Advertisement

ಸರ್ವೆ: ರಸ್ತೆ, ಚರಂಡಿಗೆ ಹಾಕಿದ ಮಣ್ಣು ತೆರವು

09:59 PM May 27, 2019 | mahesh |

ಸವಣೂರು: ಸರ್ವೆ ಗ್ರಾಮದ ಸರ್ವೆ ಕಾಡಬಾಗಿಲು ಎಂಬಲ್ಲಿ ಖಾಸಗಿ ಕಾಮಗಾರಿ ಭಾಗವಾಗಿ ರಸ್ತೆ ಹಾಗೂ ಚರಂಡಿಗೆ ಹಾಕಿದ್ದ ಮಣ್ಣನ್ನು ಖಾಸಗಿ ಸಂಸ್ಥೆಯೇ ತೆರವು ಮಾಡಿದೆ. ರಾಜ್ಯ ಹೆದ್ದಾರಿ 100ಕ್ಕೆ ಹೊಂದಿಕೊಂಡಂತಿರುವ 8 ಎಕರೆ ವಿಸ್ತೀರ್ಣದ ಗುಡ್ಡವನ್ನು ವಾಣಿಜ್ಯ ಬಳಕೆಯ ಉದ್ದೇಶಕ್ಕಾಗಿ ಸಮತಟ್ಟುಗೊಳಿಸುವ ಕಾರ್ಯ ನಡೆದಿತ್ತು. ಕಾಮಗಾರಿ ಸಂದರ್ಭ ಹೆದ್ದಾರಿಯ ಚರಂಡಿಗಳನ್ನು ಮಣ್ಣಿನಿಂದ ಮುಚ್ಚಿದ್ದು, ಅದನ್ನು ಕೂಡಲೇ ತೆರವುಗೊಳಿಸುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿತ್ತು.

Advertisement

ಈ ಕುರಿತು “ಉದಯವಾಣಿ; ಸುದಿನ ಮೇ 21ರಂದು ಸಚಿತ್ರ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. ಈ ಸಮಸ್ಯೆಯನ್ನು ಗಮನಿಸಿದ ಲೋಕೋಪಯೋಗಿ ಇಲಾಖೆ, ಖಾಸಗಿ ನಿರ್ಮಾಣ ಸಂಸ್ಥೆಗೆ ನೋಟಿಸ್‌ ಜಾರಿಗೊಳಿಸಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರಿಂದ ಸೋಮವಾರ ಖಾಸಗಿ ನಿರ್ಮಾಣ ಸಂಸ್ಥೆಯೇ ಚರಂಡಿಗೆ ಹಾಕಿದ್ದ ಮಣ್ಣನ್ನು ತೆರವು ಮಾಡಿ, ಮಳೆ ನೀರು ಹರಿಯಲು ಅನುಕೂಲ ಮಾಡಿಕೊಟ್ಟಿದೆ.

ಕಾಡಬಾಗಿಲು ತಿರುವಿನಲ್ಲಿ ರಸ್ತೆಗೆ ಹೊಂದಿಕೊಂಡಂತೆ ಹಲವಾರು ಅಪಾಯಕಾರಿ ಮರಗಳಿದ್ದು, ಈ ಬಾರಿಯ ಮೊದಲ ಮಳೆಗೆ ಮರವೊಂದು ರಸ್ತೆಗೆ ಬಿದ್ದಿದೆ. ಇನ್ನಷ್ಟು ಮರಗಳು ಅಪಾಯಕಾರಿ ಸ್ಥಿತಿಯಲ್ಲಿ ರಸ್ತೆಯತ್ತ ವಾಲಿಕೊಂಡಿದ್ದು, ಗಾಳಿ ಮಳೆ ಬಂದರೆ ಯಾವುದೇ ಕ್ಷಣದಲ್ಲಿ ಧರೆಗುರುಳುವ ಸಾಧ್ಯತೆ ಇದ್ದು, ಅವುಗಳನ್ನೂ ತೆರವುಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next