Advertisement
ಈ ಸಂದರ್ಭದಲ್ಲಿ ಮಾತಾಡಿದ ನಾಯಕ ಸೂರ್ಯಕುಮಾರ್ ಯಾದವ್, ಕೊನೆಯ ಎರಡು ಓವರ್‌ಗಳಿಗಿಂತ 30ಕ್ಕೆ 4 ವಿಕೆಟ್, 48ಕ್ಕೆ 5 ವಿಕೆಟ್ ಕಳೆದುಕೊಂಡ ಸ್ಥಿತಿಯಲ್ಲಿದ್ದ ಭಾರತ 137ರ ತನಕ ಸಾಗಿದ್ದೇ ದೊಡ್ಡ ಸಾಧನೆ ಎಂದಿದ್ದಾರೆ.
ಭಾರತ 9 ವಿಕೆಟಿಗೆ 137 ರನ್ ಗಳಿಸಿದರೆ, ಶ್ರೀಲಂಕಾ 8 ವಿಕೆಟಿಗೆ 137 ರನ್ ಮಾಡಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತೆಂದೇ ಹೇಳಬಹುದು. 18 ಓವರ್ ಮುಕ್ತಾಯಕ್ಕೆ 4 ವಿಕೆಟಿಗೆ 129 ರನ್ ಮಾಡಿದ್ದ ಶ್ರೀಲಂಕಾ, ಅಂತಿಮ 2 ಓವರ್‌ಗಳಲ್ಲಿ 6 ವಿಕೆಟ್‌ಗಳಿಂದ 9 ರನ್ ಗಳಿಸದೇ ಹೋಯಿತು!
Related Articles
Advertisement
ಇಳಿಯುವ ಮೂಲಕ ಎಲ್ಲರ ಹುಬ್ಬೇರಿಸಿದರು. ಕೇವಲ 5 ರನ್ ನೀಡಿ, 2 ವಿಕೆಟ್ ಕಬಳಿಸಿ ಪಂದ್ಯವನ್ನು ಸೂಪರ್ ಓವರ್‌ಗೆ ಕೊಂಡೊಯ್ದರು!
ಸೂಪರ್ ಓವರ್…ಸೂಪರ್ ಓವರ್‌ನಲ್ಲೂ ಅಚ್ಚರಿ ಕಾದಿತ್ತು. ಚೆಂಡನ್ನು ವಾಷಿಂಗ್ಟನ್ ಸುಂದರ್‌ಗೆ ಹಸ್ತಾಂತರಿಸಲಾಯಿತು. ಈ ನಡೆ ಕೂಡ ಸೂಪರ್ ಹಿಟ್ ಆಯಿತು. 3 ಎಸೆತಗಳಲ್ಲಿ 2 ರನ್ನಿಗೆ ಲಂಕೆಯ ಎರಡೂ ವಿಕೆಟ್ ಬಿತ್ತು. ಬಳಿಕ ಸೂರ್ಯಕುಮಾರ್ ಮೊದಲ ಎಸೆತವನ್ನೇ ಬೌಂಡರಿಗೆ ಬಡಿದಟ್ಟಿ ಭಾರತದ ಗೆಲುವು ಸಾರಿದರು!
ಶುಕ್ರವಾರ ಏಕದಿನ ಸರಣಿ ಆರಂಭವಾಗಲಿದೆ.