Advertisement

ನಟ ಸುಶಾಂತ್‌ ಸಿಂಗ್‌ ಆತ್ಮಹತ್ಯೆ ಮಾಡಿಲ್ಲ ; ಕೊಲೆ?

02:28 AM Jun 16, 2020 | Hari Prasad |

ಪಟ್ನಾ/ಮುಂಬಯಿ: ‘ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಮಾಡಿಕೊಂಡಿಲ್ಲ.

Advertisement

ಅವರನ್ನು ಯಾರೋ ಕೊಲೆ ಮಾಡಿದ್ದಾರೆ’ ಎಂದು ಆರೋಪಿಸಿರುವ ಮೃತ ನಟನ ಸೋದರ ಮಾವ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರಿಗೆ ಮನವಿ ಮಾಡಿದ್ದಾರೆ.

ಮುಂಬಯಿಯಲ್ಲಿ ರವಿವಾರ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ನಟ ಸುಶಾಂತ್‌ ಮೃತದೇಹ ಪತ್ತೆಯಾಗಿತ್ತು.

ಸಾವಿನ ಕುರಿತು ಪಟ್ನಾದಲ್ಲಿನ ಅವರ ಕುಟುಂಬ ಅನುಮಾನ ವ್ಯಕ್ತಪಡಿಸಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರೆ ನಾವು ನಂಬುವುದಿಲ್ಲ. ಪ್ರಕರಣದ ಕುರಿತು ಹೆಚ್ಚಿನ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಸುಶಾಂತ್‌ರ ಮಾವ, ಪ್ರಸ್ತುತ ಹರಿಯಾಣ ಮುಖ್ಯಮಂತ್ರಿಗಳ ಕಚೇರಿಯಲ್ಲಿ ವಿಶೇಷ ಅಧಿಕಾರಿಯಾಗಿ ನಿಯೋಜನೆಗೊಂಡಿರುವ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಒ.ಪಿ.ಸಿಂಗ್‌ ಕೂಡ ಅಳಿಯನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ಸೋಮವಾರ ಪಟ್ನಾದಿಂದ ಸುಶಾಂತ್‌ ತಂದೆ ಹಾಗೂ ಸಂಬಂಧಿಕರು ಮುಂಬಯಿಗೆ ಆಗಮಿ ಸಿದ ಬಳಿಕ ವಿಲೆ ಪಾರ್ಲೆಯಲ್ಲಿನ ಪವನ್‌ ಹನ್ಸ್‌ ರುದ್ರ ಭೂಮಿಯಲ್ಲಿ ನಟನ ಅಂತ್ಯಕ್ರಿಯೆ ನೆರವೇರಿತು.

Advertisement

ಸಾವಿಗೆ ಕಾರಣ ಆತ್ಮಹತ್ಯೆ: ಮುಂಬಯಿಯ ಡಾ|ಆರ್‌.ಎನ್‌.ಕೂಪರ್‌ ಮುನ್ಸಿಪಲ್‌ ಆಸ್ಪತ್ರೆಯಲ್ಲಿ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಶವ ಪರೀಕ್ಷೆ ನಡೆದಿದೆ. ಉಸಿರಾಡಲು ಸಾಧ್ಯವಾಗದೆ ನಟ ಮೃತಪಟ್ಟಿದ್ದು, ಇದೊಂದು ಆತ್ಮಹತ್ಯೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು ನಟನ ದೇಹದ ಅಂಗಾಂಗಗಳನ್ನು ಹೆಚ್ಚುವರಿ ಪರೀಕ್ಷೆಗಾಗಿ ಜೆಜೆ ಆಸ್ಪತ್ರೆಗೆ ಕಳುಹಿಸಲಾಗಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ.

ಖನ್ನತೆಗೆ ಒಳಗಾಗಿದ್ದ ನಟ: 2019ರಲ್ಲಿ ಬಿಡುಗಡೆಯಾಗಿದ್ದ ನಿತೇಶ್‌ ತಿವಾರಿ ನಿರ್ದೇಶನದ ‘ಚಿಚೋರೆ’ ಚಿತ್ರದಲ್ಲಿ ನಟಿಸಿದ ಬಳಿಕ ಸುಶಾಂತ್‌ ಬೇರಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ನಡುವೆ ಖಿನ್ನತೆಗೆ ಒಳಗಾಗಿದ್ದ ನಟ, ಆರು ತಿಂಗಳಿಂದ ಮುಂಬಯಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸುಶಾಂತ್‌ರ ಬಾಂದ್ರಾ ನಿವಾಸದಲ್ಲಿ ಖಿನ್ನತೆ ನಿವಾರಣೆಗೆ ತೆಗೆದುಕೊಳ್ಳುವ ಮಾತ್ರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಎಚ್ಚರಿಕೆ
ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿಗೀಡಾದ ಬಳಿಕ ನೇಣು ಬಿಗಿದ ಸ್ಥಿತಿಯಲ್ಲಿದ್ದ ಅವರ ಶವವನ್ನು ತೆಗೆದು ಹಾಸಿಗೆ ಮೇಲೆ ಮಲಗಿಸಿದ್ದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಮಹಾರಾಷ್ಟ್ರ ಸೈಬರ್‌ ಪೋಲೀಸರು, ‘ಇಂತಹ ಫೋಟೋಗಳನ್ನು ಪೋಸ್ಟ್‌ ಮಾಡುವುದು ನಿಮ್ಮ ಕೆಟ್ಟ ಅಭಿರುಚಿಯನ್ನು ತೋರಿಸುತ್ತದೆ. ಈ ಫೋಟೋಗಳನ್ನು ಫಾರ್ವರ್ಡ್‌ ಮಾಡುವವರು ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next