Advertisement

Swachh Bharat Mission: ಸ್ವಚ್ಛತೆ, ಮಹಿಳೆಯರಿಗೆ ಸ್ವಚ್ಛ ಭಾರತ್‌ ಮಿಷನ್‌ ಪೂರಕ 

06:17 PM Aug 27, 2023 | Team Udayavani |

ಕುಣಿಗಲ್‌: ಗ್ರಾಮ ಸ್ವಚ್ಛತೆ, ಪರಿಸರ ಸಂರಕ್ಷಣೆ, ಮಹಿಳಾ ಸಬಲೀಕರಣಕ್ಕೆ ಸ್ವಚ್ಛ ಭಾರತ್‌ ಮಿಷನ್‌ ಆಧಾರ ಸœಬವಾಗಿದ್ದು, ಹಳ್ಳಿಗಾಡಿನ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವುದರೊಂದಿಗೆ ಗ್ರಾಮಸ್ಥರಲ್ಲಿ ಸ್ವತ್ಛತಾ ಜಾಗೃತಿಗೆ ಪೂರಕವಾಗಿದೆ. ಸ್ವಚ್ಛ ಭಾರತ್‌ ಮಿಷನ್‌ ಅಡಿಯಲ್ಲಿ ಕುಣಿಗಲ್‌ ತಾಲೂಕಿನಲ್ಲಿ ಈ ಯೋಜನೆ ಉತ್ತಮ ಪ್ರಗತಿಯಲ್ಲಿದೆ.

Advertisement

ದೇಶದ ಗ್ರಾಮೀಣ ಪ್ರದೇಶವನ್ನು ಕಸ ಹಾಗೂ ಪ್ಲಾಸ್ಟಿಕ್‌ ಮುಕ್ತವನ್ನಾಗಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ವಚ್ಛ ಭಾರತ್‌ ಮಿಷನ್‌ ಯೋಜನೆ ಜಾರಿ ಮಾಡಿದೆ. ಈ ಮೂಲಕ ಗ್ರಾಮಗಳಲ್ಲಿ ಗೃಹ ಶೌಚಾಲಯ, ಸಮು ದಾಯ ಶೌಚಾಲಯ, ಘನ ತ್ಯಾಜ್ಯ ಘಟಕ, ಇಂಗು ಗುಂಡಿ ನಿರ್ಮಾಣ ಹಾಗೂ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜಾರಿ ಮಾಡಿರುವ ಈ ಯೋಜನೆ ಕುಣಿಗಲ್‌ ತಾಲೂಕಿನಲ್ಲಿ ಸ್ವಲ್ಪ ಲೋಪ ಹೊರತುಪಡಿಸಿ, ಬಹುತೇಕವಾಗಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿರುವುದು ಹಳ್ಳಿಗಾಡಿನ ನಾಗರಿಕರಿಗೆ ಉಪಯೋಗವಾಗಿದೆ.

ಆರೋಗ್ಯಕ್ಕೆ ಪರಿಸರ, ಸ್ವಚ್ಛತೆ ಮುಖ್ಯ: ಪರಿಸರ ಸಂರಕ್ಷಣೆ, ಸ್ವತ್ಛತೆಯೇ ಆರೋಗ್ಯಕ್ಕೆ ಮುಖ್ಯವಾಗಿದೆ. ಅದರಂತೆ ನಮ್ಮ ಸುತ್ತಮುತ್ತಲಿನ ಪರಿಸರವು ಎಷ್ಟು ಸ್ವಚ್ಛತೆಯಿಂದ ಕೂಡಿದೆ?, ನಾವು ನಮ್ಮ ಮನೆಯನ್ನು ಹೇಗೆ ಸ್ವತ್ಛತೆಯಿಂದ ಇಟ್ಟಿರುತ್ತಿವೂ ಹಾಗೆಯೇ ನಮ್ಮ ಪ್ರತಿ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವುದು ಕೇಂದ್ರ ಸರ್ಕಾರದ ಬಹುಮುಖ್ಯ ಯೋಜನೆಯಾದ ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕುಣಿಗಲ್‌ ತಾಲೂಕಿನಲ್ಲಿ ಪರಿಣಾಮ ಕಾರಿಯಾಗಿ ಯೋಜನೆ ಜಾರಿಯಾಗಿದೆ. ಇದರ ಉಪಯೋಗವನ್ನು ಹತ್ತಾರು ಗ್ರಾಮಗಳ ಜನರು ಪಡೆದುಕೊಳ್ಳುತ್ತಿದ್ದಾರೆ. ನೂರಾರು ಮಹಿಳೆಯರಿಗೆ ಉದ್ಯೋಗ ನೀಡಿದೆ. ಆ ಕುಟುಂಬಗಳ ಆರ್ಥಿಕ ವೃದ್ಧಿಗೆ ಸಹಕಾರಿಯಾಗಿದೆ.

