Advertisement

ಜೀವನದಲ್ಲಿ ಸಮೃದ್ಧಿ ತರಲು ಇಬ್ಬರು ಮಹಿಳೆಯರ ನರಬಲಿ; ದಂಪತಿ ಬಂಧನ

04:17 PM Oct 11, 2022 | Team Udayavani |

ಪತ್ತನಂತಿಟ್ಟ : ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಮಾಟಮಂತ್ರದ ಭಾಗವಾಗಿ ಇಬ್ಬರು ಮಹಿಳೆಯರನ್ನು ಬಲಿಕೊಡಲಾಗಿರುವ ಆತಂಕಕಾರಿ ಘಟನೆ ನಡೆದಿದ್ದು, ಅಪರಾಧದಲ್ಲಿ ಭಾಗಿಯಾಗಿರುವ ಶಂಕಿತ ದಂಪತಿ ಸೇರಿದಂತೆ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

Advertisement

ಬೀದಿಗಳಲ್ಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುವ ಮೂಲಕ ಜೀವನ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ಆರೋಪಿಗಳು ತಮ್ಮ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಜೀವನದಲ್ಲಿ ಸಮೃದ್ಧಿ ತರಲು ಬಲಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಪಾಕಿಸ್ಥಾನ ಉತ್ತಮ ತಂಡ ಆದರೆ…; ಸ್ಪಿನ್ನರ್ ಚಹಾಲ್ ದೊಡ್ಡ ಹೇಳಿಕೆ

ಕೊಲೆಗಳ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ತಲೆಗೆ ಕಾಯಿಲೆ ಇರುವವರು ಮಾತ್ರ ಇಂತಹ ಅಪರಾಧಗಳನ್ನು ಮಾಡಲು ಸಾಧ್ಯ.ಇಂತಹ ಮಾಟಮಂತ್ರ ಮತ್ತು ವಾಮಾಚಾರದ ಆಚರಣೆಗಳು ಸುಸಂಸ್ಕೃತ ಸಮಾಜಕ್ಕೆ ಸವಾಲಾಗಿ ಮಾತ್ರ ಕಾಣಬಹುದಾಗಿದೆ’ ಎಂದು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಹತ್ಯೆಯಾದವರು ಸುಮಾರು 50 ರ ಆಸುಪಾಸಿನವರಾಗಿದ್ದು, ಇಲ್ಲಿನ ಕಡವಂತಾರ ಮತ್ತು ಸಮೀಪದ ಕಾಲಡಿ ನಿವಾಸಿಗಳು. ಈ ವರ್ಷ ಸೆಪ್ಟೆಂಬರ್ ಮತ್ತು ಜೂನ್‌ನಲ್ಲಿ ಮಹಿಳೆಯರು ನಾಪತ್ತೆಯಾಗಿದ್ದರು ಮತ್ತು ಅಂತಿಮವಾಗಿ ತನಿಖೆಯಲ್ಲಿ ನರಬಲಿ ನೀಡಿರುವುದು ತಿಳಿದು ಬಂದಿದೆ ಎಂದರು.

Advertisement

ಪತ್ತನಂತಿಟ್ಟದ ತಿರುವಲ್ಲಾದ ಎಳಂತೂರ್ ಗ್ರಾಮದಲ್ಲಿ ಎರಡು ಸ್ಥಳಗಳಲ್ಲಿ ಹೂಳುವ ಮೊದಲು ಮಹಿಳೆಯರ ದೇಹದ ಭಾಗಗಳನ್ನು ತುಂಡುಗಳಾಗಿ ಕತ್ತರಿಸಲಾಯಿತು ಎಂದು ಆರೋಪಿಗಳ ತಪ್ಪೊಪ್ಪಿಗೆಯನ್ನು ಉಲ್ಲೇಖಿಸಿ ಪೊಲೀಸರು ಹೇಳಿದ್ದಾರೆ.

ವರದಿಯ ಪ್ರಕಾರ ಬಂಧಿತ ವ್ಯಕ್ತಿಗಳನ್ನು ಸ್ಥಳೀಯ ಮಸಾಜ್ ಥೆರಪಿಸ್ಟ್ ಭಗವಲ್ ಸಿಂಗ್ ಅವರ ಪತ್ನಿ ಲೈಲಾ ಎಂದು ಗುರುತಿಸಲಾಗಿದೆ. ಇಬ್ಬರೂ ತಿರುವಲ್ಲಾದ ಸ್ಥಳೀಯರು ಮತ್ತು ಪೆರುಂಬವೂರು ಮೂಲದ ರಶೀದ್ ಅಲಿಯಾಸ್ ಮುಹಮ್ಮಂದ್ ಶಾಫಿ ಎಂಬಾತನು ಆಮಿಷವೊಡ್ಡಿ ಮಹಿಳೆಯರನ್ನು ದಂಪತಿಯ ಮನೆಗೆ ಕರೆತಂದು ಬಲಿ ನೀಡಿರುವುದಾಗಿ ಶಂಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next