Advertisement

ನಟ ಸುಶಾಂತ್ ಸಿಂಗ್ ಸಾವಿಗೂ ಮುನ್ನ ವಿಷಪ್ರಾಶನ ಮಾಡಿಸಲಾಗಿತ್ತು: ಸ್ವಾಮಿ ಆರೋಪ

04:51 PM Aug 25, 2020 | Nagendra Trasi |

ನವದೆಹಲಿ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಸತ್ಯಾಂಶ ಬಯಲಿಗೆಳೆಯಲು ಸಿಬಿಐ ತನಿಖೆಯನ್ನು ಚುರುಕುಗೊಳಿಸಿದ್ದು, ಪ್ರತಿದಿನ ಹೊಸ ಬೆಳವಣಿಗೆ ನಡೆಯುತ್ತಿದೆ. ಏತನ್ಮಧ್ಯೆ ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಸುಶಾಂತ್ ಸಾವಿನ ಪ್ರಕರಣದ ಬಗ್ಗೆ ನಿರಂತರವಾಗಿ ಟ್ವೀಟ್ ಮಾಡುತ್ತಿದ್ದು, ಇದೀಗ ಸುಶಾಂತ್ ಸಾವಿಗೂ ಮುನ್ನ ವಿಷ ಪ್ರಾಶನ ಮಾಡಿಸಲಾಗಿತ್ತು ಎಂದು ಆರೋಪಿಸಿದ್ದಾರೆ.

Advertisement

ಸ್ವಾಮಿ ಅವರ ಟ್ವೀಟ್ ನಲ್ಲಿ, ಈಗ ಸುಶಾಂತ್ ಹಂತಕರ ಪೈಶಾಚಿಕ ಮನಸ್ಥಿತಿ ಮತ್ತು ಅವರ ಉದ್ದೇಶ ನಿಧಾನಕ್ಕೆ ಬಹಿರಂಗವಾಗತೊಡಗಿದೆ. ಸುಶಾಂತ್ ಹೊಟ್ಟೆಯಲ್ಲಿದ್ದ ವಿಷ ಪತ್ತೆ ಹಚ್ಚಲು ಸಾಧ್ಯವಾಗಬಾರದು ಎಂಬ ಉದ್ದೇಶದಿಂದ ಬಲವಂತವಾಗಿ ಮರಣೋತ್ತರ ಪರೀಕ್ಷೆಯನ್ನು ವಿಳಂಬವಾಗಿ ಮಾಡಲಾಗಿತ್ತು. ಆದರೆ ಇದಕ್ಕೆ ಯಾರು ಹೊಣೆಗಾರರು ಎಂಬುದನ್ನು ಸಮಯ ಬಂದಾಗ ಬಹಿರಂಗವಾಗಲಿದೆ” ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲ ಸಿನಿಮಾ ನಿರ್ಮಾಪಕ ಹಾಗೂ ಸುಶಾಂತ್ ಸಿಂಗ್ ಸ್ವಯಂ ಘೋಷಿತ ಗೆಳೆಯ ಸಂದೀಪ್ ಎಸ್ ಸಿಂಗ್ ಬಗ್ಗೆಯೂ ಸ್ವಾಮಿ ಪ್ರಶ್ನಿಸಿದ್ದಾರೆ. ಶಂಕಿತ ಸಂದೀಪ್ ಎಷ್ಟು ಬಾರಿ ದುಬೈಗೆ ಪ್ರಯಾಣ ಬೆಳೆಸಿದ್ದಾನೆ ಮತ್ತು ಯಾಕೆ ಎಂಬ ಬಗ್ಗೆ ವಿಚಾರಿಸಬೇಕು ಎಂದು ಹೇಳಿದ್ದಾರೆ.


2020ರ ಜೂನ್ 14ರಂದು ಬಾಂದ್ರಾ ನಿವಾಸದಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಹೇಳಲಾಗಿತ್ತು.  ಇದೀಗ ಸಿಬಿಐ ಸುಶಾಂತ್ ಸಾವಿನ ಪ್ರಕರಣವನ್ನು ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸುತ್ತಿದೆ. ಈಗಾಗಲೇ ಸುಶಾಂತ್ ಗೆಳೆಯ ಸಿದ್ದಾರ್ಥ ಪಿಥಾನಿ, ಅಡುಗೆಯಾತ ನೀರಜ್, ಸಹಾಯಕ ದೀಪೇಶ್ ಸಾವಂತ್ ಬಳಿ ಸಿಬಿಐ ಕ್ರೈಂ ಘಟನೆಯನ್ನು ಮರುಸೃಷ್ಟಿಸಿ ವಿವರ ಪಡೆದಿದೆ. ಸುಶಾಂತ್ ನಿಧನದ ದಿನ ಈ ಮೂವರು ಮನೆಯಲ್ಲಿದ್ದರು ಎಂದು ವರದಿ ತಿಳಿಸಿದೆ.

ಶೀಘ್ರದಲ್ಲಿಯೇ ಸಿಬಿಐ ಗೆಳತಿ ರಿಯಾ ಚಕ್ರವರ್ತಿಗೆ ವಿಚಾರಣೆಗೊಳಗಾಗಲು ಸಮನ್ಸ್ ನೀಡುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next