ಹೊಸದಿಲ್ಲಿ: ದೇಶದ ವಿವಿಧೆಡೆ ದಾಳಿ ನಡೆಸಲು ಉದ್ದೇಶಿಸಿದ್ದ ಹತ್ತು ಶಂಕಿತ ಹರ್ಕತ್‌ಉಗ್ರರನ್ನು ಹೊಸದಿಲ್ಲಿಯ ವಿಶೇಷ ಕೋರ್ಟ್ 12 ದಿನಗಳ ಕಾಲ ಎನ್‌ಐಎ ವಶಕ್ಕೊಪ್ಪಿಸಿ ಆದೇಶ ನೀಡಿದೆ. ಈ ಶಂಕಿತ ಉಗ್ರರನ್ನು ಬುಧವಾರ ಎನ್‌ಐಎ ಬಂಧಿಸಿತ್ತು. 15 ದಿನಗಳ ಕಾಲ ವಶಕ್ಕೆ ನೀಡುವಂತೆ ತನಿಖಾ ಸಂಸ್ಥೆ ಒತ್ತಾಯಿಸಿತಾದರೂ, ಬಂಧಿತರ ಪರ ವಕೀಲ ಎಂ.ಎಸ್.ಖಾನ್ ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಅಂತಿಮ ವಾಗಿ ನ್ಯಾಯಾಧೀಶ ಜ.8ರ ವರೆಗೆ ವಶಕ್ಕೊಪ್ಪಿಸಿ ಆದೇಶ ನೀಡಿದ್ದಾರೆ. ಬಂಧಿತರು ಕುಟುಂಬ ಸದಸ್ಯರ ಜತೆಗೆ ಮಾತು ಕತೆ ನಡೆಸಲೂ ಕೋರ್ಟ್ ಅವಕಾಶ ನೀಡಿತ್ತು.
ಯಾವುದೇ ಕಂಪ್ಯೂಟರ್‌ಗಳ ಮೇಲಿನ ಮಾಹಿತಿ ಛೇದನ ಅಧಿಕಾರವನ್ನು ತನಿಖಾ ಸಂಸ್ಥೆ ಗಳಿಗೆ ನೀಡದೇ ಇರುತ್ತಿದ್ದರೆ ಎನ್‌ಐಎ ಇವ ರನ್ನು ಬಂಧಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟಿÉ ಹೇಳಿದ್ದಾರೆ. ಯಾವುದೇ ರೀತಿಯ ಕಂಪ್ಯೂಟರ್‌ಗಳಲ್ಲಿನ ಮಾಹಿತಿಯನ್ನು ಛೇದಿಸುವ ಅಧಿಕಾರವನ್ನು ಹತ್ತು ತನಿಖಾ ಸಂಸ್ಥೆಗಳಿಗೆ ನೀಡಿ ಕೇಂದ್ರ ಸರಕಾರ ಹೊರಡಿಸಿದ್ದ ಬಗ್ಗೆ ಮಾಜಿ ಸಚಿವ ಪಿ.ಚಿದಂಬರಂ ಮತ್ತು ಇತರರು ಕಟುವಾಗಿ ಟೀಕಿಸಿದ್ದಕ್ಕೆ ಜೇಟಿ ಈ ತಿರುಗೇಟು ನೀಡಿದ್ದಾರೆ.
ಸರಕಾರದ ನಿರ್ಧಾರವನ್ನು ಸಮರ್ಥಿಸಿ ಸರಣಿ ಟ್ವೀಟ್‌ಗಳನ್ನು ಮಾಡಿರುವ ವಿತ್ತ ಸಚಿವರು ಎನ್‌ಐಎ ಕೈಗೊಂಡ ಕಾರ್ಯಾಚರಣೆಯನ್ನು ಸಮರ್ಥಿಸಿ, ಶ್ಲಾಘನೆ ವ್ಯಕ್ತಪಡಿಸಿದ್ದಾರೆ. “ಇಲೆಕ್ಟ್ರಾನಿಕ್ ಸಂಪರ್ಕ ಸಾಧನಗಳ ಮಾಹಿತಿ ಛೇದನಕ್ಕೆ ಅವಕಾಶ ನೀಡದೇ ಇರುತ್ತಿದ್ದರೆ ಎನ್‌ಐಎಗೆ ಹತ್ತು ಮಂದಿ ಶಂಕಿತ ಐಸಿಸ್ ಬೆಂಬಲಿಗರ ಬಂಧನ ಕಾರ್ಯಾಚರಣೆ ನಡೆಸಲು ಸಾಧ್ಯವಿರುತ್ತಿತ್ತೇ?’ ಎಂದು ಪ್ರಶ್ನಿಸಿದ್ದಾರೆ. ಕೇಂದ್ರದ ಮಾಜಿ ಗೃಹ ಸಚಿವ ಪಿ.ಚಿದಂಬರಂ ಕೇಂದ್ರದ ಆದೇಶದ ವಿರುದ್ಧ ಟ್ವೀಟ್ ಮಾಡಿ “ನಿಮ್ಮದೂ ಸೇರಿದಂತೆ ಎಲ್ಲರ ಕಂಪ್ಯೂಟರ್‌ಗಳ ಮೇಲೆ ಯಾರಾದರೂ ನಿಗಾ ಇರಿಸಿದ್ದಾರೆ ಇದೊಂದು ನಿಗಾವಣೆ ದೇಶವಿದ್ದಂತೆ’ ಎಂದು ಟೀಕಿಸಿದ್ದರು. ಅದಕ್ಕೆ ತಿರುಗೇಟು ನೀಡಿರುವ ಸಚಿವ ಜೇಟಿ ಹೆಚ್ಚಿನ ಮಾಹಿತಿ ಛೇದನ ನಡೆದದ್ದು ಯುಪಿಎ ಅವಧಿಯಲ್ಲಿಯೇ ಎಂದು ಮೈಕ್ರೋಬ್ಲಾಗಿಂಗ್ ತಾಣದಲ್ಲಿ ಪ್ರತ್ಯುತ್ತರ ನೀಡಿದ್ದಾರೆ.