Advertisement
ಹಾಲ್ಹರವಿ ಉತ್ಸವ, ಲಕ್ಷ ದೀಪೋತ್ಸವ ಮುಂತಾದ ಧಾರ್ಮಿಕ ಕಾನ್ಯಕ್ರಮಗಳ ಜೊತೆಗೆ ವೈವಿಧ್ಯಮಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳು ಜರುಗಲಿವೆ ಎಂದು ಜೆಎಸ್‌ಎಸ್ ಮಹಾ ವಿದ್ಯಾಪೀಠದ ಕಾರ್ಯ ದರ್ಶಿ ಎಸ್.ಪಿ.ಮಂಜುನಾಥ್ ತಿಳಿಸಿದರು.
Related Articles
Advertisement
ಗ್ರಾಮೀಣ ಕ್ರೀಡೆ: ಫೆ.1ರಂದು ಗ್ರಾಮೀಣ ಕಲೆ ಗಳಾದ ಸೋಬಾನೆ ಪದ ಹಾಗೂ ರಂಗೋಲಿ ಸ್ಪರ್ಧೆ ಗಳನ್ನು, ಫೆ.3ರಂದು ಮಕ್ಕಳಿಗಾಗಿ ಗಾಳಿಪಟ ಸ್ಪರ್ಧೆ ಯನ್ನು ಏರ್ಪಡಿಸಲಾಗಿದೆ. ಫೆ.5ರಂದು 39ನೇ ರಾಷ್ಟ್ರ ಮಟ್ಟದ ನಾಡ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಈ ಬಾರಿ ಎಡರು ಮಾರ್ಪಿಟ್ ಕುಸ್ತಿಗಳು ನಡೆಯಲಿದ್ದು, ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಗೆ ಸುತ್ತೂರು ಕೇಸರಿ ಪ್ರಶಸ್ತಿ ಹಾಗೂ ಸ್ಥಳೀಯ ಉತ್ತಮ ಕುಸ್ತಿ ಸ್ಪರ್ಧೆಗೆ ಸುತ್ತೂರು ಕುಮಾರ ಪ್ರಶಸ್ತಿ ನೀಡಲಾಗುವುದು ಎಂದರು.
ದೇಸಿ ಆಟ: ಜೆಎಸ್‌ಎಸ್ ಸಂಸ್ಥೆಯ ವಿದ್ಯಾರ್ಥಿಗಳಿ ಗಾಗಿ ವಿವಿಧ ದೇಸಿ ಆಟಗಳ ಸ್ಪರ್ಧೆಗಳು ನಡೆಯಲಿವೆ. ಫೆ.3ರಂದು ಗ್ರಾಮೀಣ ಭಾಗದ ಪುರುಷರಿಗೆ ಮತ್ತು 4ರಂದು ಮಹಿಳೆಯರಿಗೆ ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟ, ಅಳಿಗುಳಿ ಮಣೆ, ಅಣ್ಣೆಕಲ್ಲು ಮುಂತಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ದನಗಳ ಜಾತ್ರೆ: ಜಾತ್ರಾ ಮಹೋತ್ಸವದ ಅಂಗವಾಗಿ 51ನೇ ವರ್ಷ ದನಗಳ ಜಾತ್ರೆ ನಡೆಯಲಿದ್ದು, ಉತ್ತಮ ರಾಸುಗಳಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸ ಲಾಗುವುದು. ಜೆಎಸ್‌ಎಸ್ ಅಂತರಸಂಸ್ಥೆಗಳ ಸಾಂಸ್ಕೃತಿಕ ಮೇಳದಲ್ಲಿ ಭರತನಾಟ್ಯ, ಸಾಮೂಹಿಕ ನೃತ್ಯ, ವಚನಾಧಾರಿತ ನೃತ್ಯ, ಸಾಮೂಹಿಕ ಗಾಯನ ಸ್ಪರ್ಧೆಗಳಲ್ಲಿ ಸುಮಾರು 3500ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಭಾಗವಹಿಸುತ್ತಿದ್ದು, 450ಕ್ಕೂ ಹೆಚ್ಚು ಕಾರ್ಯ ಕ್ರಮಗಳನ್ನು ನಡೆಸಿಕೊಡುತ್ತಾರೆ. ಪ್ರತಿ ದಿನ ಸಂಜೆ 7 ರಿಂದ 9 ಗಂಟೆವರೆಗೆ ವಿಶೇಷ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಸಹ ವಿದ್ಯಾರ್ಥಿಗಳು ನಡೆಸಿ ಕೊಡಲಿದ್ದಾರೆ.
