Advertisement

ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣ ಸಿಬಿಐಗೆ : ಇಂದು ಸುಪ್ರೀಂ ತೀರ್ಪು

01:34 AM Aug 19, 2020 | mahesh |

ಹೊಸದಿಲ್ಲಿ/ಮುಂಬಯಿ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೋ, ಬೇಡವೋ ಹಾಗೂ ರಿಯಾ ಚಕ್ರವರ್ತಿ ವಿರುದ್ಧದ ಎಫ್ಐಆರ್‌ ಅನ್ನು ಪುಣೆಯಿಂದ ಮುಂಬಯಿಗೆ ವರ್ಗಾಯಿಸಬೇಕೋ, ಬೇಡವೋ ಎಂಬ ಕುರಿತ ಮಹತ್ವದ ತೀರ್ಪು ಬುಧವಾರ ಹೊರಬೀಳಲಿದೆ.

Advertisement

ಬೆಳಗ್ಗೆ 11 ಗಂಟೆಗೆ ಸುಪ್ರೀಂ ಕೋರ್ಟ್‌ ಈ ಕುರಿತು ತೀರ್ಪು ನೀಡುವ ಸಾಧ್ಯತೆಯಿದೆ. ಬಿಹಾರ ಪೊಲೀಸರ ಎಫ್ಐಆರ್‌ ಸಂಪೂರ್ಣವಾಗಿ ಕಾನೂನುಬಾಹಿರವಾಗಿದ್ದು, ಈ ಪ್ರಕರಣ ಅವರ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲದೆ, ಸಿಬಿಐ ತನಿಖೆಗೆ ಶಿಫಾರಸು ಮಾಡುವ ಅಧಿಕಾರವೂ ಅವರಿಗಿಲ್ಲ. ಆದರೆ, ಸುಪ್ರೀಂ ಕೋರ್ಟ್‌ ಈ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಯೇ ನಡೆಸಲಿ ಎಂದು ಹೇಳಿತ್ತು.

ಹೇಳಿಕೆ ದಾಖಲು: ಹಣಕಾಸು ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮಂಗಳವಾರ ಸುಶಾಂತ್‌ ತಂದೆ ಕೆ.ಕೆ. ಸಿಂಗ್‌ ಹೇಳಿಕೆ ಪಡೆದಿದೆ. ಸುಶಾಂತ್‌ರ ಆದಾಯ, ಹೂಡಿಕೆ, ವೃತ್ತಿಪರ ಅಸೈನ್‌ಮೆಂಟ್‌ಗಳು ಹಾಗೂ ರಿಯಾ ಮತ್ತಿತರರ ಜತೆಗಿನ ಸಂಬಂಧದ ಕುರಿತು ಪ್ರಶ್ನಿಸಲಾಗಿದೆ ಎಂದು ಇ.ಡಿ. ಮೂಲಗಳು ತಿಳಿಸಿವೆ. ಈ ನಡುವೆ, ರಿಯಾ ಚಕ್ರವರ್ತಿ ಶಿವಸೇನೆ ನಾಯಕ ಆದಿತ್ಯ ಠಾಕ್ರೆಯವರನ್ನು ಯಾವತ್ತೂ ಭೇಟಿಯಾಗಿಲ್ಲ ಎಂದು ರಿಯಾ ಪರ ವಕೀಲರು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next