ನವದೆಹಲಿ: ಪೆಟ್ರೋಲಿಯಂ ಸಚಿವ ಹರ್ದೀಪ್ ಎಸ್ ಪುರಿ ವಿನೂತನ ವೀಡಿಯೊವನ್ನು ಹಂಚಿಕೊಂಡಿದ್ದು, ಎಲ್‌ಪಿಜಿ ಸಿಲಿಂಡರ್‌ಗಳನ್ನು ಕ್ಯೂಆರ್ ಕೋಡ್‌ಗಳೊಂದಿಗೆ ಗುರುತಿಸುವ ಹೊಸ ಯೋಜನೆಯನ್ನು ವಿವರಿಸುವ ವೀಡಿಯೊ ಇದಾಗಿದೆ.
ಕ್ಯೂಆರ್ ಕೋಡ್ ಗಳನ್ನು ಬಳಸಿ ಸಿಲಿಂಡರ್ ಗಳನ್ನು ಟ್ರ್ಯಾಕ್ ಮಾಡಬಹುದು. ಎಲ್‌ಪಿಜಿ ಕಳ್ಳತನವನ್ನು ತಡೆಯುವ ನಿಟ್ಟಿನಲ್ಲಿ ಕ್ಯೂಆರ್ ಕೋಡ್‌ಗಳನ್ನು ಸಿಲಿಂಡರ್‌ಗಳಿಗೆ ಅಂಟಿಸಲಾಗುವುದು ಮತ್ತು ಹೊಸ ಸಿಲಿಂಡರ್‌ಗಳಿಗೆ ವೆಲ್ಡಿಂಗ್ ಮಾಡಲಾಗುವುದು ಎಂದು ಸಚಿವರು ವಿಡಿಯೋದಲ್ಲಿ ತಿಳಿಸಿದ್ದಾರೆ.
ಪೆಟ್ರೋಲಿಯಂ ಸಚಿವರು ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, “ಇಂಧನ ಪತ್ತೆಹಚ್ಚುವಿಕೆ! ಗಮನಾರ್ಹವಾದ ಅನ್ವೇಷಣೆ – ಈ ಕ್ಯೂಆರ್ ಕೋಡ್ ಅನ್ನು ಅಸ್ತಿತ್ವದಲ್ಲಿರುವ ಸಿಲಿಂಡರ್‌ಗಳಲ್ಲಿ ಅಂಟಿಸಲಾಗುವುದು ಮತ್ತು ಹೊಸ ಸಿಲಿಂಡರ್ ಗಳ ಮೇಲೆ ವೆಲ್ಡಿಂಗ್ ಮಾಡಿ ಹಾಕಲಾಗುತ್ತದೆ. – ಇವು ಗ್ಯಾಸ್ ಸಿಲಿಂಡರ್‌ಗಳ ಕಳ್ಳತನ, ಟ್ರ್ಯಾಕಿಂಗ್ ಮತ್ತು ಟ್ರೇಸಿಂಗ್ ಮತ್ತು ಉತ್ತಮ ದಾಸ್ತಾನು ನಿರ್ವಹಣೆ ಹೀಗೇ ಹಲವಾರು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದೆ.” ಎಂದು ಬರೆದುಕೊಂಡಿದ್ದಾರೆ.
Related Articles
ಪ್ರತಿಯೊಬ್ಬರಿಗೂ ಕೈಗೆಟಕುವ ರೀತಿಯಲ್ಲಿ ಲಭ್ಯತೆಯನ್ನು ಖಾತ್ರಿಪಡಿಸುವ ಸಂದರ್ಭದಲ್ಲಿ ಇಂಧನದ ಸುಸ್ಥಿರ ನಿರ್ವಹಣೆ ಮತ್ತು ಉತ್ಪಾದಿಸುವ ತುರ್ತು ಅವಶ್ಯಕತೆಯಿದೆ ಎಂದು ಸಚಿವ ಪುರಿ ಹೇಳಿದ್ದಾರೆ.
ವಿಶ್ವ ಎಲ್‌ಪಿಜಿ ವೀಕ್ 2022 ರ ವಿಷಯದ ಪ್ರಸ್ತುತತೆಯನ್ನು ಗಮನಿಸಿದ ಸಚಿವರು, ವಿಶ್ವ LPG ವೀಕ್ 2022 ಅನ್ನು ನವೆಂಬರ್ 14 ರಿಂದ 18, 2022 ರವರೆಗೆ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಮಾರ್ಟ್ (IEML) ನಲ್ಲಿ ಆಯೋಜಿಸಲಾಗಿದೆ.