Advertisement

ಲೋಕಾ ದಾಳಿಗೊಳಗಾಗಿದ್ದ BBMPರೆವೆನ್ಯೂ ಇನ್ಸ್‌ಪೆಕ್ಟರ್‌ ನೇಣಿಗೆ ಶರಣು

12:09 PM Jan 17, 2017 | Team Udayavani |

ಬೆಂಗಳೂರು: ಬಿಬಿಎಂಪಿ ರೆವೆನ್ಯೂ ಇನ್ಸ್‌ಪೆಕ್ಟರ್‌ ಒಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಸೋಮವಾರ ಸಂಜೆ ನಡೆದಿದೆ. 

Advertisement

ಆರ್‌ಐ ಆಗಿದ್ದ ಶ್ರೀನಿವಾಸ್‌ ಅವರು ಶ್ರೀನಗರದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡು ಬಂದಿದ್ದು  ಹನುಮಂತ ನಗರ ಪೊಲೀಸರು ಸ್ಥಳಕ್ಕಾಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಿಮ್ಸ್‌ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. 

ಜೆ.ಪಿ.ನಗರದಲ್ಲಿದ್ದ ಶ್ರೀನಿವಾಸ್‌ ಅವರನ್ನು ತಿಂಗಳ ಹಿಂದೆ ಕೆಂಪೇಗೌಡ ನಗರಕ್ಕೆ ವರ್ಗಾವಣೆ ಮಾಡಲಾಗಿತ್ತು, ಮತ್ತೆ ಇದೀಗ ರಾಜರಾಜೇಶ್ವರಿ ನಗರಕ್ಕೆ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

ಕಾರ್ಪೋರೇಟರ್‌ ಕಿರುಕುಳ 

ಶ್ರೀನಿವಾಸ್‌ಗೆ ಸುಂಕೇನಹಳ್ಳಿ ಕಾರ್ಪೋರೇಟರ್‌ ರಮೇಶ್‌ ಅವರು ಕಿರುಕುಳ ನೀಡುತ್ತಿದ್ದರು ಎಂದು ಸಂಬಂಧಿಯೊಬ್ಬರು ಆರೋಪಿಸಿದ್ದಾರೆ. 

Advertisement

ಪ್ರತಿಭಟನೆ 
ಕಿಮ್ಸ್‌  ಆಸ್ಪತ್ರೆಯ ಎದುರು ಬಿಬಿಎಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.  ಶ್ರೀನಿವಾಸ್‌ ಸಾವಿಗೆ ನ್ಯಾಯ ಒದಗಿಸಿಕೊಡಲು ಆಗ್ರಹಿಸಿದ್ದಾರೆ. 

ಲೋಕಾ ದಾಳಿ ನಡೆದಿತ್ತು
ಈ ಹಿಂದೆ ಶ್ರೀನಿವಾಸ್‌ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು, ಆ ಪ್ರಕರಣ ಈಗ ತನಿಖಾ ಹಂತದಲ್ಲಿದೆ ಎನ್ನುವ ಅಂಶ ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next