ನವದೆಹಲಿ:ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿಂತೆ ಪೊಲೀಸ್ ಅಧಿಕಾರಿಗಳು ಸುಶಾಂತ್ ಮಾನಸಿಕ ಒತ್ತಡಕ್ಕೆ ಭೇಟಿಯಾಗಿ ಸಲಹೆ ಪಡೆದಿದ್ದ ವೈದ್ಯರ ಹೇಳಿಕೆಯನ್ನು ಪಡೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಮುಂಬೈನ ಸುಶಾಂತ್ ನಿವಾಸದಲ್ಲಿ ವೈದ್ಯರ ಪ್ರಿಸ್ ಕ್ರಿಪ್ಶನ್ ಪತ್ತೆಯಾಗಿತ್ತು. ಆತ್ಮಹತ್ಯೆ ಹಿನ್ನೆಲೆಯಲ್ಲಿ ವೈದ್ಯರನ್ನು ವಿಚಾರಣೆಗೊಳಪಡಿಸಿದ್ದು, ಸುಶಾಂತ್ ಮಾನಸಿಕ ಒತ್ತಡ ಮತ್ತು ಯಾವ ರೀತಿ ಚಿಕಿತ್ಸೆ ನೀಡುತ್ತಿದ್ದೀರಿ ಎಂಬ ಮಾಹಿತಿ ಕೇಳಿರುವುದಾಗಿ ವರದಿ ವಿವರಿಸಿದೆ.
ಪೊಲೀಸರ ಪ್ರಕಾರ, ಈ ಮೊದಲು ವೈದ್ಯರನ್ನು ವಿಚಾರಣೆಗೆ ಒಳಪಡಿಸಿರಲಿಲ್ಲವಾಗಿತ್ತು. ಯಾಕೆಂದರೆ ಇತರರ ವಿಚಾರಣೆಯಲ್ಲಿನ ಹೇಳಿಕೆ ಆಧಾರದ ಮೇಲೆ ಆ ಹೇಳಿಕೆ ತುಲನೆ ಮಾಡಿ ನೋಡುವ ನಿಟ್ಟಿನಲ್ಲಿ ವಿಳಂಬ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.
ಜೂನ್ 14ರಂದು ಸುಶಾಂತ್ ಮುಂಬೈ ಅಪಾರ್ಟ್ ಮೆಂಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ತಾನು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇನೆ ಎಂದು ನಟ ತನ್ನ ಗೆಳೆಯರು, ಆಪ್ತರಲ್ಲಿ ಹೇಳಿಕೊಂಡಿರುವುದಾಗಿ ವರದಿ ತಿಳಿಸಿದೆ.
ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು, ಕುಟುಂಬ ಸದಸ್ಯರು, ಪ್ರೇಯಸಿ ರಿಯಾ ಚಕ್ರವರ್ತಿ, ಆಪ್ತ ಗೆಳೆಯರು, ಸಹೋದ್ಯೋಗಿಗಳು ಸೇರಿದಂತೆ ಸುಮಾರು 35 ಮಂದಿಯನ್ನು ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದಾರೆ.