Advertisement
ಸದ್ಯ ಜಿಎಸ್‌ಟಿಯಲ್ಲಿ ಕಾರುಗಳಿಗೆ ಅತ್ಯಧಿಕ ಶೇ.28ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದರ ಮೇಲೆ ಶೇ.1ರಿಂದ ಶೇ.15 ಸೆಸ್ ವಿಧಿಸಲಾಗುತ್ತದೆ. ಈ ಮೂಲಕ ಜಿಎಸ್‌ಟಿ ಜಾರಿಯಿಂದ ರಾಜ್ಯಗಳಿಗಾಗುವ ನಷ್ಟಕ್ಕೆ ಪರಿಹಾರ ನೀಡಲಾಗುತ್ತದೆ. ಆ.5ರಂದು ನಡೆದ ಜಿಎಸ್‌ಟಿ ಮಂಡಳಿ 20ನೇ ಸಭೆಯಲ್ಲಿ ಕಾರುಗಳ ಮೇಲಿನ ಸೆಸ್ ಏರಿಸುವ ಬಗ್ಗೆ ಶಿಫಾರಸು ಮಾಡಿದೆ. ಆದರೆ ಪರಿಹಾರ ಸೆಸ್ ಅನ್ನು ಹೆಚ್ಚಳಗೊಳಿಸುವ ವಿಚಾರದಲ್ಲಿ ಜಿಎಸ್‌ಟಿ (ರಾಜ್ಯಗಳಿಗೆ ಪರಿಹಾರ) ಸೆಕ್ಷನ್ 8ಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ಈ ತಿದ್ದುಪಡಿ ಆದದ್ದೇ ಆದಲ್ಲಿ 13 ಪ್ರಯಾಣಿಕರಿಗಿಂತ ಕಡಿಮೆ ಕೂರುವ, 10 ಮಂದಿಗಿಂತ ಹೆಚ್ಚು ಮಂದಿ ಕೂರುವ ದೊಡ್ಡ ಕಾರುಗಳು, ಮಧ್ಯಮ, ದೊಡ್ಡ ಗಾತ್ರದ, ಎಸ್‌ಯುವಿಗಳ ಬೆಲೆ ಏರಿಕೆಯಾಗಲಿದೆ. Advertisement
ಎಸ್‌ಯುವಿ, ಲಕ್ಸುರಿ ಕಾರುಗಳಿಗೆ ಜಿಎಸ್ಟಿ ಬರೆ
07:40 AM Aug 08, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.