ಸ್ವಚ್ಛ ಸಂಕೀರ್ಣ ಘಟಕ, ಶೆಡ್‌ ನಿರ್ಮಾಣ: ಗ್ರಾಮ ಗಳ ತಾಜ್ಯವನ್ನು ಸಂಗ್ರಹಣೆ ಮಾಡುವುದಕ್ಕೆ ಸರ್ಕಾರಿ ಜಾಗದಲ್ಲಿ ಈಗಾಗಲೇ ತಾಲೂಕಿನ 36 ಗ್ರಾಪಂ ಪೈಕಿ 26 ಗ್ರಾಪಂನಲ್ಲಿ ನರೇಗಾ ಯೋಜನೆಯಡಿ 26 ಸ್ವತ್ಛ ಸಂಕೀರ್ಣ ಘಟಕಗಳು ಪೂರ್ಣವಾಗಿದೆ. ತೆರೆದಕುಪ್ಪೆ, ಹುತ್ರಿದುರ್ಗ, ಕಗ್ಗರೆ ಗ್ರಾಪಂನವರು ತಮ್ಮ ಪಕ್ಕದ ಪಂಚಾ ಯಿತಿ ಘಟಕಗಳನ್ನು ಬಳಸುತ್ತಿದ್ದರೆ. ಇನ್ನೂ ಉಳಿದ 7 ಪಂಚಾಯಿತಿಗಳು ಖಾಲಿ ಇರುವ ಸರ್ಕಾರಿ ಕಟ್ಟಡದಲ್ಲಿ ಘನತಾಜ್ಯ ಘಟಕ ಆರಂಭ ಮಾಡಿದ್ದಾರೆ. ಎರಡಿಯೂರು ಗ್ರಾಪಂಗೆ ಇತ್ತೀಚಿಗಷ್ಟೇ ಜಿಲ್ಲಾಧಿಕಾರಿ ಗಳು ಮಂಜೂರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

36 ಗ್ರಾಪಂಗಳಿಗೆ ವಾಹನ: ಗ್ರಾಮೀಣ ಪ್ರದೇಶದಲ್ಲಿ ಉತ್ಪಾದನೆಯಾಗಿವ ಒಣ ಕಸ ಸಂಗ್ರಹ ಹಾಗೂ ನಿರ್ವ ಹಣೆಗಾಗಿ ತಾಲೂಕಿನ 36 ಗ್ರಾಪಂಗಳು 36 ಆಟೋ ಟಿಪ್ಪರ್‌ಗಳನ್ನು ಖರೀದಿಸಿದ್ದಾರೆ. ಪ್ರತಿ ಮನೆಗೂ ಎರಡು ಕಸದ ಬುಟ್ಟಿಗಳನ್ನು ವಿತರಣೆ ಮಾಡಲಾಗಿದೆ. ಆಟೋ ಟಿಪ್ಪರ್‌ಗಳು ಪ್ರತಿ ಗ್ರಾಮಗಳಿಗೆ ತೆರಳಿ ಕಸ ಸಂಗ್ರಹಣೆ ಮಾಡುತ್ತವೆ. ಕಸ ಸಂಗ್ರಹಣೆ ಮಾಡಿದ ಕಸವನ್ನು ಸ್ವಚ್ಛ ಸಂಕೀರ್ಣ ಘಟಕಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಪ್ಲಾಸ್ಟಿಕ್‌, ಗಾಜಿನ ವಸ್ತು, ಹಳೇ ಕಬ್ಬಿಣ ಮೊದಲಾದ ವಸ್ತುಗಳನ್ನು ಪ್ರತ್ಯೇಕವಾಗಿ ವಿಂಗಡಿಸಲಾಗುತ್ತಿದೆ.

Advertisement

ಕಸ ನಿರ್ವಹಣೆ ವಾಹನಕ್ಕೆ ಮಹಿಳೆಯರೇ ಚಾಲಕರು: ಗ್ರಾಪಂ ಮಟ್ಟದ ಸ್ವಸಹಾಯ ಸಂಘದ ಮಹಿಳೆಯರ ಒಕ್ಕೂಟಗಳಿಗೆ ವಾಹನ ಚಾಲನೆ ಹಾಗೂ ಘಟಕಗಳ ನಿರ್ವಹಣೆಯ ಹೊಣೆ ನೀಡಲಾಗಿದೆ. ಪತ್ರಿ ಗ್ರಾಪಂ ನಲ್ಲಿ ವಾಹನ ಚಾಲನೆ ತರಬೇತಿಯನ್ನು ಗ್ರಾಪಂನಿಂದ ಉಚಿತವಾಗಿ ಮಹಿಳೆಯರಿಗೆ ನೀಡಲಾಗಿದೆ. ಈಗಾ ಗಲೇ 36 ಚಾಲಕರು ಹಾಗೂ 108 ಜನ ಸಹಾಯಕ ಮಹಿಳೆಯರು ತರಬೇತಿ ಪಡೆದು, ಕೆಲಸ ಆರಂಭಿಸಿ ದ್ದಾರೆ. ಇದರಿಂದ ಮಹಿಳಾ ಸಬಲೀಕರಣ ಮತ್ತು ಪರಿಸರ ಸುಸ್ಥಿರತೆಯ ಎರಡು ಉದ್ದೇಶ ಒಳಗೂಂಡಿದೆ. ಈಗ ತ್ಯಾಜ್ಯವನ್ನು ಸರಿಯಾಗಿ ಸಂಗ್ರಹಿಸಿ ಬೇರ್ಪಡಿಸಲಾಗುತ್ತಿದೆ. ಸಂಸ್ಕರಣೆಗಾಗಿ ವಿಲೇವಾರಿ ಮಾಡಲಾಗು ತ್ತಿದೆ. ಮಹಿಳಾ ಚಾಲಕರು ಹಾಗೂ ಸಹಾಯಕಿಯರಿಗೆ ಪಂಚಾಯ್ತಿ ವತಿಯಿಂದ ವೇತನ ನೀಡಲಾಗುತ್ತಿದೆ. ಸಂಗ್ರಹಿಸಿದ ಪ್ಲಾಸ್ಟಿಕ್‌ ವಸ್ತುಗಳನ್ನು ಲೋಕೋಪಯೋಗಿ ಇಲಾಖೆ ಖರೀದಿಸಿ, ಆ ಪ್ಲಾಸ್ಟಿಕ್‌ ವಸ್ತುಗಳನ್ನು ಡಾಂಬರೀಕರಣಕ್ಕೆ ಬಳಸಲಾಗುತ್ತಿದೆ ಎನ್ನಲಾಗಿದೆ.

ಗೃಹ ಶೌಚಾಲಯ, ಇಂಗು ಗುಂಡಿ ನಿರ್ಮಾಣ: ನರೇಗಾ ಯೋಜನೆ ಹಾಗೂ ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬಗಳಿಗೂ ವೈಯಕ್ತಿಕ ಗೃಹ ಶೌಚಾಲಯವನ್ನು ಕಟ್ಟಿಕೊಳ್ಳಲು ಹಾಗೂ ನರೇಗಾ ಯೋಜನೆಯಡಿ ಮನೆ ಮಂದೆ ಇಂಗು ಗುಂಡಿ ನಿರ್ಮಾಣಕ್ಕೆ 6800 ರೂ., ಸಹಾಯ ಧನ ನೀಡುತ್ತಿದೆ. ಈಗಾಗಲೇ ತಾಲೂಕಿನಲ್ಲಿ 998 ಇಂಗು ಗುಂಡಿಗಳು ಪೂರ್ಣಗೂಂಡಿದೆ. ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೂ ಆದ್ಯತೆ ನೀಡಲಾಗುತ್ತಿದೆ.

ಸಮುದಾಯ ಶೌಚಾಲಯ: ತಾಲೂಕಿನಲ್ಲಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲು ಸಾಧ್ಯವಾಗದಿರುವ ಮನೆಗಳಿಗೆ ಬಹಿರ್ದೆಸೆ ಮುಕ್ತ ಸುಸ್ಥಿರತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಭಕ್ತರಹಳ್ಳಿ, ತೆರೆದ ಕುಪ್ಪೆ, ಎಡಿಯೂರು, ಹೊಸಕೆರೆ, ಕೋಡಿಹಳ್ಳಿಯಲ್ಲಿ ಸಮುದಾಯ ಶೌಚಾಲಯ ಕಾಮಗಾರಿ ಪ್ರಗತಿ ಯಲ್ಲಿದೆ. ಗ್ರಾಮೀಣ ಜನರು ದಿನನಿತ್ಯ ಬಳಕೆ ನೀರು ಚರಂಡಿ ಮೂಲಕ ಸಮುದಾಯ ಇಂಗು ಗುಂಡಿ ಯಲ್ಲಿ ಇಂಗುವಂತೆ ನರೇಗಾ ಯೋಜನೆಯಡಿ ಪತ್ರಿ ಗ್ರಾಮಗಳಿಗೂ ಚರಂಡಿ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ 33171 ಮೀಟರ್‌ ಉದ್ದ ಕಾಮಗಾರಿ ಪ್ರಗತಿಯಲ್ಲಿದ್ದು, 17565 ಮೀಟರ್‌ ಉದ್ದ ಕಾಮಗಾರಿ ಪೂರ್ಣಗೊಂಡಿದೆ. ಸಮುದಾಯ ಇಂಗು ಗುಂಡಿ 104 ಪ್ರಗತಿಯಲ್ಲಿದ್ದು, 27 ಕಾಮಗಾರಿಗಳು ಮುಕ್ತಾಯಗೂಂಡಿದೆ ಎಂದು ತಿಳಿದು ಬಂದಿದೆ.

