Advertisement

ಭಾರತದ ಸ್ವಚ್ಛನಗರಿ ಪಟ್ಟಿ ರಿಲೀಸ್; ಇಂಧೋರ್ ನಂಬರ್ 1, ಮೈಸೂರು ನಂ.5

01:20 PM May 04, 2017 | Team Udayavani |

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 434 ನಗರಗಳಲ್ಲಿ ಸಮೀಕ್ಷೆ ನಡೆಸಿದ್ದು, ಈ ಬಾರಿಯ ಸ್ವಚ್ಛ ನಗರ ಪಟ್ಟಿಯಲ್ಲಿ ಕರ್ನಾಟಕದ ಮೈಸೂರು ಅಗ್ರಸ್ಥಾನವನ್ನು ಕಳೆದುಕೊಂಡಿದೆ. ದೇಶದಲ್ಲಿ ಮಧ್ಯಪ್ರದೇಶದ ಇಂಧೋರ್ ಪ್ರಥಮ ಸ್ಥಾನ ಪಡೆದಿದ್ದು, 2ನೇ ಸ್ಥಾನ ಕೂಡಾ ಭೋಪಾಲ್ ಪಾಲಾಗಿದೆ. ಉತ್ತರಪ್ರದೇಶದ ಗೊಂಡಾ ನಗರ ಅತ್ಯಂತ ಕೊಳಕು ನಗರ ಎಂಬ ಕುಖ್ಯಾತಿ ಪಡೆದಿದೆ.

Advertisement

ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಭಾರತದ ಸ್ವಚ್ಛನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಆಂಧ್ರಪ್ರದೇಶದ ಬಂದರು ನಗರಿ ವಿಶಾಖಪಟ್ಟಣಂ 3ನೇ ಸ್ಥಾನ, ಗುಜರಾತ್ ನ ಸೂರತ್ 4ನೇ ಸ್ಥಾನ, ಕರ್ನಾಟಕದ ಮೈಸೂರು 5ನೇ ಸ್ಥಾನ, ತಮಿಳುನಾಡಿನ ತಿರುಚಿರಾಪಳ್ಳಿ 6ನೇ ಸ್ಥಾನ, ನವದೆಹಲಿಯ ಮುನ್ಸಿಪಲ್ ಕಾರ್ಪೋರೇಶನ್ 7ನೇ ಸ್ಥಾನ, ಮಹಾರಾಷ್ಟ್ರದ ನವಿ ಮುಂಬೈ 8ನೇ ಸ್ಥಾನ ಹಾಗೂ ಆಂಧ್ರಪ್ರದೇಶದ ತಿರುಪತಿ 9ನೇ ಸ್ಥಾನ, ಗುಜರಾತ್ ನ ವಡೋದರಾ 10ನೇ ಸ್ಥಾನ ಪಡೆದಿದೆ.

ಕಳೆದ ವರ್ಷ ದೇಶದ ಸ್ವಚ್ಛತಾ ನಗರಿಯಲ್ಲಿ ಕರ್ನಾಟಕದ ಮೈಸೂರು ನಂಬರ್ 1 ಸ್ಥಾನ ಪಡೆದಿದ್ದು, ಈ ಬಾರಿ 5ನೇ ಸ್ಥಾನಕ್ಕೆ ಕುಸಿದಿದ್ದು, ಗುಜರಾತ್ ರಾಜ್ಯದ ಬಗ್ಗೆ ಸಚಿವ ನಾಯ್ಡು ಅವರು ಶ್ಲಾಘನೆ ವ್ಯಕ್ತಪಡಿಸಿದರು. ಟಾಪ್ 10 ನಗರಗಳಲ್ಲಿ ಹಾಗೂ ಟಾಪ್ 50 ನಗರಗಳಲ್ಲಿ ಗುಜರಾತ್ ಸ್ಥಾನ ಪಡೆದಿದೆ ಎಂದು ಹೇಳಿದರು.

ಹಿಂದಿನ ಸಮೀಕ್ಷೆಗೆ ಹೋಲಿಸಿದಲ್ಲಿ ಈ ಬಾರಿ ಮಧ್ಯಪ್ರದೇಶ ಮತ್ತು ಜಾರ್ಖಂಡ್ ರಾಜ್ಯ ಸ್ವಚ್ಚತೆಯ ಪ್ರಮಾಣ ಏರಿಕೆಯಾಗಿದೆ.  ಪಶ್ಚಿಮಬಂಗಾಳ ಸರ್ಕಾರ ಸ್ವಚ್ಛ ಸರ್ವೇಕ್ಷಣ್ ನಲ್ಲಿ ಭಾಗವಹಿಸಿಲ್ಲ, ಹಾಗಾಗಿ ಪಶ್ಚಿಮಬಂಗಾಳಕ್ಕೆ ಯಾವುದೇ ಸ್ಥಾನ ಸಿಕ್ಕಿಲ್ಲ ಎಂದು ನಾಯ್ಡು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next