ಇದ್ದರೂ ಕೆಲವರು ಇನ್ನೂ ಬಯಲಿನಲ್ಲಿ ಶೌಚ ಮಾಡುತ್ತಿದ್ದಾರೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಈ ಪ್ರವೃತ್ತಿ ಹೆಚ್ಚಾಗಿ ಕಂಡುಬರುತ್ತಿದೆ. ಚಿಕ್ಕಂದಿನಿಂದಲೂ ಬಯಲನ್ನೇ ಆಶ್ರಯಿಸಿಕೊಂಡು ಬಂದವರಿಗೆ ಅಭ್ಯಾಸ ಬದಲಾಯಿಸಲು ಕಷ್ಟವಾಗಿರುವುದು ಇದಕ್ಕೆ ಕಾರಣ. ಇದರಿಂದ ಸ್ವಚ್ಛ ಭಾರತ ಗುರಿಯನ್ನು ಶೇ. 100ರಷ್ಟು ಸಾಧಿಸುವುದು ಕಷ್ಟವಾಗಿದೆ. ಇಂದು ದೇಶದ ಪ್ರತಿ ಮನೆಯಲ್ಲಿ ಅಥವ ನಗರಗಳಲ್ಲಿಯೂ ಮನೆಗೆ ಒಂದರಂತೆ ಶೌಚಾಲಯ ಇದ್ದಿರಬಹುದು. ಆದರೆ ಕುಟುಂದ ಸದಸ್ಯರೆಲ್ಲರೂ ಅದನ್ನು ಬಳಸುತ್ತಿಲ್ಲ. ಅಂದರೆ ಶೌಚಾಲಯಗಳು ಶೇ. 100ರಷ್ಟು ನಿರ್ಮಾಣವಾದರೂ, ಬಯಲು ಮಲ ವಿಸರ್ಜನೆ ಸಂಪೂರ್ಣವಾಗಿ ನಿಲ್ಲುವುದು ಕಷ್ಟ. 2014 ಮತ್ತು 2018ರ ಅಂಕಿ ಅಂಶಗಳನ್ನು ನಾವು ಗಮನಿಸಿದರೆ ಈ ವರದಿ ಹೌದು ಎನುತ್ತದೆ.

Advertisement

ಶೇ.99ರಷ್ಟು ಸಾಧನೆ
ಸ್ವಚ್ಛ ಭಾರತ ಯೋಜನೆಯ ಬಳಿಕ ಇಂದು ದೇಶದ ಅಷ್ಟೂ ನಗರಗಳು ಮತ್ತು ಗ್ರಾಮಾಂತರ ಭಾಗಗಳಲ್ಲಿ ಶೌಚಾಲಯ ನಿರ್ಮಾಣದಲ್ಲಿ ವೇಗ ಕಂಡು ಬಂದಿದ್ದು, ಶೇ. 38ರಿಂದ ಶೇ. 99ಕ್ಕೆ ಜಿಗಿತ ಕಂಡಿದೆ. ಅಂದರೆ ಇಂದು ದೇಶದ ಬಹುತೇಕ ಮನೆಗಳಲ್ಲಿ ಶೌಚಾಲಯಗಳು ಸ್ಥಾಪನೆಯಾಗಿವೆ.

90 ಸಾವಿರ ಮರುಜೀವ
ಬಯಲು ಶೌಚಾಲಯದಿಂದ ಆರೋಗ್ಯದ ಮೇಲೆ ನೇರ ಪರಿಣಾಮ ಎಂದು ವಿಶ್ವ ಆರೋಗ್ಯ ಸಂಸ್ಥೆ ಬಹಳ ಹಿಂದೆಯೇ ಎಚ್ಚರಿಸಿತ್ತು. ಬಯಲು ವಿರ್ಜನೆಯಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತದೆ. ರೋಗ ಒಬ್ಬರಿಂದ ಮತ್ತೂಬ್ಬರಿಗೆ ಹರಡಲು ಇದೇ ಮೂಲ ಕಾರಣ ಎಂದು ಅಂಕಿ ಅಂಶ ಸಮೇತ ಹೇಳಿತ್ತು. 2014ರಲ್ಲಿ 1.40 ಲಕ್ಷ ಜನರು ಅತಿಸಾರ ಬೇಧಿಗೆ ಬಲಿಯಾಗುತ್ತಿದ್ದರು. 2018ರ ಅಂಕಿ ಅಂಶಗಳೇ ಹೇಳುವಂತೆ ಸುಮಾರು 50 ಸಾವಿರ ಜನ ಮಾತ್ರ ಈಗ ಅತಿಸಾರ ಬೇಧಿಗೆ ಒಳಗಾಗುತ್ತಿದ್ದಾರೆ. ಅಂದರೆ ಸುಮಾರು 90 ಸಾವಿರ ಜೀವ ಉಳಿದಿವೆ.

ಶೌಚಾಲಯ ನಿರ್ಮಾಣಕ್ಕೆ ಬಜೆಟ್‌ ವಿನಿಯೋಗ (ಕೋ.ರೂ.)

ಶೇ.38ರಷ್ಟು
2014ರಲ್ಲಿ ನಡೆಸಿದ ಅಧ್ಯಯನಗಳ ಪ್ರಕಾರ ದೇಶದಲ್ಲಿ ಶೇ. 38.07ರಷ್ಟು ಮನೆಗಳಲ್ಲಿ ಮಾತ್ರ ಶೌಚಾಲಯಗಳು ನಿರ್ಮಾಣವಾಗಿದ್ದವು.

  ಕಾರ್ತಿಕ್‌ ಅಮೈ

Advertisement

Udayavani is now on Telegram. Click here to join our channel and stay updated with the latest news.

Next