Advertisement

ಅ.25ರಂದು ದೀಪಾವಳಿ ವೇಳೆ ಸೂರ್ಯಗ್ರಹಣ

07:49 PM Oct 11, 2022 | Team Udayavani |

ಕೋಲ್ಕತ: ದೀಪಾವಳಿ ಹಬ್ಬದ ಸಮಯದಲ್ಲೇ ಅಂದರೆ ಅ.25ರಂದು ಭಾಗಶಃ ಸೂರ್ಯಗ್ರಹಣವಿರುತ್ತದೆ. ಇದು ದೇಶದ ಅಲ್ಲಲ್ಲಿ ಕಾಣಸಿಗುತ್ತದೆ. ದೇಶದ ಪೂರ್ವಭಾಗದ ಕೆಲನಗರಗಳಲ್ಲಿ ಇದು ಅತ್ಯಲ್ಪವಾಗಿ ಗೋಚರವಾಗುತ್ತದೆ.

Advertisement

2022ರಲ್ಲಿ ಈ ಭಾಗದ ಜನರು 2ನೇ ಬಾರಿಗೆ ಇಂತಹದ್ದೊಂದು ಗ್ರಹಣಕ್ಕೆ ಮುಖಾಮುಖಿಯಾಗುತ್ತಿದ್ದಾರೆ.

ಇನ್ನು ಉತ್ತರ, ಪಶ್ಚಿಮ ಭಾಗಗಳಲ್ಲೂ ನೋಡಲು ಅವಕಾಶವಿದೆ. ಆದರೆ ಈಶಾನ್ಯ ಭಾರತದ ರಾಜ್ಯಗಳ ಜನರಿಗೆ ಈ ಗಗನ ಕೌತುಕವನ್ನು ವೀಕ್ಷಿಸಲು ಸಾಧ್ಯವಿಲ್ಲ. ಕಾರಣ ಈ ಭಾಗದಲ್ಲಿ ಸೂರ್ಯಾಸ್ತವಾದ ಮೇಲೆ ಗ್ರಹಣ ಸಂಭವಿಸುತ್ತದೆ.

ಭಾರತ ಹೊರತುಪಡಿಸಿದರೆ ಯೂರೋಪಿನ ಬಹುತೇಕ ಭಾಗಗಳು, ಉತ್ತರ ಆಫ್ರಿಕಾ, ಮಧ್ಯಪ್ರಾಚ್ಯ, ಏಷ್ಯಾದ ಕೆಲವು ದೇಶಗಳಲ್ಲೂ ಕಾಣಿಸುತ್ತದೆ.

ಭಾರತೀಯ ಕಾಲಮಾನದ ಪ್ರಕಾರ ಅ.25ರ ಮಧ್ಯಾಹ್ನ 2.29ಕ್ಕೆ ಗ್ರಹಣ ಶುರುವಾಗುತ್ತದೆ. ರಷ್ಯಾದಲ್ಲಿ ಸಂಜೆ 4.30ರ ಹೊತ್ತಿಗೆ ಗರಿಷ್ಠ ಪ್ರಮಾಣದಲ್ಲಿ ಕಾಣಸಿಕ್ಕುತ್ತದೆ.

Advertisement

ಅರೇಬಿಯನ್‌ ಸಮುದ್ರಭಾಗದಲ್ಲಿ ಸಂಜೆ 6.32ಕ್ಕೆ ಗ್ರಹಣ ಮುಕ್ತಾಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next