Advertisement

18ಕ್ಕೆ ಸೂರ್ಯಕಾಂತ ಬಿಜೆಪಿ ಸೇರ್ಪಡೆ

12:36 PM Sep 16, 2017 | |

ಬೀದರ: ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರ ಪುತ್ರ, ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ
ನಾಗಮಾರಪಳ್ಳಿ ಮತ್ತು ಬೆಂಬಲಿಗರು ಸೆ.18 ರಂದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಗರದ ಗಣೇಶ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಸೂರ್ಯಕಾಂತ ಪಕ್ಷಕ್ಕೆ ಸೇರಲಿದ್ದು, ಪ್ರಮುಖ ನಾಯಕರು ಬರಮಾಡಿಕೊಳ್ಳುವರು ಎಂದರು.

ಸೂರ್ಯಕಾಂತ ಬಿಜೆಪಿ ಸೇರ್ಪಡೆ ಕುರಿತಂತೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಮುಖಂಡರನ್ನೊಳಗೊಂಡ ಪಕ್ಷದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ಅನುಮೋದನೆಗಾಗಿ ರಾಜ್ಯ ಕೋರ್‌ ಕಮಿಟಿಗೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಬಿಜೆಪಿ ಸಿದ್ಧಾಂತ ನಂಬಿ ಬರುವರನ್ನು ಬರಮಾಡಿಕೊಳ್ಳುವಂತೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಇತ್ತೀಚೆಗೆ ಪ್ರದೀಪ ತಾವಡೆ, ಗುರುನಾಥ ಕೊಳ್ಳೂರು ಪಕ್ಷಕ್ಕೆ ಸೇರಿದ್ದು, ಈಗ ಸೂರ್ಯಕಾಂತ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿದರು.

ಅಂದು ಬೆಳಗ್ಗೆ 11ಗಂಟೆಗೆ ನಡೆಯುವ ಈ ಸಮಾರಂಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಆರ್‌. ಅಶೋಕ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ಸಂಸದ ಶ್ರೀರಾಮಲು, ಮಾಜಿ ಸಚಿವರಾದ ರಾಜೀವಗೌಡ ಸುರಪುರ, ಗೋವಿಂದ ಕಾರಜೋಳ ಮತ್ತಿತರ ಮುಖಂಡರು ಭಾಗವಹಿಸುವರು. ಜಿಲ್ಲೆಯಿಂದ ಸುಮಾರು 20 ಸಾವಿರ ಕಾರ್ಯಕರ್ತರು, ನಾಗಮಾರಪಳ್ಳಿ
ಅವರ ಅಭಿಮಾನಿಗಳು ಸೇರಲಿದ್ದಾರೆ ಎಂದು ಹೇಳಿದರು.

ಸಂಸದ ಭಗವಂತ ಖೂಬಾ, ಪ್ರಧಾನ ಕಾರ್ಯದರ್ಶಿಗಳಾದ ಜಯಕುಮಾರ ಕಾಂಗೆ, ಬಾಬುರಾವ್‌ ಕಾರಬಾರಿ, ಜಿಲ್ಲಾ ಚುನಾವಣಾ
ಉಸ್ತುವಾರಿ ಶಿವರಾಜ ಗಂದಗೆ, ಕಬ್ಬು ಬೆಳೆಗಾರರ ಪ್ರಕೋಷ್ಠದ ಡಿ.ಕೆ. ಸಿದ್ರಾಮ್‌ ಇದ್ದರು. ಪ್ರಧಾನಿಯಿಂದ ರೈಲ್ವೆ ಲೈನ್‌ ಲೋಕಾರ್ಪಣೆ

Advertisement

ಬಹು ನಿರೀಕ್ಷಿತ ಬೀದರ-ಕಲಬುರಗಿ ರೈಲ್ವೆ ಲೈನ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಡಿಸೆಂಬರ್‌ ಅಂತ್ಯಕ್ಕೆ ಪ್ರಧಾನಿಗಳಿಂದ
ಪ್ರಯಾಣಿಕರ ಸೇವೆಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಸಂಸದ ಭಗವಂತ ಖೂಬಾ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈಲ್ವೆ ಕಾಮಗಾರಿಯ ಸಣ್ಣಪುಟ್ಟ ಕೆಲಸ ನಡೆಯುತ್ತಿದ್ದು, ಸೆಪ್ಟೆಂಬರ್‌ ಕೊನೆಯಲ್ಲಿ ಸುರಕ್ಷತೆ ಕುರಿತು ಸಿಆರ್‌ಎಸ್‌ ತಿಂಗಳ ಕಾಲ ಪರಿಶೀಲನೆ ನಡೆಸಿ ರೈಲ್ವೆ ಮಂಡಳಿಗೆ ವರದಿ ಸಲ್ಲಿಸುವರು. ಈಗಾಗಲೇ ಸಿಕಿಂದ್ರಾಬಾದ್‌
ದಕ್ಷಿಣ ಮಧ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರ ಜತೆಗೆ ಈ ಬಗ್ಗೆ ಚರ್ಚಿಸಿದ್ದೇನೆ. ಈ ಹೊಸ ಮಾರ್ಗದಲ್ಲಿ ನಿತ್ಯ ಮೂರು ವೇಗದೂತ
ರೈಲುಗಳು ಮತ್ತು ಒಂದು ಸಲ ಸಾಮಾನ್ಯ ರೈಲು ಚಲಿಸುವಂತೆ ಕ್ರಮ ಕೈಗೊಳ್ಳಲು ತಿಳಿಸಿರುವುದಾಗಿ ಹೇಳಿದರು. ಬೀದರನಿಂದ
ನಾಗರಿಕ ವಿಮಾನಯಾನ ಆರಂಭ ಕುರಿತಂತೆ ಸೋಮವಾರ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ಮತ್ತು ಜಿಎಂಆರ್‌ ಕಾರ್ಯದರ್ಶಿಗಳ ಜತೆಗೆ ಚರ್ಚೆಯಾಗಿದ್ದು, ಶೀಘ್ರದಲ್ಲಿ ತಾಂತ್ರಿಕ ಸಮಸ್ಯೆ ಪರಿಹಾರಗೊಳ್ಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next