Advertisement

Delhi: ದಿಲ್ಲಿ ಇಸ್ರೇಲ್‌ ರಾಯಭಾರ ಕಚೇರಿ ಬಳಿ ಸ್ಫೋಟ: ಶಂಕಿತರ ಓಡಾಟ ಪತ್ತೆ

12:00 AM Dec 28, 2023 | Team Udayavani |

ಹೊಸದಿಲ್ಲಿ: ಇಸ್ರೇಲ್‌ ರಾಯಭಾರ ಕಚೇರಿ ಬಳಿ ಮಂಗಳವಾರ ನಡೆದಿರುವ ಸ್ಫೋಟ ಪ್ರಕರಣ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕಚೇರಿ ಬಳಿ ಅನುಮಾನಸ್ಪದವಾಗಿ ಇಬ್ಬರು ಯುವಕರು ಸುಳಿದಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಶಂಕಿತರ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿರುವುದಾಗಿ ಹೇಳಿದ್ದಾರೆ.

Advertisement

ಎನ್‌ಎಸ್‌ಜಿ ಮತ್ತು ವಿಧಿ ವಿಜ್ಞಾನ ತಜ್ಞರು ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಪ ತ್ರೀವತ್ರೆಯ ಸ್ಫೋಟ ನಡೆದಿರುವುದು ದೃಢಪಟ್ಟಿದೆ. ಆದರೆ ಸ್ಫೋಟಕದ ಯಾವುದೇ ಅವಶೇಷವೂ ಪತ್ತೆಯಾಗಿಲ್ಲ. ಇದರ ಹೊರತಾಗಿಯೂ ಸ್ಫೋಟ ಸಂಭವಿಸಿದ್ದು ಹೇಗೆ, ಸ್ಫೋಟಕದಲ್ಲಿ ರಾಸಾಯನಿಕವೇನಾದರೂ ಇತ್ತೇ ಎಂಬುದನ್ನು ಪತ್ತೆಹಚ್ಚಲು ಸ್ಥಳದಲ್ಲಿದ್ದ ಹುಲ್ಲು ಮತ್ತು ಎಲೆಗಳ ಮಾದರಿಯನ್ನು ಸಂಗ್ರಹಿಸಲಾಗಿದೆ.

ಪತ್ರ ಪತ್ತೆ: ಈ ನಡುವೆ, ಇಸ್ರೇಲ್‌ ವಿರುದ್ಧ ಆಕ್ಷೇಪಾರ್ಹವಾಗಿರುವ ಪತ್ರವನ್ನು ಬರೆದು ಆ ದೇಶದ ರಾಷ್ಟ್ರ ಧ್ವಜದಲ್ಲಿ ಸುತ್ತಿ ಇರಿಸಿದ್ದು ಪತ್ತೆಯಾಗಿದೆ. ಸರ್‌ ಅಲ್ಲಾಹ್‌ ರೆಸಿಸ್ಟೆನ್ಸ್‌ ಎನ್ನುವ ಸಂಘಟನೆ ಹೆಸರಿನಲ್ಲಿ ಪತ್ರ ಬರೆಯಲಾಗಿದ್ದು, ಗಾಜಾ- ಪ್ಯಾಲಿಸ್ತೇನ್‌ ಪದಗಳನ್ನೂ ಬಳಸಲಾಗಿದೆ.

ಇಸ್ರೇಲಿಗರಿಗೆ ಭದ್ರತಾ ಸೂಚನೆ: ಸ್ಫೋಟದ ಘಟನೆ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಇಸ್ರೇಲಿಗರಿಗೆ ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಮಂಡಳಿ ಭದ್ರತಾ ಸೂಚನೆ ಮತ್ತು ಸಲಹೆಗಳನ್ನು ನೀಡಿದೆ. ಹೊಸದಿಲ್ಲಿಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ಜನರು ಹಾಗೂ ಇಸ್ರೇಲಿ ಪ್ರವಾಸಿಗರು ಭೇಟಿ ನೀಡುವಂಥ ಕಿಕ್ಕಿರಿದ ಸ್ಥಳಗಳಿಗೆ ಹೋಗದಿರಲು ಸಲಹೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next