Advertisement

IMDb ರೇಟಿಂಗ್ ನಲ್ಲಿ ಸುಶಾಂತ್ ಸಿಂಗ್ ಅಭಿನಯದ ದಿಲ್ ಬೇಚಾರ ನೂತನ ದಾಖಲೆ !

12:40 PM Jul 26, 2020 | Mithun PG |

ಮುಂಬೈ: ಸುಶಾಂತ್ ಸಿಂಗ್ ನಟನೆಯ ದಿಲ್ ಬೇಚಾರ ಸಿನಿಮಾ IMDB ( ಇಂಟರ್ ನೆಟ್ ಮೂವಿ ಡೇಟಾ ಬೇಸ್ ) ರೇಟಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಟಾಪ್ 10 ಸಿನಿಮಾಗಳ ಪಟ್ಟಿಯಲ್ಲಿ ದಿಲ್ ಬೇಚಾರ ಚಿತ್ರಕ್ಕೆ 8.9 ಅಂಕಗಳನ್ನು ನೀಡಲಾಗಿದೆ.

Advertisement

ಸುಶಾಂತ್ ಸಿಂಗ್ ರಜಪೂತ್ ನಟನೆಯ ಕೊನೆಯ ಸಿನಿಮಾ ಇದಾಗಿದ್ದು ಜುಲೈ 24ರಂದು ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗಿತ್ತು. ಮಾತ್ರವಲ್ಲದೆ ಸಿನಿಮಾಸಕ್ತರಿಂದ ಅಭೂತಪೂರ್ವ ಮೆಚ್ಚುಗೆಗೆ ಪಾತ್ರವಾಗಿದ್ದು ಸಿನಿಮಾ ಮಂದಿಯೇ ಸುಶಾಂತ್ ನಟನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಗಮನಾರ್ಹ ಸಂಗತಿಯೆಂದರೇ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಕಮಲ್ ಹಾಸನ್ ಅಭಿನಯದ 2003ರಲ್ಲಿ ತೆರೆಗೆ ಬಂದಿದ್ದ ಅನ್ಬೆ ಶಿವಮ್ ಚಿತ್ರದ ರೇಟಿಂಗ್ ಅನ್ನು ಕೂಡ ದಿಲ್ ಬೇಚಾರ ಚಿತ್ರ ಹಿಂದಿಕ್ಕಿದೆ. ಸುಂದರ್ ಸಿ ನಿರ್ದೇಶನದ, ಕಮಲ್ ಹಾಸನ್ ಮತ್ತು ಮಾಧವನ್ ನಟಿಸಿದ್ದ ಅನ್ಬೆ ಶಿವಮ್ ಈವೆಗೂ 8.5 ಅಂಕಗಳೊಂದಿಉಗೆ ಮೊದಲ ಸ್ಥಾನದಲ್ಲಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next