Advertisement

ಅನ್ಯೋನ್ಯ ದಾಂಪತ್ಯ

03:13 AM Aug 07, 2019 | mahesh |

1975ರ ಜು. 13ರಂದು ಸುಷ್ಮಾ ಅವರು, ಸ್ವರಾಜ್‌ ಕೌಶಲ್ ಅವರನ್ನು ವಿವಾಹವಾಗಿದ್ದರು. ಆಗ, ದೇಶದೆಲ್ಲೆಲ್ಲೂ ತುರ್ತು ಪರಿಸ್ಥಿತಿಯಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ಸುಷ್ಮಾ ಸ್ವರಾಜ್‌ ಈ ಹಿಂದೆ ಕಾರ್ಯನಿರ್ವಹಿಸಿದ್ದ ಕಾರಣ ಅವರಿಗೆ, ಕೌಶಲ್ ಅವರ ಪರಿಚಯವಿತ್ತು. ಆದರೆ, ತುರ್ತು ಪರಿಸ್ಥಿತಿಯ ವಿರುದ್ಧ ಸಿಡಿದೆದ್ದಾಗ ಅವರಿಬ್ಬರೂ ಪರಸ್ಪರ ಹತ್ತಿರವಾದರು. ಮದುವೆಯ ನಂತರ ಸುಷ್ಮಾ ಜೀ ಅವರು ರಾಜಕೀಯದಲ್ಲಿ ಗುರುತಿಸಿಕೊಂಡರೆ, ಕೌಶಲ್ ಅವರು ವಕೀಲ ಕಾಯಕದಲ್ಲೇ ಮುಂದುವರಿದರು.

Advertisement

ಕೌಶಲ್ ಅವರು, 1990ರಿಂದ 1993ರವರೆಗೆ ಮಿಜೋರಾಂ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. 1998ರಿಂದ 2004ರವರೆಗೆ ಲೋಕಸಭಾ ಸದಸ್ಯರೂ ಆಗಿದ್ದರು. ಅವರ ಈ ರಾಜಕೀಯ ಸಾಧನೆಗಳಿಗೆ ಸುಷ್ಮಾ ಸ್ವರಾಜ್‌ ಅವರ ಪ್ರೋತ್ಸಾಹವೂ ಬೆನ್ನಿಗಿತ್ತು. ಸುಷ್ಮಾ-ಕೌಶಲ್ ದಂಪತಿಗೆ ಬಾನ್ಸುರಿ ಎಂಬ ಮಗಳಿದ್ದಾರೆ. ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿರುವ ಅವರು, ಲಂಡನ್‌ನ ಇನ್ನರ್‌ ಸಿಟಿಯಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸುಷ್ಮಾ ಅವರ ಸಹೋದರಿ ವಂದನಾ ಶರ್ಮಾ ಅವರು, ಹರ್ಯಾಣದ ಸರ್ಕಾರಿ ಕಾಲೇಜೊಂದರ ರಾಜಕೀಯ ಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ. ಇನ್ನು, ಸಹೋದರ ಡಾ. ಗುಲ್ಶನ್‌ ಶರ್ಮಾ ಅವರು, ಅಂಬಾಲದಲ್ಲಿ ಆಯುರ್ವೇದ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next