Advertisement
ವಿಶ್ವ ಆಧುನಿಕ ಜಗತ್ತಿನಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಅದರಲ್ಲಿ ಭಯೋತ್ಪಾದನೆಯೂ ಒಂದು. ಅದರ ವಿರುದ್ಧ ಹೋರಾಡಲು ಪ್ರಬಲವಾಗಿರುವ ಭದ್ರತಾ ವ್ಯವಸ್ಥೆ ರೂಪಿಸಬೇಕಾಗಿದೆ. ಭಯೋತ್ಪಾದನೆ ಎನ್ನುವುದು ಮಾನವನ ಮೂಲ ಹಕ್ಕು, ಶಾಂತಿ ಮತ್ತು ಅಭಿವೃದ್ಧಿಯ ಶತ್ರು. ಅವುಗಳು ಕೇವಲ ಗಡಿಯಾಚೆಯಿಂದ ಬರುವುದಿಲ್ಲ. ಅಂತಾರಾಷ್ಟ್ರೀಯವಾಗಿರುವ ಸ್ಥಿರತೆಯ ನಾಶಕ್ಕೆ ಅದು ಮುಂದಾಗಿದೆ. ಸಮಾಜದ ನಡುವೆ ಭಯದ ಗೋಡೆ ನಿರ್ಮಿಸುವುದೇ ಅದರ ಆದ್ಯತೆಯಾಗಿದೆ ಎಂದು ಸುಷ್ಮಾ ಕಟುವಾಗಿ ಪಾಕಿಸ್ಥಾನದ ವಿರುದ್ಧ ವಾಗ್ಧಾಳಿ ನಡೆಸಿದರು. ಭಯೋತ್ಪಾದನೆ ವಿರುದ್ಧದ ಹೋರಾಟವೆಂದರೆ, ಅದನ್ನು ಎಲ್ಲಾ ಮೂಲಗಳಿಂದಲೂ ಹೊಡೆದೋಡಿಸುವಂಥದ್ದಾಗಿರಬೇಕು. ಅದಕ್ಕೆ ಹಣಕಾಸಿನ ಮತ್ತು ಇತರ ವಿಚಾರಗಳಲ್ಲಿ ಬೆಂಬಲ ನೀಡುವ ರಾಷ್ಟ್ರಗಳ ಮೇಲೂ ತಡೆಯೊಡ್ಡಬೇಕು ಎಂದರು.
ಬೆಲ್ಟ್ ಆ್ಯಂಡ್ ರೋಡ್‌ಗೆ ಬೆಂಬಲವಿಲ್ಲ
ಚೀನಾ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಬೆಲ್ಟ್ ಆ್ಯಂಡ್ ರೋಡ್ ಮೂಲಸೌಕರ್ಯ ಯೋಜನೆಗೆ ಭಾರತ ಬೆಂಬಲ ನೀಡಿಲ್ಲ. ಶಾಂಘೈ ಸಹಕಾರ ಒಕ್ಕೂಟ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ಮುಕ್ತಾಯದಲ್ಲಿ ಹೊರಡಿಸಲಾದ ಪ್ರಕಟಣೆಯಲ್ಲಿ ಚೀನಾದ ಮಹತ್ವಾ ಕಾಂಕ್ಷೆಯ ಯೋಜನೆಗೆ ಭಾರತ ಬೆಂಬಲ ನೀಡಿಲ್ಲ. ಖಜಕಿಸ್ಥಾನ, ಕಿರ್ಗಿಸ್ಥಾನ, ಪಾಕಿಸ್ಥಾನ, ರಷ್ಯಾ, ತಜಕಿಸ್ಥಾನ, ಉಜ್ಬೇಕಿಸ್ಥಾನಗಳ ವಿದೇಶಾಂಗ ಸಚಿವರು ಯೋಜನೆಗೆ ಬೆಂಬಲ ವ್ಯಕ್ತಪಡಿಸಿ ಹೇಳಿಕೆಗೆ ಸಹಿ ಹಾಕಿದ್ದಾರೆ.
Related Articles
27ರಂದು ಭಾರತದ ಪ್ರಧಾನಿ ಮೋದಿ ನೇರವಾಗಿ ವುಹಾನ್‌ಗೆ ಆಗಮಿಸಲಿದ್ದು, ಅವರು ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಾತುಕತೆ ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನಾದ ಸಂಸ್ಥಾಪಕ ಮಾವೋ ಝೆಡಾಂಗ್‌ರ ಖಾಸಗಿ ವಿಲ್ಲಾದಲ್ಲಿ ನಡೆಯಲಿದೆ. ಎರಡೂ ನಾಯಕರ ಭೇಟಿಯಿಂದ ಭಾರತ-ಚೀನಾ ಸಂಬಂಧಕ್ಕೆ ಹೊಸ ಹೊಳಹು ಸಿಗಲಿದೆ. ಜತೆಗೆ ಯಾವುದೇ ಅಧಿಕೃತ ಹೇಳಿಕೆ ಅಥವಾ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮಗಳಿಲ್ಲ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. 1988ರಲ್ಲಿ ಭಾರತದ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಮತ್ತು ಚೀನಾದ ಅಂದಿನ ಅಧ್ಯಕ್ಷ ದಿ.ಡೆಂಗ್ ಕ್ಸಿಯಾವೋಪಿಂಗ್ ನಡುವೆ ನಡೆದಿದ್ದ ಭೇಟಿಯಷ್ಟೇ ಈ ಭೇಟಿಯೂ ಪ್ರಮುಖವಾಗಿದೆ ಎಂದು ಚೀನಾ ಸರಕಾರದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಹೇಳಿಕೊಂಡಿದೆ. ಮತ್ತೂಂದು ಪತ್ರಿಕೆ ‘ಚೈನಾ ಡೈಲಿ’ ಕೂಡ ಅದೇ ಅಭಿಪ್ರಾಯ ವ್ಯಕ್ತಪಡಿಸಿದೆ.
Advertisement
ಭಾರತ ಮತ್ತು ಚೀನಾ ನಡುವೆ ಪರಸ್ಪರ ನಂಬಿಕೆಯ ಕೊರತೆಯಿಂದಾಗಿ ಡೋಕ್ಲಾಂ ಸಮಸ್ಯೆ ಉಂಟಾಯಿತು. ಮುಂದಿನ ದಿನಗಳಲ್ಲಿ ಅಂಥ ಯಾವುದೇ ವಿವಾದ ತಲೆದೋರದಂತೆ ಮಾಡಲು ಬೇಕಾದ ವಾತಾವರಣವನ್ನು ಸೃಷ್ಟಿಸಲಾಗುವುದು.– ಕಾಂಗ್ ಕ್ಸುವಾನ್‌ಯೋ, ಚೀನಾದ ಸಚಿವ