ಚಿಕ್ಕಬಳ್ಳಾಪುರ: ಆಂಧ್ರದ ಗಡಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಪತ್ತೆಗಾಗಿ ಜಿಲ್ಲೆಯಲ್ಲಿ ಇದುವರೆಗೂ ಬರೋ ಬ್ಬರಿ 10 ಸಾವಿರಕ್ಕೂ ಅಧಿಕ ಮಂದಿಗೆ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಆ ಪೈಕಿ ಇದುವರೆಗೂ 136 ಪ್ರಕರಣ ಗಳಷ್ಟೇ ಕೋವಿಡ್ 19 ಪಾಸಿಟಿವ್ ಬಂದಿವೆ.
ಕೋವಿಡ್ 19 ಆರ್ಭಟ ಆರಂಭಗೊಂಡ ದಿನದಿಂದ ಜಿಲ್ಲೆ ಯಲ್ಲಿ ಇದುವರೆಗೂ ಒಟ್ಟು 10,124 ಮಂದಿಗೆ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆ ಸಂಗ್ರಹಿಸಲಾಗಿದ್ದು, ಆ ಪೈಕಿ 9,319 ಮಂದಿಗೆ ಕೋವಿಡ್ 19 ನೆಗೆಟಿವ್ ಬಂದಿದ್ದರೆ ಉಳಿದ 136 ಮಂದಿಗೆ ಪಾಸಿಟಿವ್ ಬಂದಿದ್ದು, ಕೇವಲ 3 ಮಂದಿ ಕೋವಿಡ್ 19 ಸೋಂಕಿಗೆ ಬಲಿಯಾಗಿದ್ದಾರೆ.
ಮಹಾ ವಲಸೆ ಕಂಟಕ: ಜಿಲ್ಲೆಯಲ್ಲಿ ಕಳೆದ ಮಾ.21 ರಂದು ಆರಂಭಗೊಂಡ ಸೋಂಕಿತರ ಪತ್ತೆ ಕಾರ್ಯ ಜಿಲ್ಲೆಯಲ್ಲಿ ಮುಂದುವರಿ ದಿದ್ದು, ವಿಶೇಷವಾಗಿ ಮಹಾ ರಾಷ್ಟ್ರದ ಮುಂಬೈನಿಂದ ಜಿಲ್ಲೆಗೆ ಆಗಮಿಸಿ ರುವ ವಲಸೆ ಕಾರ್ಮಿಕರಲ್ಲಿ ಸುಮಾರು 105 ಮಂದಿಗೆ ಪಾಸಿಟಿವ್ ಬಂದಿರುವುದು ಜಿಲ್ಲೆ ಯಲ್ಲಿ ಸೋಂಕು ಆರ್ಭಟಕ್ಕೆ ಕಾರಣವಾಗಿದೆ.
ಹಳ್ಳಿಗಳಿಗೂ ವಿಸ್ತರಣೆ: ಆರಂಭದಲ್ಲಿ ಕೇವಲ ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರಕ್ಕೆ ಸೀಮಿತವಾಗಿದ್ದ ಸೋಂಕು ಈಗ ಚಿಂತಾಮಣಿ ಹಾಗೂ ಬಾಗೇಪಲ್ಲಿ ತಾಲೂಕುಗಳನ್ನು ಪ್ರವೇ ಶಿಸಿದ್ದು, ವಿಶೇಷವಾಗಿ ನಗರಗಳಿಗೆ ಸೀಮಿತ ವಾಗಿದ್ದ ಕೋವಿಡ್ 19 ಹಳ್ಳಿಗೂ ವಿಸ್ತರಿಸಿಕೊಂಡಿ ರುವುದು ಜಿಲ್ಲೆಯ ಸಾರ್ವಜನಿಕರಲ್ಲಿ ತೀವ್ರ ಆತಂಕ ಉಂಟು ಮಾಡಿದೆ.
ಚಿಕ್ಕಬಳ್ಳಾಪುರ ತಾಲೂಕಿನ ನಲ್ಲಕದಿರೇನಹಳ್ಳಿ ಗ್ರಾಮದ 50 ವರ್ಷದ ವ್ಯಕ್ತಿ ಅಪ ಘಾತ ದಲ್ಲಿ ಗಾಯಗೊಂಡು ಆಸ್ಪತ್ರೆಗೆ ಸೇರಿದಾಗ ಕೋವಿಡ್ 19 ಪಾಸೀಟಿವ್ ಬಂದಿದ್ದು ಆರೋಗ್ಯ ಇಲಾಖೆಯನ್ನು ಚಿಂತೆಗೀಡು ಮಾಡಿದೆ. 669 ಮಂದಿ ವರದಿ ಬಾಕಿ: ಜಿಲ್ಲೆಯಲ್ಲಿ ಇದುವರೆಗೂ 10 ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್ 19 ಪರೀಕ್ಷೆಗೆ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷಿಸಿದ್ದು, ಇನ್ನೂ 669 ಮಂದಿಯ ವರದಿ ಬಾಕಿ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್ ಗೌಡ ತಿಳಿಸಿದ್ದಾರೆ.
ಸೋಂಕಿತ ಪೇದೆ ಊಟಕ್ಕೆ ಮೆಸ್‌ಗೆ ಹೋಗುತ್ತಿದ್ದ: ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿರುವ ವೈಯರ್‌ಲೆಸ್ ವಿಭಾಗದದಲ್ಲಿ ಕಾರ್ಯನಿರ್ವಹಿಸುತ್ತಿದ್ದ 32 ರ್ವದ ಪೊಲೀಸ್ ಪೇದೆಗೆ ಕಳೆದ ಶುಕ್ರವಾರ ಸೋಂಕು ದೃಢಪಟ್ಟಿರುವುದು ಪೊಲೀಸ್ ಇಲಾಖೆಯನ್ನು ಬೆಚ್ಚಿಬೀಸಿದೆ.
ಜೊತೆಗೆ ಸೋಂಕಿತ ಪೇದೆ ಬರೋಬ್ಬರಿ 12 ದಿನ ರಜೆ ಹಾಕಿ ತುಮಕೂರಿನಲ್ಲಿ ನೆಲೆಸಿದ್ದರು. ಜೊತೆಗೆ ಕೆಲಸದ ಅವಧಿಯಲ್ಲಿ ನಗರದ ಗ್ರಾಮಾಂತರ ಠಾಣೆ ಎದುರಿನ ಮೆಸ್‌ವೊಂದಕ್ಕೆ ನಿತ್ಯ ಊಟಕ್ಕೆ ತೆರಳುತ್ತಿದ್ದು, ಈಗ ಎಲ್ಲರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
* ಕಾಗತಿ ನಾಗರಾಜಪ್ಪ