Advertisement

ಸ್ವಚ್ಛ ಸರ್ವೇಕ್ಷಣ ಸಹಿ ಅಭಿಯಾನಕ್ಕೆ ಚಾಲನೆ

10:44 AM Jan 15, 2020 | Suhan S |

ಧಾರವಾಡ: ಕೇಂದ್ರ ನಗರಾಭಿವೃದ್ಧಿ ಮತ್ತು ವಸತಿ ಮಂತ್ರಾಲಯ ಆರಂಭಿಸಿರುವ ಸ್ವಚ್ಛ ಸರ್ವೇಕ್ಷಣ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರ ಸಹಿ ಅಭಿಯಾನ ಮತ್ತು ಸೆಲ್ಪಿ ಪಾಯಂಟ್‌ಗೆ ಜಿಲ್ಲಾಧಿಕಾರಿ ದೀಪಾ ಚೋಳನ್‌ ಡಿಸಿ ಕಚೇರಿ ಆವರಣದಲ್ಲಿ ಮಂಗಳವಾರ ಚಾಲನೆ ನೀಡಿದರು.

Advertisement

ನಂತರ ಮಾತನಾಡಿದ ಅವರು, ನಗರದ ಸ್ವಚ್ಛತೆಮತ್ತು ನೈರ್ಮಲ್ಯ ಕಾಪಾಡಲು ಪ್ರತಿಯೊಬ್ಬ ನಾಗರಿಕರ ಸಹಕಾರ, ಸಲಹೆ ಅಗತ್ಯವಾಗಿದೆ. ಪಾಲಿಕೆಯಿಂದ ಪ್ರತಿ ವಾರ್ಡ್‌ಗಳಲ್ಲಿ ನಿಯಮಿತವಾಗಿ ಸಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಭಾಗವಹಿಸಬೇಕು. ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿ ದೂರುಗಳನ್ನು ಸ್ವಚ್ಛತಾ ಆ್ಯಪ್‌ ಬಳಸುವ ಮೂಲಕ ದಾಖಲಿಸಬಹುದು. ಸ್ವಚ್ಛತೆಯ ಬಗ್ಗೆ ಸಲಹೆಗಳು, ಅಭಿಪ್ರಾಯಗಳನ್ನು ಆ್ಯಪ್‌ ಮೂಲಕ ತಿಳಿಸಬಹುದು ಎಂದು ಹೇಳಿದರು.

ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಮಾತನಾಡಿ, ಮಹಾನಗರವನ್ನು ಸ್ವಚ್ಛಮತ್ತು ಹಸಿರುಯುಕ್ತ ಸುಂದರ ನಗರವನ್ನಾಗಿ ರೂಪಿಸಲು ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಸ್ವಚ್ಛತಾ ಆ್ಯಪ್‌ ಬಳಸುವ ಮೂಲಕ ಸಕ್ರಿಯವಾಗಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದರು.

ಮಹಾನಗರಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಮಾತನಾಡಿ, ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಅವಳಿನಗರದ ನಾಗರಿಕರು ಸಕ್ರಿಯವಾಗಿ ಪಾಲ್ಗೊಳ್ಳಲು ಗೂಗಲ್‌ ಪ್ಲೇ ಸ್ಟೋರ್‌ ನಿಂದ ಸ್ವಚ್ಛತಾ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ನೇರವಾಗಿ ತಮ್ಮ ಸ್ಥಳದಲ್ಲಿನ ಸ್ವಚ್ಛತೆ, ನೈರ್ಮಲ್ಯ ಕುರಿತು ದೂರು-ಸಲಹೆಗಳನ್ನು ಸಲ್ಲಿಸಬಹುದು. ನಾಗರಿಕರು ಉತ್ತಮ ಅಭಿಪ್ರಾಯ ದಾಖಲಿಸಿದಲ್ಲಿ ಮಹಾನಗರಕ್ಕೆ ಸ್ವಚ್ಛ ಸರ್ವೇಕ್ಷಣದಲ್ಲಿ ಉತ್ತಮ ರ್‍ಯಾಂಕ್‌ ಬರುತ್ತದೆ. ಇದರಿಂದಾಗಿ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು. ಉಪವಿಭಾಗಾಧಿಕಾರಿ ಮಹಮ್ಮದ್‌ ಜುಬೇರ, ಸ್ವಚ್ಛ ಸರ್ವೇಕ್ಷಣ ಅಭಿಯಾನದ ವಿಜಯಕುಮಾರ್‌ ಇನ್ನಿತರರಿದ್ದರು.

ಸ್ವಚ್ಛ ಸರ್ವೇಕ್ಷಣೆ ಎಂದರೆ? :  ಭಾರತ ಸರ್ಕಾರದ ನಗರಾಭಿವೃದ್ಧಿ ಮತ್ತು ವಸತಿ ಮಂತ್ರಾಲಯವು ರಾಷ್ಟ್ರದ ನಗರಗಳ ಸ್ವತ್ಛತೆ ಮತ್ತು ನೈರ್ಮಲ್ಯತೆ ಬಗೆಗೆ ಜನಜಾಗೃತಿ ಮೂಡಿಸಲು ಸ್ವಚ್ಛ ಸರ್ವೇಕ್ಷಣ-2020 ಅಭಿಯಾನ ಹಮ್ಮಿಕೊಂಡಿದೆ. ಇದರಲ್ಲಿ 6,000 ಅಂಕಗಳಿವೆ. ಸಾರ್ವಜನಿಕರ ಪ್ರತಿಕ್ರಿಯೆಗೆ 1500 ಅಂಕ ನಿಗದಿಪಡಿಸಲಾಗಿದೆ. ಹು-ಧಾ ಮಹಾನಗರವು ಅಗ್ರ ಶ್ರೇಣಿ ಪಡೆಯಲು ಸಾರ್ವಜನಿಕರ ಪ್ರತಿಕ್ರಿಯೆ ಮುಖ್ಯವಾಗಿದೆ. ಸ್ವಚ್ಛ ಸರ್ವೇಕ್ಷಣ ತಂಡವು ಕೇಳುವ ಪ್ರಶ್ನೆಗಳಿಗೆ ನಾಗರಿಕರು ಸಕಾರಾತ್ಮಕವಾಗಿ ಉತ್ತರಿಸಿ ಹುಬ್ಬಳ್ಳಿ-ಧಾರವಾಡ ನಗರವು ಉತ್ತಮ ಶ್ರೇಣಿ  ಪಡೆಯುವಂತಾಗಬೇಕಿದೆ. ಸ್ವಚ್ಛ ಸರ್ವೇಕ್ಷಣ ಪರಿವೀಕ್ಷಣೆ ತಂಡವು ಸಾರ್ವಜನಿಕರನ್ನು ನೇರವಾಗಿ ಸಂದರ್ಶಿಸುವ ಅಥವಾ ಧ್ವನಿಮುದ್ರಿತ ಕರೆಗಳ ಮೂಲಕ ಉತ್ತರಗಳನ್ನು ಪಡೆಯಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next