ಬೆಂಗಳೂರು: ಮಾರುತಿ ಸುಜುಕಿ ಅಧಿಕೃತ ಮಾರಾಟಗಾರ ಮಲ್ಲೇಶ್ವರ 15ನೇ ಅಡ್ಡ ರಸ್ತೆಯಲ್ಲಿರುವ ನಮ್ಮ ವರುಣ್ ಮೋಟಾರ್ನಲ್ಲಿ ಗುರುವಾರ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ನೂತನ ಸ್ವಿಫ್ಟ್ ಕಾರನ್ನು ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು, ಮಾರುತಿ ನನ್ನ ನೆಚ್ಚಿನ ಕಾರು. ನನ್ನ ಪ್ರಥಮ ಕಾರು ಮಾರುತಿ 800. ಅಂದು ಪ್ರೀಮಿಯಂ ಹಣ ಕೊಟ್ಟು ಬುಕ್ ಮಾಡಿ ಮೂರು ತಿಂಗಳು ಕಾಯಬೇಕಾಗಿತ್ತು. ಸಣ್ಣ ಕಾರುಗಳ ಮಟ್ಟಿಗೆ ಅಷ್ಟು ಡಿಮ್ಯಾಂಡ್ ಇದ್ದ ಕಾರು ಅದು. ಇಂದು ಈ ಹೊಸ ಸ್ವಿಫ್ಟ್ ಕಾರು ಎಲ್ಲ ರೀತಿಯ ಆಧುನಿಕ ಸೌಕರ್ಯ ಹಾಗೂ ತಂತ್ರಜ್ಞಾನಗಳೊಂದಿಗೆ ಸುಂದರವಾಗಿದೆ.
ಮಾರುತಿ ಸುಜುಕಿ ಸದಾ ಗ್ರಾಹಕರ ಸ್ನೇಹಿಯಾಗಿದ್ದು, ಉತ್ತಮ ಸೇವೆಗೆ ಹೆಸರುವಾಸಿಯಾಗಿದೆ. ಆದ್ದರಿಂದಲೇ ಇಂದು ಭಾರತದಲ್ಲಿ ಎಷ್ಟೇ ವಿದೇಶಿ ಕಾರುಗಳು ಬಂದರೂ ಮಾರುತಿ ಕಾರಿನ ಬೇಡಿಕೆ ತಗ್ಗಿಲ್ಲ. ಅದೇ ರೀತಿ ವರುಣ್ ಮೋಟಾರ್ ಸಂಸ್ಥೆಯೂ ಕರ್ನಾಟಕದಲ್ಲಿ ಬೆಳೆಯಲಿ ಎಂದು ಹರಸಿದರು.
ಈ ಸಂದರ್ಭದಲ್ಲಿ ವರುಣ್ ಮೋಟಾರ್ನ ನಿರ್ದೇಶಕ ಡಿ.ಕೆ.ರಾಜು ಮಾತನಾಡಿ, ಹೊಸ ಸ್ವಿಫ್ಟ್ ಕಾರು ನ್ಪೋರ್ಟಿ ಡಿಸೈನ್ ಹೊಂದಿದ್ದು, ಫ್ಲೋಟಿಂಗ್ ರೂಫ್, ಗ್ರಿಲ್ ಮತ್ತು ಬೊಲ್ಡ್ ಶೌಲ್ಡರ್ ಲೈನ್‌ವುಳ್ಳ ಏರೋಡೈನಾಮಿಕ್ಸ್ ಹೊಂದಿದೆ.
ಹಿಂಬದಿಯ ಡೋರ್ ಹ್ಯಾಂಡಲ್‌ಗಳನ್ನು ಮೇಲ್ಭಾಗದಲ್ಲಿ ಅಳವಡಿಸಿರುವ ಪ್ರಥಮ ಕಾರು ಇದು. ನ್ಪೋರ್ಟಿ ಸ್ಟಿಯರಿಂಗ್ ಮತ್ತು 7 ಇಂಚ್ ಟಚ್‌ಸೀನ್ ಇದರಲ್ಲಿದ್ದು, ಎಲ್‌ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್, ಎಎಂಟಿ ಪಿ ಆ್ಯಂಡ್ ಡಿ ಆಪ್ಷನ್‌ವುಳ್ಳ ಟ್ರಾನ್ಸಿಮಿಷನ್ ಹಾಗೂ ವಿಶಾಲವಾದ ಬೂಟ್ ಸ್ಪೇಸ್ ಇರುವುದರಿಂದ ಆರಾಮದಾಯಕ ಚಾಲನೆ, ಪ್ರಯಾಣ ಸಾಧ್ಯವಾಗುತ್ತದೆ.
ಈಗಾಗಲೇ ನೂತನ ಸ್ವಿಫ್ಟ್ ಕಾರಿನ ಬುಕ್ಕಿಂಗ್ ಆರಂಭವಾಗಿದ್ದು, ಗುರುವಾರ ನಮ್ಮ ಶೋರೂಮ್‌ನಿಂದ ಇಬ್ಬರು ಗ್ರಾಹಕರಿಗೆ ಕಾರು ನೀಡಲಾಗಿದೆ. ಅಲ್ಲದೆ, ಸಾಕಷ್ಟು ಗ್ರಾಹಕರು ಬುಕ್ ಮಾಡಿದ್ದಾರೆ. ಹೊಸ ಸ್ವಿಫ್ಟ್ ಕಾರಿನ ಬೆಂಗಳೂರಿನ ಎಕ್ಸ್‌ಶೋರೂಮ್ ಬೆಲೆ 4 ಲಕ್ಷ 99 ಸಾವಿರ ರೂ.ನಿಂದ ಆರಂಭವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಟಿಎಸ್‌ಎಸ್ ಹರ್ಷದ್, ಸಿಇಒ ವಿಜಯ್ ರೆಡ್ಡಿ, ಜನರಲ್ ಮ್ಯಾನೇಜರ್ ಖಲೀಮ್ ಶೇಕ್ ಇತರರು ಭಾಗವಹಿಸಿದ್ದರು.