Advertisement

ಸ್ವಚ್‌  ಭಾರತ್‌ ಅಭಿಯಾನ 2ನೇ ವರ್ಷ ಪೂರ್ಣ

01:30 AM Jan 17, 2019 | Team Udayavani |

ಉಡುಪಿ: ಗಾಂಧಿ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡ ಸ್ವಚ್‌ ಭಾರತ್‌ ಅಭಿಯಾನವು ದ್ವಿತೀಯ ವರ್ಷ ಪೂರ್ಣಗೊಂಡ ಆಚರಣೆ ಸಮಾರಂಭವು ಆಸ್ಪತ್ರೆಯ ವಠಾರದಲ್ಲಿ ನಡೆಯಿತು. ಆಸ್ಪತ್ರೆ ಎದುರಿನ ಮಾರ್ಗದ ಇಕ್ಕೆಲಗಳ ವಸತಿ, ವಾಣಿಜ್ಯ ಮಳಿಗೆಗಳಿಗೆ ಜನಜಾಗೃತಿ ಕರಪತ್ರಗಳನ್ನು ಹಂಚಿ ಅವರ ಸಹಕಾರದೊಂದಿಗೆ ಸ್ವತ್ಛ ಭಾರತ್‌ ಅಭಿಯಾನ ನಡೆಸಲಾಯಿತು. 

Advertisement

ಸ್ವತ್ಛ ಭಾರತ್‌ ಅಭಿಯಾನ ಮತ್ತು ಸ್ವತ್ಛ ಸುಂದರ ಉಡುಪಿ ನಗರ ಜನಾರೋಗ್ಯಕ್ಕೆ ಆಧಾರ ಎಂಬಂತೆ ನಮ್ಮ ನಗರ ಸ್ವತ್ಛ ಸುಂದರವಾಗಿದ್ದರೆ ನಾವೆಲ್ಲರೂ ಆರೋಗ್ಯವಂತರಾಗಿ ಬಾಳಲು ಸಾಧ್ಯ ಎನ್ನುವ ಧ್ಯೇಯ ವಾಕ್ಯದೊಂದಿಗೆ 2017ರ ಜ. 12ರ ವಿವೇಕಾನಂದರ ಜನ್ಮದಿನದ‌ಂದು ಆರಂಭಿಸಲಾಯಿತು. ಪ್ರತೀ ರವಿವಾರ ಬೆಳಗ್ಗೆ 6 – 7ರ ತನಕ ಸಿಟಿಬಸ್‌ ನಿಲ್ದಾಣದ ಗಾಂಧಿ ಆಸ್ಪತ್ರೆ ಎದುರಿನ ರಸ್ತೆಯಿಂದ ಕಲ್ಸಂಕ ವೃತ್ತದವರೆಗಿನ ರಾಜ ಮಾರ್ಗದ ಇಕ್ಕೆಲ ಗಳಲ್ಲಿಯೂ ಸ್ವತ್ಛತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಜನಜಾಗೃತಿ ಅಂಗವಾಗಿ ಪರಿಸರದ ಸ್ವತ್ಛತೆ ಕಾಪಾಡಲು ಮಾರ್ಗದ ಇಕ್ಕೆಲಗಳಲ್ಲಿ ಕಸದ ಬುಟ್ಟಿಗಳನ್ನು (ಕಾಗದ/ ಪ್ಲಾಸ್ಟಿಕ್‌ ಪೊಟ್ಟಣ ಹಾಕಲು) ಒದಗಿಸ ಲಾಗಿದ್ದು, ರಸ್ತೆಯ ವಿಭಾಜಕಗಳಲ್ಲಿ ಗಿಡಗಳನ್ನು ನೆಟ್ಟು, ಸ್ವತ್ಛತೆ ಬಗ್ಗೆ ಅರಿವು ಮೂಡಿಸಲು ಗೋಡೆ ಬರಹದ ಚಿತ್ರ ಸಂದೇಶ ಹಾಕಲಾಗಿದೆ. ಸ್ವತ್ಛತಾ ಆಂದೋಲನವನ್ನು ಆಸ್ಪತ್ರೆಯ ಸಿಬಂದಿಗಳು, ಸಾರ್ವಜನಿಕರ ಸಹಕಾರದಿಂದ  ಸತತ 105 ವಾರಗಳಿಂದ ನಡೆಸಿಕೊಂಡು ಬರಲಾಗುತ್ತಿದೆ.

ಆಸ್ಪತ್ರೆಯ ಆಡಳಿತ ನಿರ್ದೇಶಕ ಎಂ. ಹರಿಶ್ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಆಸ್ಪತ್ರೆಯ ಎಲ್ಲ ಸಿಬಂದಿ ಮತ್ತು ಪ್ರತೀ ವಾರ ಸ್ವಚ್‌f ಭಾರತ್‌ ಅಭಿಯಾನದಲ್ಲಿ ಪಾಲ್ಗೊಳ್ಳುವವರಿಗೆ ಕೃತಜ್ಞತೆ ಸಲ್ಲಿಸಿದರು. 

ಡಾ| ಸುರೇಶ್‌ ಶೆಣೈ, ಡಾ| ಹರ್ಷ ಶೆಟ್ಟಿ, ಡಾ| ಶುಭಾ, ಲಕ್ಷಿ¾à ಹರಿಶ್ಚಂದ್ರ, ಸಿಂಡಿಕೇಟ್‌ ಬ್ಯಾಂಕ್‌ನ ನಿವೃತ್ತ 
ಅಧಿಕಾರಿ ನರಸಿಂಹಮೂರ್ತಿ,  ಪ್ರೊ| ಕೆ.ಎಸ್‌. ಅಡಿಗ ದಂಪತಿ, ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಹಯವದನ ಭಟ್‌, ನವೀನ್‌ ಕುಮಾರ್‌, ರಮೇಶ್‌, ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ, ಟ್ಯಾಪ್ಮಿ ಮಣಿಪಾಲದ ಸೋಶಿಯಲ್‌ ಎಂಡೋವರ್‌ ಗ್ರೂಪ್‌ನ ವಿಕಾಸ್‌ , ಆಸ್ಪತ್ರೆಯ ಸಿಬಂದಿ ವರ್ಗ ಮತ್ತಿತರರು  ಉಪಸ್ಥಿತರಿದ್ದರು.  

Advertisement

ಆರಂಭದ ದಿನಗಳಲ್ಲಿ ಅಭಿಯಾನಕ್ಕೆ ಪ್ರೋತ್ಸಾಹಿಸಿದ ದಿ| ಬೆನೆಡಿಕ್ಟ್ ಮಾರ್ಟಿಸ್‌ ಮೂಡುಬೆಳ್ಳೆ ಅವರನ್ನು ಸ್ಮರಿಸಲಾಯಿತು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ|  ವ್ಯಾಸರಾಜ ತಂತ್ರಿ  ಕಾರ್ಯಕ್ರಮ ನಿರೂಪಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next