Advertisement

ಕೊರೊನಾ ಶಂಕಿತ ಮೃತ ವ್ಯಕ್ತಿಯ ಪರೀಕ್ಷಾ ವರದಿ ಬಂದಿಲ್ಲ: ಕಲಬುರಗಿ ಡಿಸಿ

10:29 AM Mar 13, 2020 | sudhir |

ಕಲಬುರಗಿ: ಕೊರೊನಾ ಶಂಕಿತ ಮೃತ ವೃದ್ಧನ ಗಂಟಲು ದ್ರವ ಮಾದರಿಯ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿಗೂ ಮುನ್ನ ವೃದ್ಧನ ಸಂಪರ್ಕದಲ್ಲಿದ್ದ ಒಟ್ಟು 43 ಜನರ ಮೇಲೆ ನಿಗಾ ವಹಿಸಲಾಗುತ್ತಿದೆ‌. ಇದರಲ್ಲಿ ನಾಲ್ವರು ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ‌ನೀಡಿದ ಸಿಬ್ಬಂದಿ ಸೇರಿದ್ದಾರೆ.‌ ಆದರೆ, ಅವರಲ್ಲಿ ಯಾರಿಗೂ ಯಾವುದೇ ರೀತಿಯ ಸೋಂಕು ಪತ್ತೆಯಾಗಿಲ್ಲ ಎಂದರು.

ಜಿಮ್ಸ್ ನಲ್ಲೇ ಪರೀಕ್ಷೆ: ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ಪತ್ತೆ ಪರೀಕ್ಷೆಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ವೈರಾಲಾಜಿ ಘಟಕದ ಸಲಕರಣೆಗಳ ಇಲ್ಲೇ ಲಭ್ಯವಿದ್ದು, ಕೆಲ ಕಿಟ್ ಗಳು ಬೇಕಾಗಿದೆ‌. ಅದನ್ನು ಒದಗಿಸುವುದಾಗಿ ಸರ್ಕಾರ ಹೇಳಿದೆ ಎಂದರು.

ಅದಲ್ಲದೇ, ದೇಶದ ಎಲ್ಲ ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಅದರಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಮ್ಮಲ್ಲಿನ ಐಎಸ್ಐ ಆಸ್ಪತ್ರೆಯಲ್ಲಿ ಆರಂಭಿಕವಾಗಿ 200 ಬೆಡ್ ಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ನಂತರದಲ್ಲಿ ಇನ್ನೂ 200 ಬೆಡ್ ಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next