ಮುಂಬಯಿ: ಕಾಸರಗೋಡು ಮಂಜೇಶ್ಚರದಲ್ಲಿ ಕಾರ್ಯಚರಿಸುತ್ತಿರುವ ಮಲ್‌ಹರ್ ಇಸ್ಲಾಮಿ ತಹಿಲಿಲ್ಲಿಮಿ ವಿದ್ಯಾ ಸಂಸ್ಥೆಯ ಮುಂಬಯಿ ಘಟಕವು ಮಾಸಿಕವಾಗಿ ನಡೆಸಿಕೊಂಡು ಬರುವ ಸ್ವಲಾತ್ ಮಜ್ಲೀಸ್‌ನ 3ನೇ ವಾರ್ಷಿಕ ಹಾಗೂ ಬುರ್ದಾ ಮಜಿÉಸ್ ಕಾರ್ಯಕ್ರಮ ದಾದರ್ ಪೂರ್ವದ ಸುನ್ನಿ ಹನಫೀ ಮಸ್ಜಿದ್‌ನಲ್ಲಿ ಮಾ. 25ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಸುÂದ್ ಅಹ್ಮದ್ ಜಲಾಲುದ್ದೀನ್ ಅಲ್-ಬುಖಾರಿ ಮತ್ತು ಸುÂದ್ ಅಬ್ದುರಹ್ಮಾನ್ ಶವೀರ್ ಅಲ್ ಬುಖಾರಿ ಮಳ್ ಹರ್ ಸ್ವಲಾತ್ ಮಜಿÉಸ್‌ನ ನೇತೃತ್ವ ವಹಿಸಿದ್ದರು. ಸುÂದ್ ಅಹ್ಮದ್ ಜಲಾಲುದ್ದೀನ್ ಅಲ್ ಬುಖಾರಿ ಮಾತನಾಡಿ, ಯುವ ಜನಾಂಗ ಆಧುನಿಕ ಯುಗದಲ್ಲಿ ಪ್ರವಾದಿ ಸಂದೇಶವನ್ನು ಮರೆತು ಬದುಕಿದರೆ ಇಸ್ಲಾಂ ಧರ್ಮ ನಾಶ ಹೊಂದುವುದರಲ್ಲಿ ಸಂಶಯ
ವಿಲ್ಲ. ಮುಂದಿನ ಜನಾಂಗಕ್ಕೆ ಪ್ರವಾದಿ ಸಂದೇಶ ಉಳಿಯುವಂತೆ ನೋಡಿಕೊಳ್ಳುವುದು ಪ್ರತಿಮುಸಲ್ಮಾನನ ಕರ್ತವ್ಯ ಎಂದರು.
ದಾದರ್ ಲತ್ತೀಫಿಯ ಮಸ್ಜಿದ್ ಖತೀಬ್ ಅಬ್ದುಲ್ ಕರೀಂ ಅಶ್ರಫಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಫ್ತಿ ಶರೀಫ್ ನಿಝಾಮಿ ರಾಜಾಪುರ ಮುಖ್ಯ ಪ್ರಭಾಷಣ ಮಾಡಿದರು. ಹಾಫಿಝ್ ಸ್ವಾದಿಕ್ ಅಲಿ ಫಾಳಿಲಿ ಗೂಡಲ್ಲೂರು ನೇತೃತ್ವದಲ್ಲಿ ಮುಹಮ್ಮದ್ ಸಿಯಾನ್ ಉಳ್ಳಾಲ. ನಾಸೀಫ್, ಸುನ್ ಬಾಬು, ಇಬ್ರಾಹಿಂ ಫಾಳಿಲಿ. ಯೂಸುಫ್ ಸಖಾಫಿ ಕೊಟೆ, ಜಾಫರ್ ಮಾತುಲಿ ಮುಂತಾದವರು ಬುರ್ದಾ ಮಜಿÉಸ್ ನಡೆಸಿಕೊಟ್ಟರು.
ಹಕೀಂ ಅಂಜದಿ ಚೀತಾ ಕ್ಯಾಂಪ್, ಮಲ್‌ಹರ್ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ಹಸನ್ ಕುಂಞ, ಸಿ. ಪಿ. ಹಂಝ ಮುಸ್ಲಿಯಾರ್ ಕಡಲುಂಡಿ, ಮಲ್‌ಹರ್ ಮುಂಬಯಿ ಘಟಕಾಧ್ಯಕ್ಷ ಅಬ್ದುಲ್ ಸತ್ತಾರ್, ಕಾರ್ಯದರ್ಶಿ ಮುಹಮ್ಮದ್ ಮುಸ್ತಾಫ, ಕೋಶಾಧಿಕಾರಿ ಮುಹಮ್ಮದ್ ಅಶ್ರಫ್ ದಾದರ್, ಸದಸ್ಯ ರಾದ ಇಲ್ಯಾಸ್ ತೌಡುಗೋಳಿ. ಅಝೀಝ್ ಕಿನ್ಯಾ, ಮುಹಮ್ಮದ್ ಖಾಲಿದ್ ಬಂಬ್ರಾಣ, ಮುಹಮ್ಮದ್ ಅಶ್ರಫ್ ಫೆಂಟನ್, ಸಅದಿಯ್ನಾ ಕಾಲೇಜಿನ ಮುಂಬಯಿ ಘಟಕ ಕಾರ್ಯದರ್ಶಿ ಅಬ್ದುಲ್ ರಝಾಕ್ ಹಾಜಿ, ಕೋಡಾವ ಕಾಲೇಜಿನ ಮುಂಬಯಿ ಘಟಕದ ಕಾರ್ಯದರ್ಶಿ ಟಿ. ವಿ. ಕೆ. ಅಬ್ದುಲ್ಲಾ, ಮಂಜನಾಡಿ ಅಲ್ ಮದೀನಾ
ಸಂಸ್ಥೆಯ ಮುಂಬಯಿ ಮ್ಯಾನೇಜರ್ ಮುಹಮ್ಮದ್ ಸಖಾಫಿ ತೋಕೆ, ಕೇರಳ ಮರ್ಕಝ್ ಕಾಲೇಜಿನ ಮುಂಬಯಿ ಘಟಕ ಮ್ಯಾನೇಜರ್ ಅಬ್ದುಲ್ಲಾ ಸಖಾಫಿ ಉಪಸ್ಥಿತರಿದ್ದರು. ಟೆಂಗರ್ ಮುಲ್ಲ ಖತೀಬ್ ಇಸ್ಮಾಯಿಲ್ ಅಂಜದಿ ಸ್ವಾಗತಿಸಿದರು. ಮಲ್‌ಹರ್ ಮುಂಬಯಿ ಘಟಕ ಪ್ರಬಂಧಕ ಸಿದ್ದೀಕ್ ಮುಸ್ಲಿಯಾರ್ ವಂದಿಸಿದರು. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರ-ವರದಿ : ರೊನಿಡಾ ಮುಂಬಯಿ