Advertisement
ಪಕ್ಷ ನಿಷ್ಠೆಯಿಂದ ದುಡಿದಿರುವುದಕ್ಕೆ ಅವರಿಗೆ ಟಿಕೆಟ್ ನಿರಾಕರಿಸಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
Related Articles
Advertisement
ಪ್ರಮುಖರಾದ ಶಿವರಾಮ ಉಡುಪ, ಉಮೇಶ್ ಆರಾಧ್ಯ, ಉಪೇಂದ್ರ ನಾಯಕ್, ಮಹೇಶ್ ಪೂಜಾರಿ ಇದ್ದರು.
ಸಿಎಂ, ಗೃಹಮಂತ್ರಿ ಸತ್ತಿದ್ದಾರೆಯೇ?ಮಂಗಳೂರಿನ ಮುಖ್ಯರಸ್ತೆಯ ಮೇಲೆ ನಮಾಜ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ, ಇದು ಟಿಪ್ಪು ರಾಜ್ಯ ಎನ್ನುತ್ತಾರೆ. ಉಡುಪಿಯಲ್ಲಿ ಗ್ಯಾಂಗ್‌ವಾರ್ ಆಗುತ್ತದೆ. ಚನ್ನಗಿರಿ ಯಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತಾರೆ. ಹುಬ್ಬಳ್ಳಿಯಲ್ಲಿ ಕೊಲೆಯಾ ಗುತ್ತದೆ. ಹಾಗಾದರೆ ರಾಜ್ಯ ಸರಕಾರ, ಪೊಲೀಸ್ ಇಲಾಖೆ, ಮುಖ್ಯಮಂತ್ರಿ, ಗೃಹಸಚಿವರು ಬದುಕಿದ್ದಾರೋ ಅಥವಾ ಸತ್ತಿದ್ದಾರೋ ಎನ್ನುವ ಪ್ರಶ್ನೆ ಕಾಡುವು ದಿಲ್ಲವೇ? ರಸ್ತೆ ಮೇಲೆ ನಮಾಜ್ ಮಾಡಿ ದವರ ಮೇಲೆ ದೇಶದ್ರೋಹಿ ಮತ್ತು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು. ಜಾತೀಯತೆ, ಸರ್ವಾಧಿಕಾರದತ್ತ ಬಿಜೆಪಿ: ಈಶ್ವರಪ್ಪ
ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಹಿಂದುತ್ವದಿಂದ ಜಾತೀಯತೆಗೆ, ಪಕ್ಷನಿಷ್ಠೆಯಿಂದ ಕುಟುಂಬ ರಾಜಕಾರ ಣಕ್ಕೆ ಹಾಗೂ ಸಾಮೂಹಿಕದಿಂದ ಸರ್ವಾಧಿಕಾರಕ್ಕೆ ಬದಲಾಗಿದೆ. ಒಂದೆಡೆ ರಾಮ-ಲಕ್ಷ್ಮಣರಂತೆ ಕೇಂದ್ರ ದಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿಶ್ವ ನಾಯಕರಾಗಿ ದುಡಿಯುತ್ತಿದ್ದರೆ, ರಾಜ್ಯ ಬಿಜೆಪಿಯನ್ನು ಕೆಲವರು ತಮ್ಮ ಆಸ್ತಿಯಂತೆ ಬಳಸುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಟೀಕಾಪ್ರಹಾರ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಯಡಿಯೂರಪ್ಪ ಮತ್ತವರ ಕುಟುಂಬದ ಹತ್ತಿರ ಇರುವವರಿಗೆ ಮಾತ್ರವೇ ಬಿಜೆಪಿಯಲ್ಲಿ ಮಣೆ ಎಂಬ ಸ್ಥಿತಿ ಉಂಟಾಗಿದೆ ಎಂದರು. ಉಚ್ಚಾಟನೆ ತಾತ್ಕಾಲಿಕ
ನನ್ನ ಒಬ್ಬರು ತಾಯಿ ಭಾರತ ಮಾತೆ, ಇನ್ನೊಂದು ತಾಯಿ ಬಿಜೆಪಿ, ಹಾಗಾಗಿ ನನ್ನನ್ನು ಪಕ್ಷದಿಂದ ಬೇರ್ಪಡಿಸಲು ಯಾರಿಗೂ ಸಾಧ್ಯವಿಲ್ಲ, ನನ್ನನ್ನು ಉಚ್ಚಾಟಿಸಿದ್ದಾರೆ. ಆದರೆ ಶೆಟ್ಟರ್ ಅವ ರನ್ನೂ ಉಚ್ಚಾಟಿಸಿದ್ದರು. ಅವರು ಕಾಂಗ್ರೆಸ್ ಸೇರಿ, ಅಲ್ಲಿ ವಿಧಾನ ಪರಿಷತ್ ಸದಸ್ಯರಾದವರು ಮರಳಿ ಬಂದು ಬಿಜೆಪಿಯಿಂದ ಸಂಸತ್ತಿಗೆ ಸ್ಪರ್ಧಿಸಿದ್ದಾರೆ. ಹಾಗಾಗಿ ನನ್ನದೂ ತಾತ್ಕಾಲಿಕ ವ್ಯವಸ್ಥೆ. ನಾನು ಯಾವತ್ತಿದ್ದರೂ ಬಿಜೆಪಿ ಎಂದರು. ರಾಜ್ಯ ಬಿಜೆಪಿಯಲ್ಲಿ ಕಾಂಗ್ರೆಸ್ ಸಂಸ್ಕೃತಿ ಬಂದಿದೆ, ಬಿಜೆಪಿಯನ್ನು ಶುದ್ಧೀಕರಣ ಮಾಡಬೇಕು, ಅದಕ್ಕಾಗಿ ನಾನು ಸಂಸತ್ ರಘುಪತಿ ಭಟ್ ಟಿಕೆಟ್‌ನಿರೀ ಕ್ಷೆಯಲ್ಲಿದ್ದರು. ಬೇರೆಯವರಿಗೆ ಕೊಡುವಾಗ ಅವರಿಗೆ ಹೇಳಿರಲೇ ಇಲ್ಲ ಎಂದು ಆಪಾದಿಸಿದರು.