Advertisement

ಇಬ್ಬರು ಇನ್ಸ್‌ಪೆಕ್ಟರ್‌ಗಳ ಅಮಾನತು

09:28 AM May 10, 2020 | Suhan S |

ಬೆಂಗಳೂರು: ಲಾಕ್‌ಡೌನ್‌ ನಡುವೆಯೂ ಸಿಗರೇಟ್‌ ಸರಬರಾಜು ಮಾಡುತ್ತಿದ್ದ ಡೀಲರ್‌ ಗಳನ್ನು ಕಾನೂನು ಕುಣಿಕೆಯಿಂದ ತಪ್ಪಿಸಲು ಸಿಸಿಬಿ ಎಸಿಪಿ 25 ಲಕ್ಷ ರೂ. ಲಂಚ ಪಡೆದಿರುವ ಪ್ರಕರಣ ಸಂಬಂಧ ಇಬ್ಬರು ಇನ್ಸ್‌ಪೆಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ.

Advertisement

ಸಿಸಿಬಿ ಆರ್ಥಿಕ ವಿಭಾಗದ ಇನ್ಸ್‌ಪೆಕ್ಟರ್‌ ಗಳಾದ ಅಜಯ್‌ ಮತ್ತು ನಿರಂಜನ್‌ ಕುಮಾರ್‌ ಅಮಾನತಾದವರು. ಆದರೆ, ಆರ್ಥಿಕ ವಿಭಾಗದ ಎಸಿಪಿ ಪ್ರಭುಶಂಕರ ವಿರುದ್ಧ ಯಾವುದೇ ಕ್ರಮಕೈಗೊಳ್ಳದಿರುವುದು ಅನುಮಾನಗಳಿಗೆ ಎಡೆಮಾಡಿದೆ.

ಸಿಸಿಬಿ ಆಂತರಿಕ ತನಿಖೆಯಲ್ಲಿ ಸಿಗರೇಟ್‌ ಡೀಲರ್‌ಗಳಿಂದ ಎಸಿಪಿ ಪ್ರಭುಶಂಕರ 25 ಲಕ್ಷ ರೂ. ಪಡೆದಿರುವುದು ಖಚಿತಪಟ್ಟಿತ್ತು. ಎಸಿಪಿಯಿಂದ 25 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಈ ಕುರಿತ ವರದಿಗಾಗಿ ಹಾಗೂ ಆರೋಪಿತ ಎಸಿಪಿ ವಿರುದ್ಧ ಕಠಿಣ ಕ್ರಮಕ್ಕಾಗಿ ನಗರ ಪೊಲೀಸ್‌ ಆಯುಕ್ತರಿಗೆ ವರದಿ ಸಲ್ಲಿಸಲಾಗಿತ್ತು. ಲಾಕ್‌ಡೌನ್‌ ನಡುವೆ ಸಿಗರೇಟ್‌ ಸರಬರಾಜು ಮಾಡುತ್ತಿದ್ದ ಮೇರೆಗೆ ಎಸಿಪಿ ಪ್ರಭುಶಂಕರ್‌ ನೇತೃತ್ವದ ತಂಡ ದಾಳಿ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿತ್ತು.

ಇದಾದ ಬಳಿಕ ಆ ಆರೋಪಿಯಿಂದ ಮೂವರು ಡೀಲರ್‌ಗಳ ಬಗ್ಗೆ ಮಾಹಿತಿ ಪಡೆದು ಅವರನ್ನು ಸಂಪರ್ಕಿಸಿದ್ದ ಎಸಿಪಿ ಪ್ರಭುಶಂಕರ, ಪ್ರಕರಣ ದಾಖಲಿಸದಿರಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಸಿಗರೇಟ್‌ ಡೀಲರ್‌ ಗಳಾದ ಆದಿಲ್‌, ಭೂಷಣ್‌, ಭಾನು ಅವರಿಂದ 25 ಲಕ್ಷ ರೂ. ಪಡೆದುಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next