ಬೆಂಗಳೂರು: ಪತಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಶಂಕೆ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಮನೆಯೊಂದಕ್ಕೆ ನುಗ್ಗಿ ದಾಂಧಲೆ ನಡೆಸಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ದೊಡ್ಡಗುಬ್ಬಿ ಮುಖ್ಯ ರಸ್ತೆಯ ಬಿಳೇಶಿವಾಲೆಯ ಮಾರುತಿ ಲೇಔಟ್ ನಿವಾಸಿ ರಾಧಿಕಾ(34) ಎಂಬು ವರು ನೀಡಿದ ದೂರಿನ ಮೇರೆಗೆ ಬೈರತಿಯ ಕೆಂಪರಾಜು, ಶರತ್, ಸಮಂತಾ ಎಂಬುವರ ವಿರುದ್ಧ ಕೊತ್ತನೂರು ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ದೂರುದಾರೆ ರಾಧಿಕಾ ಇವೆಂಟ್ ಮ್ಯಾನೇಜ್‌ಮೆಂಂಟ್ ಕೆಲಸ ಮಾಡು ತ್ತಿದ್ದು, 3 ವರ್ಷದ ಹಿಂದೆ ಬಿಳೇಶಿವಾಲೆ ಯಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಿಕೊಂಡು ವಾಸವಿ¨ªಾರೆ. ಈ ಮಧ್ಯೆ 5 ವರ್ಷದ ಹಿಂದೆ ಬೈರತಿಯ ಶರಣ್ ಎಂಬಾತ ರಾಧಿಕಾಗೆ ಪರಿಚಯವಾಗಿದ್ದು, ರಾಧಿಕಾ ಮನೆ ಕಟ್ಟುವಾಗ ಶರಣ್ ಜಲ್ಲಿ, ಮರಳು, ಎಂಸ್ಯಾಂಡ್, ಹಾಲೋಬ್ರಿಕ್ಸ್ ಗಳನ್ನು ಪೂರೈಸಿದ್ದರು. ಅದಕ್ಕೆ ನಗದು ರೂಪದಲ್ಲಿ ಹಣ ಪಡೆದುಕೊಂಡಿದ್ದರು. ಬಳಿಕ ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದರು.
ಈ ನಡುವೆ ಶರಣ್ ಮತ್ತು ರಾಧಿಕಾ ನಡುವೆ ಅಕ್ರಮ ಸಂಬಂಧವಿದೆ ಎಂದು ಶರಣ್ ಪತ್ನಿ ಸಮಂತಾ ಶಂಕಿಸಿದ್ದು, ರಾಧಿಕಾ ಜತೆ ಗಲಾಟೆ ಮಾಡಿದ್ದರು. ಬಳಿಕ ಶರಣ್ ಜತೆ ರಾಧಿಕಾ ಮಾತುಕತೆ ನಿಲ್ಲಿಸಿದ್ದರು. ಆದರೆ, ಫೆ.2ರಂದು ರಾತ್ರಿ 10 ಗಂಟೆ ಸುಮಾರಿಗೆ ಮಾಲ್‌ವೊಂದಕ್ಕೆ ರಾಧಿಕಾ ಹೋಗಿದ್ದಾಗ, ಶರಣ್ ಕೂಡ ಮಾಲ್‌ಗೆ ಬಂದಿದ್ದು, ಈ ವೇಳೆ ಇಬ್ಬರು ಮುಖಾಮುಖೀಯಾಗಿ ಮಾತನಾಡಿ ದ್ದಾರೆ. ಅದನ್ನು ತಪ್ಪಾಗಿ ಅರ್ಥೈಸಿಕೊಂಡ ಸಮಂತಾ, ಮತ್ತೂಮ್ಮ ರಾಧಿಕಾ ಜತೆ ಜಗಳ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.
ಮನೆ ಬಳಿ ಬಂದು ದಾಂಧಲೆ: ಅಲ್ಲದೆ, ಅದೇ ದಿನ ರಾತ್ರಿ ಮಾಲ್‌ನಿಂದ ಮನೆಗೆ ಹೋಗಿದ್ದ ರಾಧಿಕಾರನ್ನು ಹಿಂಬಾಲಿಸಿ ಆಕೆಯ ಮನೆಗೆ ಹೋದ, ಸುಮಂತಾ ಹಾಗೂ ಆಕೆಯ ಸಹೋದರರು ಗಲಾಟೆ ಮಾಡಿದ್ದಾರೆ. ರಾಧಿಕಾ ಮನೆಯ ಬಾಗಿಲು, ಕಿಟಕಿ ಗಾಜುಗಳನ್ನು ಒಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮನೆ ಆವರಣದಲ್ಲಿ ನಿಲುಗಡೆ ಮಾಡಿದ್ದ ಎರಡು ಕಾರು ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ದೊಣ್ಣೆಗಳಿಂದ ಹೊಡೆದು ಹಾನಿಗೊಳಿಸಿ ದಾಂಧಲೆ ನಡೆಸಿದ್ದಾರೆ. ಕಿಟಕಿಯಲ್ಲಿ ದೊಣ್ಣೆಗಳನ್ನು ಎಸೆದು ಗಾಯಗೊಳಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ರಾಧಿಕಾ ದೂರಿನಲ್ಲಿ ಆರೋಪಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.