ಕಸ ಮುಕ್ತ ಗ್ರಾಮಕ್ಕೆ ಸಹಕಾರ ನೀಡಿ:

ನಡೇಮಾವಿನಪುರ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ತೆರಳಿ ಕಸ ಸಂಗ್ರಹ ಮಾಡಲಾಗುತ್ತಿದೆ.  ಇದು ಗ್ರಾಮೀಣ ಪ್ರದೇಶದ ಸ್ವಚ್ಛತೆಗೆ ಪೂರಕವಾಗಿದೆ. ಸಂಗ್ರಹಿಸಿದ ಕಸವನ್ನು ಸ್ವತ್ಛ ಸಂಕೀರ್ಣದಲ್ಲಿ ಪ್ರತ್ಯೇಕ ಮಾಡಲಾಗುತ್ತಿದ್ದು, ಸ್ವತ್ಛ ಭಾರತ್‌ ಮಿಷನ್‌ ಯೋಜನೆಯಡಿ ಇದು ಉತ್ತಮ ಯೋಜನೆಯಾಗಿದೆ. ಇದರ ಸದುಪಯೋಗವನ್ನು ಜನರು ಪಡೆದುಕೊಂಡು ಕಸ ಮುಕ್ತ ಗ್ರಾಮಕ್ಕೆ ಸಹಕಾರ ನೀಡಬೇಕು ಎಂದು ನಡೇಮಾವಿನಪುರ ಗ್ರಾಪಂ ಅಧ್ಯಕ್ಷ ಜೈದೀಪ್‌ಕುಮಾರ್‌(ದೀಪು) ತಿಳಿಸಿದ್ದಾರೆ.

ಜನರಿಗೆ ಆರೋಗ್ಯ, ಸ್ವಚ್ಛತೆಯ ಅರಿವು:

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಪ್ಲಾಸ್ಟಿಕ್‌ ಮತ್ತು ಘನ ತ್ಯಾಜ್ಯವನ್ನು ಸುಡಲಾಗುತ್ತದೆ. ಇದು ವಿಷಕಾರಿ ಅನಿಲಗಳನ್ನು ಹೊರ ಸೂಸುತ್ತದೆ ಅಥವಾ ಬಯಲು, ಚರಂಡಿಗಳು, ನೀರಿನ ಮೂಲಗಳು ಇತ್ಯಾದಿಗಳಲ್ಲಿ ಘನತ್ಯಾಜ್ಯ ಶೇಖರಣೆಯಾಗು ತ್ತದೆ. ಇದು ಪರಿಸರ ಹಾಗೂ ಮಾನವನ, ಅದ ರಲ್ಲೂ ಮಕ್ಕಳ ಆರೋಗ್ಯದ ಮೇಲೆ ದುಷ್ಟಪರಿ ಣಾಮ ಭೀರುತ್ತಿದೆ. ಹೀಗಾಗಿ ಜನರಿಗೆ ಹರಿವು ಮೂಡಿಸುವ ಉದ್ದೇಶದಿಂದ ತಾಲೂಕಿನಲ್ಲಿ ಮೂರು ಹಂತದಲ್ಲಿ ಯೋಜನೆ ರೂಪಿಸಿಕೊಂಡು ಜನರಿಗೆ ಆರೋಗ್ಯ, ಸ್ವತ್ಛತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಾಪಂ ಇಒ ಎ.ಜೋಸೆಫ್‌ ತಿಳಿಸಿದ್ದಾರೆ.

-ಕೆ.ಎನ್‌.ಲೋಕೇಶ್‌

Advertisement

Udayavani is now on Telegram. Click here to join our channel and stay updated with the latest news.

Next