ಪ್ರಸಾದ ವ್ಯವಸ್ಥೆ: ಗ್ರಾಮೀಣ ಹಾಗೂ ನಗರಪ್ರದೇಶ ಗಳ ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರಿಂದ 15ಕ್ಕೂ ಹೆಚ್ಚು ನಾಟಕಗಳು ಪ್ರದರ್ಶನಗೊಳ್ಳಲಿವೆ. ಜೊತೆಗೆ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳ ಕಲಾ ತಂಡಗಳಿಂದ ವರ್ಣರಂಜಿತ ಕಲಾ ಪ್ರದರ್ಶನ ಗಳು ನಡೆಯುತ್ತವೆ. ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವ ಲಕ್ಷಾಂತರ ಭಕ್ತಾದಿಗಳಿಗೆ ಪ್ರತಿ ನಿತ್ಯವೂ ಪ್ರಸಾದದ ವ್ಯವಸ್ಥೆ ಇದೆ. ವಾಸ್ತವ್ಯಕ್ಕೆ ಅವಕಾಶವಿರುವ ಎಲ್ಲ ಕಾಯಂ ಅತಿಥಿಗೃಹಗಳ ಜೊತೆಗೆ ಸಾವಿರಾರು ಮಂದಿಗೆ ತಾತ್ಕಾಲಿಕ ಕುಟೀರ ವ್ಯವಸ್ಥೆಯನ್ನೂ ಮಾಡ ಲಾಗಿದೆ ಎಂದು ಅವರು ತಿಳಿಸಿದರು.
ಕೃಷಿ ಮೇಳದಲ್ಲಿ ಇಥಿಯೋಪಿಯಾದ ವಿಶೇಷ ಆಹಾರ: ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಕೃಷಿ ಹಾಗೂ ಕೃಷಿ ಸಂಬಂಧಿ ತಾಂತ್ರಿಕತೆಯ ಬಗ್ಗೆ ರೈತರಿಗೆ ಮಾಹಿತಿ ನೀಡಲು ಆಯೋಜಿಸಿರುವ ಕೃಷಿಮೇಳದಲ್ಲಿ ಈ ವರ್ಷ ಸಾಂಪ್ರದಾಯಿಕ ಹಾಗೂ ಆಧುನಿಕ ಕೃಷಿ ಪದ್ಧತಿಗಳ ಕುರಿತಂತೆ ರೈತರಿಗೆ ಮಾಹಿತಿ ನೀಡಲು ವ್ಯವಸ್ಥೆ ಮಾಡ ಲಾಗಿದೆ.
ಈ ಕೃಷಿಮೇಳದಲ್ಲಿ ಇಥಿಯೋಪಿಯಾದಲ್ಲಿ ಬೆಳೆಯಲಾಗುವ ಟೆಫ್ ಸೂಪರ್ ಫುಡ್ (ವಿಶೇಷ ಆಹಾರ) ಬೆಳೆಯನ್ನು ಬೆಳೆದು ಪ್ರದರ್ಶಿಸಲಾಗುತ್ತಿದೆ. ಸಿರಿಧಾನ್ಯಗಳು, ಒಣ ಬೇಸಾಯದಲ್ಲಿ ಬೆಳೆಯುವ ದ್ವಿದಳ ಧಾನ್ಯಗಳ ಪ್ರಾತ್ಯಕ್ಷಿಕೆ, ತಾಂತ್ರಿಕ ಮಾಹಿತಿ ಹಾಗೂ ಮಾರಾ ಟದ ವ್ಯವಸ್ಥೆಗೆ ವಿಶೇಷ ಗಮನ ನೀಡಲಾಗಿದೆ ಎಂದು ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಅರುಣ್ ಬಳಮಟ್ಟಿ ತಿಳಿಸಿದರು.
ಕಡಿಮೆ ನೀರು ಹಾಗೂ ಕಡಿಮೆ ವೆಚ್ಚ, ಕಡಿಮೆ ಅವಧಿ ಹಾಗೂ ಕನಿಷ್ಠ ನಿರ್ವಹಣೆಯಲ್ಲಿ ಹುಲುಸಾಗಿ ಬೆಳೆದು ಉತ್ತಮ ಆರೋಗ್ಯ ನೀಡುವ ಸಿರಿಧಾನ್ಯಗಳಾದ ಸಾಮೆ, ನವಣೆ, ಸಜ್ಜೆ, ಬರಗು, ಹಾರಕ, ಊದಲು ಬೆಳೆಗಳ ಪ್ರಾತ್ಯಕ್ಷಿಕೆ, ಸತ್ವ ವರ್ಧನೆ, ಸಂಸ್ಕರಣೆ ಹಾಗೂ ಮಾರಾಟ ನಡೆಯಲಿದೆ. ವಿವಿಧ ದೇಸಿ ತಳಿ-ಬೆಳೆಗಳ ಪ್ರಾತ್ಯಕ್ಷಿಕೆ, ಒಂದು ಎಕರೆಯಲ್ಲಿ 90 ಬೆಳೆಗಳ ಕೃಷಿ ಬ್ರಹ್ಮಾಂಡ ಮತ್ತು ಕೃಷಿ ವಸ್ತು ಪ್ರದರ್ಶನ ಈ ಕೃಷಿ ಮೇಳದ ಆಕರ್ಷಣೆಯಾಗಿದೆ.