Advertisement

ನವೋದಯ ಕನ್ನಡ ಸೇವಾ ಸಂಘದ ಸುವರ್ಣ ಮಹೋತ್ಸವ ಸರಣಿ ಕಾರ್ಯಕ್ರಮ

04:43 PM Dec 11, 2018 | Team Udayavani |

ಥಾಣೆ: ನವೋದಯ ಕನ್ನಡ ಸೇವಾ ಸಂಘ ಥಾಣೆ ಇದರ ಸುವರ್ಣ ಮಹೋತ್ಸವ ಸರಣಿ ಕಾರ್ಯಕ್ರಮ-06ರ ಅಂಗವಾಗಿ ಡಿ. 8 ರಂದು ಅಪರಾಹ್ನ 3ರಿಂದ ರಾತ್ರಿ 10ರವರೆಗೆ ಥಾಣೆ ಪಶ್ಚಿಮದ ಹೀರಾನಂದಾನಿ ಮೆಡೋಸ್‌ನ ಡಾ| ಕಾಶಿನಾಥ್‌ ಘಾಣೇಕರ್‌ ಸಭಾಗೃಹದಲ್ಲಿ ವಿವಿಧ  ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ನವೋದಯ ಕನ್ನಡ ಸಂಘ ಥಾಣೆ ಅಧ್ಯಕ್ಷ ಜಯ ಕೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಗೌರವ ಅತಿಥಿಗಳಾಗಿ ಥಾಣೆ ಮೇಯರ್‌ ಮೀನಾಕ್ಷೀ ಆರ್‌. ಶಿಂಧೆ, ಜಾಸ್ಮಿನ್‌ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಡಾ| ಸುರೇಂದ್ರ ವಿ. ಶೆಟ್ಟಿ, ಥಾಣೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಕುಶಲ್‌ ಸಿ. ಭಂಡಾರಿ, ಕ್ರಿಸ್ಟಲ್‌ ಆಟೋಮೇಶನ್‌ ಪ್ರೈವೇಟ್‌ ಲಿಮಿಟೆಡ್‌ ಇದರ ಆಡಳಿತ ನಿರ್ದೇಶಕ ಚಂದ್ರಶೇಖರ ಎಸ್‌. ಶೆಟ್ಟಿ, ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ದಯಾನಂದ ಎಸ್‌. ಶೆಟ್ಟಿ ಮತ್ತು ಗೌರವ ಪ್ರಧಾನ ಕೋಶಾಧಿಕಾರಿ ಸುನೀಲ್‌ ಎಸ್‌. ಶೆಟ್ಟಿ, ಉಪಾಧ್ಯಕ್ಷ ಕೇಶವ ಟಿ. ನಾಯಕ್‌, ಜತೆ ಕಾರ್ಯದರ್ಶಿ ಪ್ರಶಸ್ಥ ಎಸ್‌. ಶೆಟ್ಟಿ, ಜೊತೆ ಕೋಶಾಧಿಕಾರಿ ದಯಾನಂದ್‌ ಬಿ. ಹೆಗ್ಡೆ. ನವೋದಯ ಮಾಧ್ಯಮಿಕ ಶಾಲೆಯ ಮುಖ್ಯ ಶಿಕ್ಷಕಿ ಅನುರಾಧಾ ಅರ್ಜುನ್‌ ವಾಡ್ಕರ್‌ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಂಘದ ಪೂರ್ವ ಪದಾಧಿಕಾರಿಗಳನ್ನು ಹಾಗೂ ಪೂರ್ವ ಕಾರ್ಯಕಾರಿ ಸಮಿತಿ ಸದಸ್ಯರನ್ನು ಅತಿಥಿ-ಗಣ್ಯರ ಹಸ್ತದಿಂದ ಗೌರವಿಸಲಾಯಿತು. ಅಪರಾಹ್ನ 3 ರಿಂದ ಸಂಘದ ಮಹಿಳೆಯರು ಮತ್ತು ಮಕ್ಕಳಿಂದ ನೃತ್ಯ, ಸತೀಶ್‌ ಕಣಂಜಾರು ರಚಿಸಿ, ಕೃಷ್ಣರಾಜ್‌ ಶೆಟ್ಟಿ ನಿರ್ದೇಶನದಲ್ಲಿ, ಸಂಘದ ಮಹಿಳಾ ಸದಸ್ಯೆಯರಿಂದ ಬಂಗುಡೆ ಪುಲಿಮುಂಚಿ ಕಿರು ನಾಟಕ ಪ್ರದರ್ಶನಗೊಂಡಿತು.

ಸಭಾ ಕಾರ್ಯಕ್ರಮದ ಬಳಿಕ ರಂಗಕಲಾವಿದ ಉಮೇಶ್‌ ಹೆಗ್ಡೆ ಕಡ್ತಲ ಮತ್ತು ಕಿಶೋರ್‌ ಪಿಲಾರ್‌, ರಂಗಭೂಮಿ ಕಲಾವಿದೆ ದೀಕ್ಷಾ ದೇವಾಡಿಗ ಅವರಿಂದ ತೆಲಿಕೆ-ನಲಿಕೆ ತುಳು ಹಾಸ್ಯ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ನವೋದಯ ಕನ್ನಡ ಸೇವಾ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ರವಿ ಹೆರ್ಮುಂಡೆ ಮತ್ತು ಸದಸ್ಯೆ ಅಂಜಲಿ ಸರಾಫ್‌ ಅವರು ನಿರ್ವಹಿಸಿದರು. ಆನಂತರ  ರಂಗಮಿಲನ ಕಲಾವಿದರ ಕೂಡುವಿಕೆಯಲ್ಲಿ ನಾರಾಯಣ ಶೆಟ್ಟಿ ನಂದಳಿಕೆ ರಚಿಸಿ, ಮನೋಹರ ನಂದಳಿಕೆಯವರ ನಿರ್ದೇಶನದಲ್ಲಿ ಪ್ರಶಸ್ತಿ ಪುರಸ್ಕೃತ ಸಂಸಾರ ಹಾಸ್ಯ ನಾಟಕ ಪ್ರದರ್ಶನಗೊಂಡಿತು.

ಪ್ರಾರಂಭದಲ್ಲಿ ಕವಿ, ಲೇಖಕ ಪೇತ್ರಿ ವಿಶ್ವನಾಥ್‌ ಶೆಟ್ಟಿ ಅವರು ಬರೆದು, ಕಲಾಸೌರಭದ ರೂವಾರಿ ಪದ್ಮನಾಭ ಸಸಿಹಿತ್ಲು ಅವರ ಸಂಗೀತ ನಿರ್ದೇಶನದ ಶೀರ್ಷಿಕೆ ಗೀತೆಯನ್ನು ನವೋದಯ ಶಾಲಾ ವಿದ್ಯಾರ್ಥಿಗಳು ನೃತ್ಯದ ಮೂಲಕ ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಗೌರವ ಪ್ರಧಾನ ಕಾರ್ಯದರ್ಶಿ ದಯಾನಂದ ಎಸ್‌. ಶೆಟ್ಟಿ ಅವರು ವಂದಿಸಿದರು. ಕೊನೆಯಲ್ಲಿ ಥಾಣೆ ಉದ್ಯಮಿ ಹರೀಶ್‌ ಸಾಲ್ಯಾನ್‌ ಅವರ ಸಂಪೂರ್ಣ ಸಹಕಾರದೊಂದಿಗೆ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next