Advertisement

ಮಡಿಕೇರಿಯಲ್ಲಿ ಶಂಕಿತ ನಕ್ಸಲರು

12:02 AM Apr 26, 2019 | Team Udayavani |

ಮಡಿಕೇರಿ: ತಾಲೂಕಿನ ಯವಕಪಾಡಿ ಗ್ರಾಮದ ತಡಿಯಂಡಮೋಳ್‌ ಬೆಟ್ಟ ಪ್ರದೇಶದಲ್ಲಿ ಇಬ್ಬರು ಅಪರಿಚಿತರು ಕಂಡು ಬಂದಿದ್ದು, ನಕ್ಸಲರಿರಬಹುದು ಎಂದು ಶಂಕಿಸಲಾಗಿದೆ. ಮನೆಯೊಂದಕ್ಕೆ ನುಗ್ಗಿ ಅಕ್ಕಿ ಮತ್ತು ಮಹಿಳೆಯೊಬ್ಬರ ಕೈಯಿಂದ ಮೊಬೈಲ್‌ ಫೋನನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

Advertisement

ಮೊಬೈಲ್‌ನ್ನು ಸ್ವಲ್ಪ ದೂರದಲ್ಲಿ ಎಸೆಯಲಾಗಿದೆ. ಗುರುವಾರ ಬೆಳಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಯುವಕಪಾಡಿ ಗ್ರಾಮದ ಕಾರ್ಯಪ್ಪ ಅವರ ಪತ್ನಿ ಕೆ.ಕೆ.ಅನಿತಾ ಮಕ್ಕಳೊಂದಿಗೆ ಮನೆಯಲ್ಲಿದ್ದರು. ಪತಿ ಕಾರ್ಯಪ್ಪ ಅವರಿಗೆ ಫೋನ್‌ ಮಾಡಲೆಂದು ಅಂಗಳಕ್ಕೆ ಬಂದಾಗ ಕಾಫಿ ಗಿಡಗಳ ಮರೆಯಿಂದ ಚೂಡಿದಾರ್‌ ಹಾಗೂ ಓವರ್‌ ಕೋಟ್‌ ಧರಿಸಿದ್ದ ಸುಮಾರು 40ರ ಹರೆಯದ ಓರ್ವ ಮಹಿಳೆ ಹಾಗೂ ಕಪ್ಪು ಬಣ್ಣದ ಜರ್ಕಿನ್‌ ಮತ್ತು ಕಪ್ಪು ಬಣ್ಣದ ಬ್ಯಾಗ್‌ ಹಿಡಿದಿದ್ದ ಪುರುಷ ಇದ್ದಕ್ಕಿದ್ದಂತೆ ಹೊರ ಬಂದರು. ಮಹಿಳೆ, ಅನಿತಾ ಕೈಯಿಂದ ಮೊಬೈಲ್‌ ಕಸಿದು ಯಾರಿಗಾದರೂ ಮಾಹಿತಿ ನೀಡಿದರೆ ಹತ್ಯೆ ಮಾಡು ವುದಾಗಿ ಬೆದರಿಕೆ ಹಾಕಿ ತೆರಳಿದರು. ಸಮೀಪದ ರಾಜೇಶ್‌ ಅವರ ಮನೆಯಿಂದ ಇದೇ ಸಂದರ್ಭ ದಲ್ಲಿ ರೇಷನ್‌ ಅಕ್ಕಿ ಕಾಣೆಯಾಗಿದ್ದು, ಅದನ್ನು ಈ ಅಪರಿಚಿತರು ಕದ್ದೊಯ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ನಕ್ಸಲ್‌ ನಿಗ್ರಹ ದಳ ಮತ್ತು ಕೊಡಗು ಜಿಲ್ಲಾ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next