ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರಾಗಿ ಸುಶೀಲ್ ಚಂದ್ರ ಅವರು ನೇಮಕವಾಗಿದ್ದು, ಮಂಗಳವಾರ (ಏ.13) ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಇವರು ಮೇ.14 2022ರ ವರೆಗೆ ಚುನಾವಣಾ ಆಯೋಗದ ಮುಖ್ಯ ಆಯಕ್ತರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇವರು 2019 ರಲ್ಲಿ ಚುನಾವಣಾ ಆಯುಕ್ತರಾಗಿ ನೇಮಕೊಂಡಿದ್ದರು. ಇದೀಗ ಮುಖ್ಯ ಆಯುಕ್ತರಾಗಿ ಬಡ್ತಿ ಪಡೆಯುತ್ತಿದ್ದಾರೆ.
ಸುಶೀಲ್ ಚಂದ್ರ ಅವರ ಅಧಿಕಾರಾವಧಿಯಲ್ಲಿ ಉತ್ತರ ಪ್ರದೇಶ ಪಂಜಾಬ್, ಗೋವಾ, ಉತ್ತರಾಖಂಡ ಹಾಗೂ ಮಣಿಪುರ ವಿಧಾನ ಸಭೆಯ ಚುನಾವಣೆಗಳು ನಡೆಯಲಿವೆ.
ಸುಶೀಲ್ ಚಂದ್ರ ಅವರು ಚುನಾವಣಾ ಆಯುಕ್ತರಾಗಿ ನೇಮಕಗೊಳ್ಳುವ ಮುನ್ನ ಸೆಂಟ್ರಲ್ ಬೋರ್ಡ್ ಆಫರ್ ಡೈರೆಕ್ಟ್ ಟ್ಯಾಕ್ಸ್ ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.