ಜಕಾರ್ತಾ: ಇಂಡೋನೇಷ್ಯಾದ ದಕ್ಷಿಣ ಸುಲವೆಸಿ ಪ್ರಾಂತ್ಯದ ಮಕಸ್ಸರ್ ನಗರದಲ್ಲಿನ ರೋಮನ್ ಕ್ಯಾಥೋಲಿಕ್ ಚರ್ಚ್‌ವೊಂದರ ಹೊರಭಾಗದಲ್ಲಿ ಭಾನುವಾರ ಬೆಳಗ್ಗೆ 10.35ಕ್ಕೆ ಬಾಂಬ್ ಸ್ಫೋಟಗೊಂಡಿದೆ.
ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು ಜೊತೆಗೆ ಆತ್ಮಹತ್ಯಾ ಬಾಂಬರ್ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಅಸಲಿಗೆ, ಚರ್ಚ್‌ನೊಳಗೆ ಜನರು ತುಂಬಿ ತುಳುಕುತ್ತಿದ್ದರು. ಆದರೆ, ಆತ್ಮಹತ್ಯಾ ಬಾಂಬರ್ ಚರ್ಚ್‌ನೊಳಕ್ಕೆ ಪ್ರವೇಶಿಸುವ ಮುನ್ನವೇ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದರಿಂದ ಭಾರೀ ಪ್ರಮಾಣದ ನರಮೇಧವೊಂದು ತಪ್ಪಿದಂತಾಗಿದೆ.
“ಚರ್ಚ್‌ನ ಮುಂಭಾಗದ ಗೇಟ್ ಬಳಿ, ಸುಮಾರು 10:30ಕ್ಕೆ ಇಬ್ಬರು ವ್ಯಕ್ತಿಗಳು ಬೈಕ್‌ನ ಮೇಲೆ ಆಗಮಿಸಿದರು.
ಅವರಲ್ಲೊಬ್ಬ ಚರ್ಚ್‌ನೊಳಕ್ಕೆ ತರಾತುರಿಯಲ್ಲಿ ನುಗ್ಗಲು ಯತ್ನಿಸಿದ. ಗೇಟ್ ದಾಟಿ ಚರ್ಚ್‌ನ ಕಾಂಪೌಂಡ್‌ನೊಳಕ್ಕೆ ಕಾಲಿಡುತ್ತಿದ್ದಂತೆ ಆತ ಕಟ್ಟಿಕೊಂಡು ಬಂದಿದ್ದ ಬಾಂಬ್ ಸ್ಫೋಟಗೊಂಡಿದೆ” ಎಂದು ಇಂಡೋನೇಷ್ಯಾ ಪೊಲೀಸ್ ಇಲಾಖೆಯ ರಾಷ್ಟ್ರೀಯ ವಕ್ತಾರ ಆರ್ಗೊ ಯುವೊಮೊ ತಿಳಿಸಿದ್ದಾರೆ.
ಇದನ್ನೂ ಓದಿ :ಕಲಬುರಗಿಯಲ್ಲಿ ಹತ್ತು ವರ್ಷದಲ್ಲಿ ಮೂರನೇ ಬಾರಿ ದಾಖಲೆ ಬಿಸಿಲು !