Advertisement

ಗಾಣಗಾಪುರದಲ್ಲಿ ಸ್ವಚ್ಛ ಸಂಕೀರ್ಣ’ಉದ್ಘಾಟನೆ ಸಂಕೀರ್ಣ’ಉದ್ಘಾಟನೆ

03:31 PM Oct 03, 2020 | Suhan S |

ಕಲಬುರಗಿ: ಗ್ರಾಮಗಳನ್ನು ಸ್ವಚ್ಛ ಮತ್ತು ಸುಂದರವನ್ನಾಗಿಸುವ ಹಾಗೂ ಆರೋಗ್ಯಕರ ಮತ್ತು ತ್ಯಾಜ್ಯ ಮುಕ್ತವಾಗಿಸುವ ನಿಟ್ಟಿನಲ್ಲಿ ಸ್ವಚ್ಛ ಭಾರತ್‌ ಮಿಷನ್‌(ಗ್ರಾ) ಯೋಜನೆಯಡಿ ದತ್ತಾತ್ರೇಯನ ಕ್ಷೇತ್ರವಾದ ದೇವಲ ಗಾಣಗಾಪುರದಲ್ಲಿ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕಗಳ ” ಸ್ವಚ್ಛ ಸಂಕೀರ್ಣ’ ಸ್ಥಾಪಿಸಿರುವುದು ಗ್ರಾಮದಲ್ಲಿ ಸ್ವತ್ಛತೆ ಮತ್ತು ಪರಿಸರ ಕಾಪಾಡಲು ಹೊಸ ಅಧ್ಯಾಯ ನಿರ್ಮಿಸಿದಂತಾಗಿದೆ ಎಂದು ಪ್ರೊಬೇಷನರ್‌ ಐಎಎಸ್‌ ಅಧಿಕಾರಿ ಡಾ| ಆಕಾಶ ಶಂಕರ ಹೇಳಿದರು.

Advertisement

ಅಫಜಲಪುರ ತಾಲೂಕಿನ ದೇವಲ ಗಾಣಗಾಪುರದಲ್ಲಿ ಶುಕ್ರವಾರ ಜಿಪಂ ವತಿಯಿಂದ ಸ್ವಚ್ವೋತ್ಸವ ನಿತ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ” ಸ್ವಚ್ಛ ಸಂಕೀರ್ಣ’ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕದ ಏಕರೂಪ ಬ್ರ್ಯಾಂಡಿಂಗ್‌ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವತ್ಛತೆಯ ಪ್ರತೀಕವಾದ ಮಹಾತ್ಮ ಗಾಂಧೀಜಿಯವರ ಜನ್ಮ ದಿನದಂದೇ ಸ್ವತ್ಛ ಸಂಕೀರ್ಣ ಕಟ್ಟಡ ಉದ್ಘಾಟಿಸಿರುವುದು ಸಂತಸ ತಂದಿದೆ. ಸಮರ್ಪಕ ತ್ಯಾಜ್ಯ ವಿಲೇವಾರಿ, ಸ್ವಚ್ಛ ತೆ, ಪರಿಸರ ಕಾಳಜಿ, ಶೌಚಾಲಯ ಬಳಕೆಯಲ್ಲಿ ಜಿಲ್ಲೆ ಹಿಂದಿದ್ದು, ಈ ಘಟಕ ಸ್ಥಾಪನೆಯಿಂದ ಜನರಲ್ಲಿ ಸ್ವತ್ಛತೆ ಬಗ್ಗೆ ಹೆಚ್ಚಿನ ಅರಿವು ಮೂಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಪಂಚಾಯಿತಿ ಉಪ ಕಾರ್ಯದರ್ಶಿಯಾದ ಸ್ವಚ್ಛ ಭಾರತ್‌ ಮಿಷನ್‌ (ಗ್ರಾ) ನೋಡಲ್‌ ಅಧಿಕಾರಿ ಎಂ.ಡಿ. ಇಸ್ಮಾಯಿಲ್‌ ಮಾತನಾಡಿ, ಗ್ರಾಮಗಳಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗಾಗಿ ಜಿಲ್ಲೆಯಲ್ಲೇ ಉತ್ತಮ ಸೌಲಭ್ಯವುಳ್ಳ ಮತ್ತು ಮಾದರಿಯಾದ “ಸ್ವಚ್ಛಸಂಕೀರ್ಣ’ ಇಂದು ಗ್ರಾಮಸ್ಥರಿಗೆ ಸಮರ್ಪಿಸಲಾಗಿದೆ ಎಂದರು.

ಅಫಜಲಪುರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್‌ ನಬಿ, ದೇವಲ ಗಾಣಗಾಪುರ ಪಿಡಿಒ ಗುರುನಾಥ ಹರಿದಾಸ ಮಾತನಾಡಿದರು. ಇದೇಸಂದರ್ಭದಲ್ಲಿ ಯೋಜನೆ ಬಗ್ಗೆ ಅರಿವು ಮೂಡಿಸುವ ಭಿತ್ತಿ ಪತ್ರಗಳ ಬಿಡುಗಡೆ ಮಾಡಲಾಯಿತು. ಜತೆಗೆ ಸಾಂಕೇತಿಕವಾಗಿ ಐದು ಜನ ಗ್ರಾಮಸ್ಥರಿಗೆ ಮನೆಯಲ್ಲಿ ಕಸ ವಿಂಗಡನೆ ಮಾಡಿ ಇಡುವ ಕಸದಡಬ್ಬಿಗಳನ್ನು ವಿತರಿಸಲಾಯಿತು. ಕಸ ಸಂಗ್ರಹಣೆಗೆ ಗ್ರಾಮದಲ್ಲಿ ಸಂಚರಿಸುವ ಸ್ವಚ್ಛ ವಾಹಿನಿಗೂ ಚಾಲನೆ ನೀಡಲಾಯಿತು.

Advertisement

ಇದಕ್ಕೂ ಮುನ್ನ ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಬಾಪುವಿನ ಭಾವಚಿತ್ರಕ್ಕೆ ಮಾಲಾರ್ಪಣೆಮಾಡಿದ ಗಣ್ಯರು ಗೌರವ ನಮನ ಸಲ್ಲಿಸಿದರು. ಸ್ವಚ್ಛ ಭಾರತ್‌ ಮಿಷನ್‌ ಕಾರ್ಯಕ್ರಮದ ಸಂಯೋಜಕರಾದ ಪಾಪರೆಡ್ಡಿ ಶೇರಿಕಾರ, ಗುರುಬಾಯಿ, ಮಲ್ಲಿಕಾರ್ಜುನ ಕುಂಬಾರ, ಭಾಗಪ್ಪ,ತಾಪಂನರೇಗಾ ಯೋಜನೆಯ ಸಹಾಯಕ ನಿರ್ದೇಶಕ  ರಮೇಶ ಪಾಟೀಲ, ಸಿಬ್ಬಂದಿಯಾದ ಸಿದ್ರಾಮ, ಶಿವಪ್ಪ ಪಟ್ಟೇದ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಮನೆಯಲ್ಲಿ ಕಸ ವಿಂಗಡನೆ ಮಾಡಲು ಗ್ರಾಮದ ಪ್ರತಿ ಮನೆಗೆ ಹಸಿ ಮತ್ತು ಒಣ ಕಸಗಾಗಿ ಎರಡು ಕಸದ ಡಬ್ಬಿಗಳನ್ನು ನೀಡಲಾಗುತ್ತದೆ. ಪ್ರತಿದಿನ ಸ್ವತ್ಛತಾ ವಾಹಿನಿಯೊಂದಿಗೆ ಸಿಬ್ಬಂದಿ ಮನೆ-ಮನೆಗೆ ಕಸ ಸಂಗ್ರಹಣೆಗೆ ಬರಲಿದ್ದು, ಸಾರ್ವಜನಿಕರು ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿರಿಸಿ ನೀಡುವ ಮೂಲಕ ಸ್ವತ್ಛ ಗ್ರಾಮ ನಿರ್ಮಾಣಕ್ಕೆ ಸಹಕಾರ ನೀಡಬೇಕು. – ಎಂ.ಡಿ. ಇಸ್ಮಾಯಿಲ್‌, ನೋಡಲ್‌ ಅಧಿಕಾರಿ, ಸ್ವಚ್ಛ ಭಾರತ್‌ ಮಿಷನ್‌ (ಗ್ರಾ)ರ್ಣ’ ಉದ್ಘಾಟನೆ

Advertisement

Udayavani is now on Telegram. Click here to join our channel and stay updated with the latest news.

Next